Advertisement

ಸ್ವಾತಂತ್ರ್ಯ ಸೇನಾನಿಗಳಿಗೆ “ಸೈಕಲ್‌ ಯಾತ್ರೆ’ನಮನ

05:32 PM Apr 09, 2022 | Team Udayavani |

ಶಹಾಪುರ: ಭಾರತದ ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಅಮೃತ ಮಹೋತ್ಸವ ನಿಮಿತ್ತ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಸ್ವಾತಂತ್ರ್ಯ ಸೇನಾನಿಗಳಿಗೆ ನಮನ ಸಲ್ಲಿಸುವ ಪ್ರಯುಕ್ತ ಬೀದರ ಜಿಲ್ಲೆಯ ಔರಾದ ತಾಲೂಕಿನ ಕೊಳ್ಳೂರ ಗ್ರಾಮದ ಅವಳಿ ಸಹೋದರರು ಔರಾದನ ಅಮರೇಶ್ವರ ದೇವಾಸ್ಥಾನದಿಂದ ಚಾಮರಾಜ ನಗರದ ಮಲೆ ಮಹದೇಶ್ವರ ಬೆಟ್ಟದವರೆಗೆ ಸೈಕಲ್‌ ಯಾತ್ರೆ ಕೈಗೊಂಡಿದ್ದಾರೆ.

Advertisement

ಅರುಣ್‌ ರಾಕಲೇ ಮತ್ತು ಕರುಣ ರಾಕಲೇ ಸುಮಾರು 1,250 ಕಿ.ಮೀ ಸೈಕಲ್‌ ಯಾತ್ರೆ ಕೈಗೊಂಡಿದ್ದು, ನಗರಕ್ಕೆ ಆಗಮಿಸಿದ ಬಾಲಕರಿಬ್ಬರನ್ನು ನಗರದಟ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಶಿಕ್ಷಕ ವೃಂದ ಮತ್ತು ಯುವಕರು ಅದ್ಧೂರಿಯಾಗಿ ಬರಮಾಡಿಕೊಂಡರು. ಸಿಬಿ ಕಮಾನ್‌ ದಿಂದ ಅವರನ್ನು ಮೆರವಣಿಗೆ ಮೂಲಕ ಚರಬಸವೇಶ್ವರ ಗದ್ದುಗೆವರೆಗೂ ಕರೆ ತಂದರು. ಗದ್ದುಗೆಯಲ್ಲಿ ಅವಳಿ ಸಹೋದರರನ್ನು ಸನ್ಮಾನಿಸಲಾಯಿತು.

ಕರವೇ ಉ.ಕ ಅಧ್ಯಕ್ಷ ಶರಣು ಗದ್ದುಗೆ ಮಾತನಾಡಿ, ಸ್ವಾತಂತ್ರ್ಯ ವೀರರ ಸ್ಮರಣಾರ್ಥ ಅಮೃತ ಮಹೋತ್ಸವ ಗಳಿಗೆಯಲ್ಲಿ ಸಣ್ಣ ವಯಸ್ಸಿನಲ್ಲಿಯೇ ಸೈಕಲ್‌ ಯಾತ್ರೆ ಮೂಲಕ ನಮನ ಸಲ್ಲಿಸುತ್ತಿರುವ ಬಾಲಕರ ಸಂಕಲ್ಪ-ದೇಶಪ್ರೇಮ ಎಲ್ಲರಿಗೂ ಮಾದರಿ. 9ನೇ ತರಗತಿಯಲ್ಲಿ ಅಭ್ಯಸಿಸುತ್ತಿರುವ ಪುಟ್ಟ ಬಾಲಕರಿಬ್ಬರ ಯಾತ್ರಾ ನಮನ ಮೆಚ್ಚವಂಥಹದ್ದು ಎಂದರು.

ಈ ವೇಳೆ ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಅನೀಲ್‌ ಬಿರಾದಾರ, ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಸುಧಾಕರ ಗುಡಿ, ಆರೆಸ್ಸೆಸ್‌ ಪ್ರಮುಖ ಸುಧಿಧೀರ ಚಿಂಚೋಳಿ, ಶಿಕ್ಷಕ ಲಕ್ಷ್ಮಣ ಲಾಳಸಗೇರಿ, ಶ್ರೀರಾಮಭಟ್‌ ಜೋಶಿ, ಅಡಿವೆಪ್ಪ ಜಾಕಾ, ಗುರು ಮದ್ದೀನ್‌, ಶಂಭುಲಿಂಗ ಗೋಗಿ, ಸುರೇಶ ಅರುಣಿ, ಸತೀಶ ವಿಭೂತೆ, ಬಸವರಾಜ ಗೋಗಿ, ಎಬಿವಿಪಿ ಅರವಿಂದ ಉಪ್ಪಿನ್‌, ಬಸವರಾಜ ಹೆಮ್ಮಡಗಿ, ಸಿದ್ದು ಆನೇಗುಂದಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next