Advertisement

ಬಾಂಗ್ಲಾ: ಮೋರಾ ಚಂಡಮಾರುತಕ್ಕೆ ಆರು ಬಲಿ; 3 ಲಕ್ಷ ಜನರ ಸ್ಥಳಾಂತರ

03:35 PM May 30, 2017 | Team Udayavani |

ಢಾಕಾ: ಗಂಟೆಗೆ 150 ಕಿ.ಮೀ. ವೇಗದಲ್ಲಿ ಮುನ್ನುಗ್ಗಿ ಬಂದ ಮೋರಾ ಚಂಡಮಾರುತ ಇಂದು ಬಾಂಗ್ಲಾದೇಶದ ಮೇಲೆ ಅಪ್ಪಳಿಸಿತು. ವಿನಾಶಕಾರಿಯಾಗಿರುವ ಮೋರಾ ಚಂಡಮಾರುತದ ಮಾರಕ ಹೊಡೆತಕ್ಕೆ ನೂರಾರು ಮನೆಗಳು ಹಾನಿಗೀಡಾಗಿವೆ; ಕರಾವಳಿ ಪ್ರದೇಶಗಳ ಸುಮಾರು 3 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈ ತನಕ ಆರು ಮಂದಿ ಬಲಿಯಾಗಿರುವುದಾಗಿ ವರದಿಯಾಗಿದೆ.

Advertisement

ಬಾಂಗ್ಲಾದೇಶದ ಹವಾಮಾನ ಇಲಾಖೆಯ ವಿಶೇಷ ಬುಲೆಟಿನ್‌ ಪ್ರಕಾರ ಮೋರಾ ಚಂಡಮಾರುತ ಉತ್ತರ ಕೊಲ್ಲಿಯ ಉತ್ತರಕ್ಕೆ ಸಾಗುತ್ತಿದ್ದು ಅದು ಚಿತ್ತಗಾಂಗ್‌ – ಕೋಕ್ಸ್‌ ಬಜಾರ್‌ ಕರಾವಳಿಯನ್ನು ಸ್ಥಳೀಯ ಕಾಲಮಾನ ಬೆಳಗ್ಗೆ 6 ಗಂಟೆಯ ಹೊತ್ತಿಗೆ ದಾಟಿದೆ. ಇಲ್ಲಿಂದ ಅದು ಉತ್ತರಾಭಿಮುಖವಾಗಿ ಸಾಗುತ್ತಿದೆ ಎಂದು ಬುಲೆಟಿನ್‌ ತಿಳಿಸಿದೆ.

ಪ್ರಬಲವಾದ ಗಾಳಿಯೊಂದಿಗೆ ಮೋರಾ ಚಂಡಮಾರುತವು ಉತ್ತರ ಕೊಲ್ಲಿ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಬಾಂಗ್ಲಾದೇಶದ ಸಾಗರ ಬಂದರುಗಳ ಉದ್ದಕ್ಕೂ ಜಡಿ ಮಳೆಯನ್ನು ಉಂಟು ಮಾಡಲಿದೆ ಎಂದು ಡೈಲಿ ಸ್ಟಾರ್‌ ವರದಿ ಮಾಡಿದೆ. 

ಗಾಳಿಯ ವೇಗವು ಗಂಟೆಗೆ 130ರಿಂದ 150 ಕಿ.ಮೀ. ವೇಗದಲ್ಲಿದ್ದು ವ್ಯಾಪಕ ಹಾನಿ ಉಂಟುಮಾಡುವಷ್ಟು ಅದು ಪ್ರಬಲವಾಗಿರುತ್ತದೆ ಎಂಬ ಮುನ್ನೆಚ್ಚರಿಕೆಯನ್ನು ಕೂಡ ನೀಡಲಾಗಿದೆ.

ಚಿತ್ತಗಾಂಗ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕಾಕ್ಸ್‌ ಬಜಾರ್‌ ವಿಮಾನ ನಿಲ್ದಾಣಗಳಿಗೆ ಹೋಗುವ ಮತ್ತು ಅಲ್ಲಿಂದ ಹೊರಡುವ ಎಲ್ಲ ವಿಮಾನಗಳ ಹಾರಾಟವನ್ನು ಅಮಾನತುಗೊಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next