Advertisement
11 ಮರ ತೆರವಿಗೆ ಮನವಿಉಡುಪಿ ನಗರದ ಮಧ್ಯ ಭಾಗ ದಲ್ಲಿರುವ ಬನ್ನಂಜೆಯಲ್ಲಿ ಹೊಸದಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣವಾಗುತ್ತಿದ್ದು, ಇಲ್ಲಿನ ಬೃಹತ್ ಮರಗಳು ವಾಹನಗಳ ಸಂಚಾರಕ್ಕೆ ಅಡಚಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಅರಣ್ಯ ಇಲಾಖೆಗೆ 11 ಮರಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿ ದ್ದರು. ಈ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾದ ಅರಣ್ಯ ಇಲಾಖೆ ಸಿಬಂದಿ ಕಳೆದ ಮೂರು ದಿನಗಳಿಂದ ನಿಲ್ದಾಣದ ಸುತ್ತಲಿನ ಮರಗಳ ತೆರವು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ,
ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮರಗಳನ್ನು ನೆಟ್ಟು ಪರಿಸರ ಉಳಿಸುವ ಭಾಷಣ ಮಾಡಿದರೆ ಸಾಲದು. ಪರಿಸರ ಅಮೂಲ್ಯವಾದ ಸಂಪತ್ತು. ಅದನ್ನು ಸಂರಕ್ಷಿಸುವ ಕೆಲಸದಲ್ಲಿ ಅಧಿಕಾರಿಗಳು ಪ್ರಮಾಣಿಕವಾಗಿ ತೊಡಗಿಸಿಕೊಳ್ಳಬೇಕು. ಪರಿಸರ ದಿನದಂದು ಮರಗಳನ್ನು ಕಡಿಯುವ ಮೂಲಕ ಅರಣ್ಯ ಸಂರಕ್ಷಕರು ಭಕ್ಷಕರಾಗಿದ್ದಾರೆ ಎಂದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
ಕೆಎಸ್‌ಆರ್‌ಟಿಸಿಯಿಂದ 11 ಮರಗಳ ತೆರವಿಗೆ ಮನವಿ ಬಂದಿತ್ತು. ಮರಗಳ ತೆರವಿನ ಕೆಲಸ ನಾಲ್ಕೈದು ದಿನಗಳಿಂದ ನಡೆಯುತ್ತಿದೆ. ನಮಗೆ ಪರಿಸರ ದಿನಾಚರಣೆಯಂದು ಕಡಿಯುವ ಇರಾದೆ ಇರಲಿಲ್ಲ. ಆದರೆ ಒಮ್ಮೆ ನೀಡಿದ ಆದೇಶವನ್ನು ತಡೆಯಲು ಸಾಧ್ಯವಾಗಿಲ್ಲ. ಒಂದು ಮರದ ಬದಲಾಗಿ 10 ಮರಗಳನ್ನು ಬೆಳೆಸುವ ಗುರಿ ನಮ್ಮದು.
– ಕ್ಲಿಫರ್ಡ್ ಲೋಬೋ, ಅರಣ್ಯಾಧಿಕಾರಿ, ಉಡುಪಿ
Advertisement
ನಾಚಿಕೆಗೇಡುಅರಣ್ಯ ಇಲಾಖೆ ಪರಿಸರ ದಿನದಂದು ಮರ ಕಡಿ ಯುವುದು ನಾಚಿಕೆಗೇಡು. ಈ ಹಿಂದೆ ಅರಣ್ಯ ಇಲಾಖೆಗೆ ಮರ ಗಳನ್ನು ಕಡಿಯದಂತೆ ಮನವಿ ಮಾಡಲಾಗಿತ್ತು. ಮರಗಳ ಕಡಿಯುವ ಬದಲಾಗಿ ಸಂಘ ಸಂಸ್ಥೆಗಳಿಗೆ ಹೇಳಿದರೆ ಅವರೇ ಮುಂದೆ ಬಂದು ಮರಗಳನ್ನು ಸ್ಥಳಾಂತರಿಸುತ್ತಿದ್ದರು.
– ಪ್ರೊ| ಬಾಲಕೃಷ್ಣ ಮುಧ್ದೋಡಿ, ಪರಿಸರ ಪ್ರೇಮಿ