Advertisement
ಚುನಾವಣಾ ಅಕ್ರಮ ತಡೆಯಲು ಹತ್ತು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿರುವ ಚುನಾವಣಾ ಆಯೋಗ, ಈ ಬಾರಿ ಎಲ್ಲರೂ ಬಳಸುವ ಮೊಬೈಲ್ ತಂತ್ರಜ್ಞಾನ ಬಳಸಿಕೊಂಡು ಸಾರ್ವಜನಿಕರ ಸಹಕಾರದೊಂದಿಗೆ ಚುನಾವಣಾ ಅಕ್ರಮ ತಡೆಯಲು ಮುಂದಾಗಿದೆ.
Related Articles
Advertisement
ಈ ಹಿಂದೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದರೆ ಈ ಕುರಿತು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿನ ನೀತಿ ಸಂಹಿತೆ ಪಾಲನೆ ತಂಡಕ್ಕೆ ಮಾಹಿತಿ ನೀಡಬೇಕಿತ್ತು. ಈ ಸಮಯದಲ್ಲಿ ಅಧಿಕಾರಿಗಳು ತಾರತಮ್ಯ ಮಾಡುವ ಹಾಗೂ ಮಾಹಿತಿ ನೀಡಿದವರ ಹೆಸರನ್ನು ಬಹಿರಂಗ ಪಡಿಸುವ ಸಾಧ್ಯತೆಯಿತ್ತು. ಹೀಗಾಗಿ ಅನೇಕ ಸಾರ್ವಜನಿಕರು ನೀತಿ ಸಂಹಿತೆ ಉಲ್ಲಂಘನೆಯು ತಮ್ಮ ಕಣ್ಮುಂದೆ ನಡೆದರೂ ಅದನ್ನು ಅಧಿಕಾರಿಗಳಿಗೆ ತಿಳಿಸುತ್ತಿರಲಿಲ್ಲ. ಈ ಆ್ಯಪ್‌ನಲ್ಲಿ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡುವುದರಿಂದ ಸಾರ್ವಜನಿಕರು ನಿರ್ಭಿತಿಯಿಂದ ಮಾಹಿತಿ ಹಾಗೂ ದೂರು ನೀಡಬಹುದಾಗಿದೆ.
ಚುನಾವಣಾ ಆಯೋಗದ ಆದೇಶದಂತೆ ಜಿಲ್ಲಾಡಳಿತಗಳು ಅವುಗಳ ಅನುಷ್ಠಾನಕ್ಕೆ ಸಿದ್ಧತೆ ನಡೆಸಿವೆ. ವಿವಿಧ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರಿಂದ ಆಗುವ ಚುನಾವಣಾ ನೀತಿ ಸಂಹಿತೆ ತಡೆಗೆ ಜಿಲ್ಲಾಡಳಿತ ವಿವಿಧ ಸಮಿತಿಗಳನ್ನು ರಚಿಸಿ ಕಣ್ಗಾವಲಿಟ್ಟಿದೆ. ಅದರ ಜೊತೆಗೆ ಆಯೋಗಕ್ಕೆ ನೇರವಾಗಿ ಮಾಹಿತಿ ರವಾನಿಸುವ ಈ ಹೊಸ ಆ್ಯಪ್ ವ್ಯವಸ್ಥೆ ಜಾರಿಗೆ ಬಂದಿದೆ.
ಜಿಲ್ಲೆಯಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶಾಕೀರಅಹ್ಮದ್ ತೊಂಡಿಖಾನ್ ಸಿವಿಜಿಲ್ ಆ್ಯಪ್‌ನ ಉಸ್ತುವಾರಿಗಳಾಗಿದ್ದಾರೆ. ಸಾರ್ವಜನಿಕರು ಈ ಆ್ಯಪ್ ಬಳಸಿಕೊಂಡು ಚುನಾವಣಾ ಅಕ್ರಮ ತಡೆಗೆ ಯಾವ ರೀತಿ ಸ್ಪಂದಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
‘ಸಿವಿಜಿಲ್’ ಎಂಬ ಹೊಸ ಆ್ಯಪ್‌ನ್ನು ಚುನಾವಣೆ ಆಯೋಗ ಬಿಡುಗಡೆಗೊಳಿಸಿದ್ದು, ನೀತಿ ಸಂಹಿತೆಉಲ್ಲಂಘನೆ ಮಾಹಿತಿ ಕುರಿತು ಸಾರ್ವಜನಿಕರು ಫೋಟೋ ಹಾಗೂ ವಿಡಿಯೋ ಹಾಕಬಹುದು. ಎಂಸಿಸಿ ಸಮಿತಿ ಗಮನಿಸಿ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದರೆ ಪ್ರಕರಣ ದಾಖಲಿಸಿಕೊಂಡು 100ನಿಮಿಷದೊಳಗೆ ದೂರು ನೀಡಿದವರಿಗೆ ಆ್ಯಪ್ ಮೂಲಕವೇ ಮಾಹಿತಿ ರವಾನಿಸುತ್ತಾರೆ. ಮಾಹಿತಿ ನೀಡುವವರು ತಮ್ಮ ಹೆಸರು ಗೌಪ್ಯವಾಗಿಡಬಹುದು.
. ಶಾಕೀರ್‌ಅಹ್ಮದ್ ತೊಂಡಿಖಾನ್,
‘ಸಿವಿಜಿಲ್’ ಆ್ಯಪ್‌ನ ಜಿಲ್ಲಾ ಉಸ್ತುವಾರಿ ಎಚ್.ಕೆ. ನಟರಾಜ