Advertisement
ಪುರುಷರ ರಿಂಗ್ಸ್ ಜಿಮ್ನಾಸ್ಟಿಕ್ ಫೈನಲ್‌ನಲ್ಲಿ ಪಾಲ್ಗೊಂಡಿದ್ದ ರಾಕೇಶ್ ಉತ್ತಮ ಪ್ರದರ್ಶನವನ್ನೇ ನೀಡಿದರು. ಆದರೆ ಪ್ರದರ್ಶನ ಮುಗಿಸಿ ನೆಲಕ್ಕಿಳಿಯುವಾಗ ಅವರ ಬೆನ್ನು ಮ್ಯಾಟಿಗೆ ಬಡಿಯಿತು. ಹೀಗಾಗಿ ಅವರು ಅಂಕ ಕಡಿತಕ್ಕೆ ಒಳಗಾದ ಕಾರಣ ಬೆಲೆ ತೆರಬೇಕಾಯಿತು. ಒಟ್ಟಾರೆ ಕೇವಲ 12.933 ಅಂಕಗಳಷ್ಟೇ ಲಭಿಸಿದ್ದ ರಾಕೇಶ್ 8ನೇ ಸ್ಥಾನ ಪಡೆದುಕೊಂಡರು.“1.300 ಅಂಕಗಳನ್ನು ನಾನು ಕ್ರ್ಯಾಶ್ ಲ್ಯಾಂಡಿಂಗ್‌ಗಾಗಿ ಕಳೆದುಕೊಂಡೆ. ಲ್ಯಾಡಿಂಗ್‌ಗಾಗಿ ತಯಾರಿ ನಡೆಸುವಾಗಿನ ತಪ್ಪಿಗಾಗಿ ಮತ್ತು ಲ್ಯಾಂಡಿಂಗ್ ವೇಳೆ ಬಿದ್ದಿದ್ದಕ್ಕಾಗಿ ನಾನು ಅಂಕ ಕಡಿತಕ್ಕೆ ಒಳಗಾದೆ’ ಎಂದು ಸ್ಪರ್ಧೆಯ ಬಳಿಕ ರಾಕೇಶ್ ಪ್ರತಿಕ್ರಿಯಿಸಿದರು.