Advertisement

70 ಕೊರೊವೆಂಟ್ ವೆಂಟಿಲೇಟರ್ ಕೊಡುಗೆ ನೀಡಿದ ಜೆಕ್ ರಿಪಬ್ಲಿಕ್ ಕಾನ್ಸುಲೇಟ್

02:17 PM May 03, 2021 | Team Udayavani |

ಬೆಂಗಳೂರು: ಬೆಂಗಳೂರಿನ ಜೆಕ್ ರಿಪಬ್ಲಿಕ್ ಕಾನ್ಸುಲೇಟ್ ಕಚೇರಿಯ ವತಿಯಿಂದ ರಾಜ್ಯಕ್ಕೆ 70 ಕೊರೊವೆಂಟ್ ವೆಂಟಿಲೇಟರ್ ಗಳನ್ನು ಕೊಡುಗೆಯಾಗಿ ನೀಡಲು ಮುಂದಾಗಿದ್ದಾರೆ.

Advertisement

ಈ ಸಂಬಂಧ  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಇಂದು  ಭೇಟಿ ಮಾಡಿದ ಜೆಕ್ ರಿಪಬ್ಲಿಕ್ ನ ಕಾನ್ಸಲ್  ಸಿ.ಎಸ್.ಪ್ರಾಕಾಶ್ , ಮೈಕೋ ಮೆಡಿಕಲ್ ಎಸ್.ಆರ್.ಒ ಸಂಸ್ಥೆಯು ಈ ವೆಂಟಿಲೇಟರ್ ಗಳನ್ನು ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ನೆರವಿಗೆಂದು  ಕೊಡುಗೆಯಾಗಿ ನೀಡಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಪೆರು ಕಾನ್ಸುಲೇಟ್ ಕಚೇರಿಯ ವಿಕ್ರಂ ವಿಶ್ವನಾಥ್, ರುವಾಂಡಾ ಹಾನರರಿ ಕೌನ್ಸಿಲ್ ಮೋಹನ್ ಸುರೇಶ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next