Advertisement
ಖುಷಿºàರ್ 1 ಗಂಟೆ, 39 ನಿಮಿಷ, 21 ಸೆಕೆಂಡ್‌ಗಳಲ್ಲಿ ಅಂತಿಮ ಗೆರೆ ತಲುಪಿದರು. ಆಸ್ಟ್ರೇಲಿಯದ ಜೆಮಿಮಾ ಮೊಂಟಾಗ್ ಚಿನ್ನದ ನಗೆ ಬೀರಿದರು. ಅವರು 1 ಗಂಟೆ, 32 ನಿಮಿಷ, 50 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು.ಜೆಮಿಮಾ ಅವರನ್ನು ಹಿಂಬಾಲಿಸಿ ಸಾಗಿದ ನ್ಯೂಜಿಲ್ಯಾಂಡ್‌ನ ಅಲಾನಾ ಬಾರ್ಬರ್ ಅವರು 1:34:18 ಸೆಕೆಂಡ್‌ಗಳಲ್ಲಿ ಓಟ ಮುಗಿಸಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರೆ, ವೇಲ್ಸ್‌ನ ಬೆಥನ್ ಡೇವೀಸ್ 1:36:08 ಕಾಲಾವಧಿಯೊಂದಿಗೆ ಕಂಚು ಗೆದ್ದರು.
ಪುರುಷರ ವಿಭಾಗದ 20 ಕಿ.ಮೀ. ವಾಕ್‌ರೇಸ್‌ನಲ್ಲೂ ಭಾರತದ ನಿರಾಸೆ ಮುಂದುವರಿಯಿತು. ಭಾರತದ ವಾಕರ್ ಮನೀಶ್ ಸಿಂಗ್ ಮತ್ತು ಇರ್ಫಾನ್ ಕೊಲಿಥಮ್ ಥೋಡಿ ಕ್ರಮವಾಗಿ 6ನೇ ಮತ್ತು 13ನೇ ಸ್ಥಾನ ಪಡೆದುಕೊಂಡರು.ಮನೀಶ್1 ಗಂಟೆ, 22 ನಿಮಿಷ, 22 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 6ನೇ ಸ್ಥಾನಿಗರಾದರೆ, ಇರ್ಫಾನ್ ಈ ಸ್ಪರ್ಧೆಯಲ್ಲಿ ತಡವಾಗಿ ನಡಿಗೆ ಮುಗಿಸಿದ ಮೂರನೆಯವನಾಗಿ ಗುರುತಿಸಿಕೊಂಡರು. ವಾಕ್‌ರೇಸ್‌ನಲ್ಲಿ ಒಟ್ಟು 15 ಸ್ಪರ್ಧಿಗಳು ಪಾಲ್ಗೊಂಡಿದ್ದು, 1:27:34 ಸೆಕೆಂಡ್‌ಗಳಲ್ಲಿ ಅಂತಿಮ ಗೆರೆ ತಲುಪಿದ ಇರ್ಫಾನ್ 13ನೇ ಸ್ಥಾನಿಗರಾದರು. 1:19:34 ಸೆಕೆಂಡ್‌ಗಳಲ್ಲಿ ನಡಿಗೆ ಮುಗಿಸಿದ ಆಸ್ಟ್ರೇಲಿಯದ ಡೇನ್ ಬರ್ಡ್ ಸ್ಮಿತ್ ಚಾಂಪಿಯನ್ ಎನಿಸಿಕೊಂಡರು. ಸ್ಮಿತ್‌ಗೆ ತೀವ್ರ ಪೈಪೋಟಿ ನೀಡಿ 1:19:38 ಸೆಕೆಂಡ್‌ಗಳಲ್ಲಿ ಅಂತಿಮ ಗುರಿ ಮುಟ್ಟಿದ ಇಂಗ್ಲೆಂಡ್‌ನ ಟಾಮ್ ಬೋಸ್ವರ್ತ್ ಬೆಳ್ಳಿಗೆ ಕೊರಳೊಡ್ಡಿದರೆ, ಕೀನ್ಯಾದ ಸ್ಯಾಮ್ಯುಯೆಲ್ ಐರೈ ಗತಿಂಬಾ ಕಂಚು ಗೆದ್ದರು (1:19:51 ಸೆಕೆಂಡ್).