Advertisement
ಹೀಗೆ ಹತ್ತು ಹಲವು ಸಮಸ್ಯೆಗಳಿಗೆ ಈಗ ಒಂದೇ ವೇದಿಕೆಯಲ್ಲಿ ಪರಿಹಾರ ಸಿಕ್ಕಿದೆ. ಈ ಎಲ್ಲ ಸಮಸ್ಯೆಗಳಿಗೆ ಮೆಸ್ಕಾಂ ರೂಪಿಸಿರುವ ಗ್ರಾಹಕ ಸ್ನೇಹಿ “ನನ್ನ ಮೆಸ್ಕಾಂ’ ಆ್ಯಪ್‌ನಲ್ಲಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಪ್ರಸ್ತುತ ಈ ಆ್ಯಪ್ ಆ್ಯಂಡ್ರಾಯ್ಡ ಹಾಗೂ ಐಒಎಸ್‌ನಲ್ಲಿ ಲಭ್ಯವಿದೆ. ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ 24.88 ಲಕ್ಷ ಗ್ರಾಹಕರಿಗೆ ಇದು ಅನುಕೂಲವಾಗಲಿದೆ. ಸಾವಿರಾರು ಲೋಡ್ ಮಾಡಿಕೊಂಡು ಅನುಕೂಲ ಪಡೆಯುತ್ತಿದ್ದಾರೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಆ್ಯಪ್ ಲಭ್ಯವಿದ್ದು ಡೌನ್‌ಲೋಡ್ ಮಾಡಿದ ನಂತರ ವಿದ್ಯುತ್ ಬಿಲ್‌ನಲ್ಲಿರುವ 10 ಸಂಖ್ಯೆಗಳ ಅಕೌಂಟ್ ನಂಬರ್ ಅನ್ನು ನಮೂದಿಸಬೇಕು. ನಂತರ ನಿಮ್ಮ ವೈಯಕ್ತಿಕ ಮಾಹಿತಿ ಲಭ್ಯವಾಗುತ್ತದೆ. ಒಂದಕ್ಕಿಂತ ಹೆಚ್ಚು ಅಕೌಂಟ್‌ಗಳನ್ನು ಲಿಂಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
Related Articles
Advertisement
ಪ್ರತಿ ತಿಂಗಳು ಕಚೇರಿಗೆ ಹೋಗುವುದು ಕಷ್ಟವಾಗಿತ್ತು. ಅದಕ್ಕಾಗಿ ಆನ್‌ಲೈನ್ ಮೂಲಕ ಬಿಲ್ ಪಾವತಿ ಮಾಡುತ್ತಿದ್ದೆ. ಆದರೆ ಅದು ಪರಿಪೂರ್ಣವಾಗಿಲ್ಲ. ಒಂದು ತಿಂಗಳು ಬಿಲ್ ಕಟ್ಟಿಲ್ಲವಾದರೆ ಅದು ಮುಂದಿನ ಆನ್‌ಲೈನ್ ಬಿಲ್‌ನಲ್ಲಿ ಕಾಣಿಸಬೇಕು. ಆದರೆ ಹಾಗಾಗುತ್ತಿರಲಿಲ್ಲ. ವಿದ್ಯುತ್ ನಿಲುಗಡೆ ಬಗ್ಗೆ ಪತ್ರಿಕೆಗಳಿಗೆ ಮಾಹಿತಿ ಕೊಡುತ್ತಿದ್ದರೂ ಎಲ್ಲರೂ ಪತ್ರಿಕೆ ಓದುವುದಿಲ್ಲವಾದ್ದರಿಂದ ಅದು ಸಹ ಪರಿಪೂರ್ಣ ಪರಿಹಾರವಲ್ಲ. ಈಗ ಆ್ಯಪ್‌ನಲ್ಲಿ ಸಾಕಷ್ಟು ಅನುಕೂಲಗಳಿದ್ದು ಕಳೆದ ಬಾರಿಯ ಪಾವತಿಯ ಮಾಹಿತಿ ಸಿಗುತ್ತದೆ. ಮುಂದಿನ ಒಂದು ವಾರದ ವಿದ್ಯುತ್ ನಿಲುಗಡೆ ಮಾಹಿತಿಯೂ ಸಿಗುತ್ತದೆ. ದೂರು ಕೊಡಲು ಕಚೇರಿಗೆ ಕರೆ ಮಾಡಿದರೆ ಉಡಾಫೆ ಉತ್ತರಗಳು ಸಿಗುತ್ತಿದ್ದವು. ಈಗ ಇದೆಲ್ಲದಕ್ಕೂ ಪರಿಹಾರ ಸಿಗಲಿದೆ.
ಪ್ರವೀಣ್, ಭದ್ರಾವತಿ
ಶರತ್ ಭದ್ರಾವತಿ