ಇದರೊಂದಿಗೆ ಮಣಿಕಾ ಪಾಲ್ಗೊಂಡ ಎಲ್ಲ 4 ಸ್ಪರ್ಧೆಗಳಲ್ಲೂ ಪದಕ ಗೆದ್ದ ಸಾಧನೆಗೈದಂತಾಯಿತು. ವನಿತಾ ಸಿಂಗಲ್ಸ್‌ನಲ್ಲಿ ಐತಿಹಾಸಿಕ ಚಿನ್ನ, ತಂಡ ಸ್ಪರ್ಧೆಯಲ್ಲಿ ಚಿನ್ನ ಹಾಗೂ ವನಿತಾ ಡಬಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಹೆಗ್ಗಳಿಕೆ ಮಣಿಕಾ ಬಾತ್ರಾ ಅವರದು.
Advertisement
ಅಂತಿಮ ದಿನದ ಅವಳಿ ಕಂಚಿನ ಬೇಟೆಯೊಂದಿಗೆ ಭಾರತ ಗೋಲ್ಡ್‌ಕೋಸ್ಟ್ ಟಿಟಿಯಲ್ಲಿ ಸರ್ವಾಧಿಕ 8 ಪದಕ ಗೆದ್ದು ಅಗ್ರಸ್ಥಾನಿಯಾಗಿ ಹೊರಹೊಮ್ಮಿತು. ಇದರಲ್ಲಿ 3 ಚಿನ್ನ, 2 ಬೆಳ್ಳಿ ಹಾಗೂ 3 ಕಂಚಿನ ಪದಕಗಳು ಸೇರಿವೆ. ಕಾಮನ್ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಭಾರತ ಅತ್ಯಧಿಕ ಪದಕ ಗೆದ್ದು ಕೂಟದ ಅಗ್ರಸ್ಥಾನಿಯಾಗಿ ಹೊರಹೊಮ್ಮಿದ್ದು ಇದೇ ಮೊದಲು.
ರವಿವಾರ ಕೊನೆಯದಾಗಿ ನಡೆದ ಪುರುಷರ ಸಿಂಗಲ್ಸ್‌ನಲ್ಲಿ ಅಚಂತ ಶರತ್ ಕಮಲ್ ಇಂಗ್ಲೆಂಡಿನ ಸಾಮ್ಯುಯೆಲ್ ವಾಕರ್ ಅವರನ್ನು 4-1 ಅಂತರದಿಂದ ಮಣಿಸಿ ಕಂಚಿನ ಪದಕ ಜಯಿಸಿದರು. ಶರತ್ ಕಮಲ್ ಗೆಲುವಿನ ಅಂತರ 11-7, 11-9, 9-11, 11-6, 12-10. ಇದು ಗೋಲ್ಡ್‌ಕೋಸ್ಟ್ ನಲ್ಲಿ ಶರತ್ ಕಮಲ್‌ಗೆ ಒಲಿದ 3ನೇ ಪದಕ. ಬಂಗಾರ ವಿಜೇತ ಪುರುಷರ ತಂಡದಲ್ಲಿ ಹಾಗೂ ಪುರುಷರ ಡಬಲ್ಸ್‌ನಲ್ಲಿ ಶರತ್ ಕಮಲ್ ಪದಕ ಜಯಿಸಿದ್ದರು.ಮಿಶ್ರ ಡಬಲ್ಸ್ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಮಣಿಕಾ ಬಾತ್ರಾ, “2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಸತಿಯನ್ ಜತೆಗೂಡಿ ಆಡಬೇಕು. ಎಂದರು.