Advertisement
ಮಳೆಯ ತರುವಾಯ ರಸ್ತೆ ಬದಿ ಗಿಡಗಂಟಿಗಳು ಸೊಂಪಾಗೆ ಬೆಳೆದು ರಸ್ತೆಗೆ ಬಾಗಿವೆ. ಆಳೆತ್ತರಕ್ಕೆ ಬೆಳೆದ ಇವುಗಳು ಸಂಚಾರದ ವೇಳೆ ಅಪಾಯ ತಂದೊಡ್ಡುತ್ತಿವೆ. ಈಗತಾನೆ ಹಲವೆಡೆ ಅವಘಡಗಳು ಸಂಭವಿಸಿವೆ. ಇಷ್ಟಿದ್ದರೂ ಸಂಬಂಧ ಪಟ್ಟ ಲೋಕೋಪಯೋಗಿ ಇಲಾಖೆ ಗಿಡ ತೆರವುಗೊಳಿಸುವ ಕಾರ್ಯ ನಡೆಸಿಲ್ಲ.
ಇಲಾಖೆಯ ನಿರ್ಲಕ್ಷ್ಯದಿಂದ ಬೇಸತ್ತ ಗುತ್ತಿಗಾರು, ನಾಲ್ಕೂರು, ಎಲಿಮಲೆ, ವಳಲಂಬೆ ಭಾಗದ ನಾಗ ರಿಕರು, ಅಲ್ಲಿಯ ಸ್ಥಳೀಯ ಸಂಘ-ಸಂಸ್ಥೆಗಳು ಸುಬ್ರಹ್ಮಣ್ಯ- ಗುತ್ತಿಗಾರು, ಜಾಲ್ಸೂರು-ಸುಳ್ಯ ಸಂಪರ್ಕ ರಸ್ತೆ ಬದಿಯ ಕಾಡು ಕಡಿದು ಸ್ವತ್ಛಗೊಳಿಸಿದ್ದಾರೆ. ಕಳೆ ತೆಗೆಯುವ ಯಂತ್ರ ಬಳಸಿ ಕಾಡು ಹೆರೆದು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಇನ್ನೂ ಹಲವು ಭಾಗಗಳಲ್ಲಿ ಇನ್ನೂ ಅಪಾಯದ ಸ್ಥಿತಿ ಇದೆ. ಅಪಾಯಕಾರಿ ಸ್ಥಿತಿ
ಮಳೆ ಪ್ರಮಾಣ ಕಡಿಮೆಗೊಂಡ ಹೊತ್ತಲ್ಲೆ ಸಂಬಂಧಿಸಿದ ಇಲಾಖೆ ಬಹಳಷ್ಟು ಎಚ್ಚರಿಕೆ ವಹಿಸಬೇಕಿತ್ತು. ಸಾಕಷ್ಟು ಮುಂಜಾಗ್ರತೆ ವಹಿಸದೆ ಇದ್ದಿದ್ದರಿಂದ ಸುಳ್ಯ- ಸುಬ್ರಹ್ಮಣ್ಯ, ಸುಬ್ರಹ್ಮಣ್ಯ- ಜಾಲ್ಸೂರು-ಮಡಿಕೇರಿ ಸಂಪರ್ಕ ರಸ್ತೆ. ಮಾಣಿ-ಮೈಸೂರು ರಾಜ್ಯ ಹೆದ್ದಾರಿ ಸುಬ್ರಹ್ಮಣ್ಯ-ಕಾಣಿಯೂರು-ಪುತ್ತೂರು ಸಂಪರ್ಕ ರಸ್ತೆ, ಸುಬ್ರಹ್ಮಣ್ಯ-ಗುಂಡ್ಯ- ಸಕಲೇಶಪುರ ರಸ್ತೆ ಹಾಗೂ ಗ್ರಾಮೀಣ ಭಾಗದ ಹಲವು ಕಡೆಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಗ್ರಾಮದೊಳಗಿನ ಒಳ ರಸ್ತೆಗಳಲ್ಲಿ ಕೂಡ ಇದೇ ಚಿತ್ರಣ ಕಂಡು ಬರುತ್ತದೆ.
Related Articles
ತಿರುವಿನಲ್ಲಿ ಎದುರಿನಿಂದ ಬರುವ ವಾಹನಗಳು ತತ್‌ಕ್ಷಣಕ್ಕೆ ಕಾಣಿಸಿಕೊಳ್ಳು ವುದಿಲ್ಲ. ಇದರಿಂದಾಗಿಯೇ ಅನೇಕ ಮಂದಿ ಬೈಕ್ ಸವಾರರು ಈಗಾಗಲೇ ಬಿದ್ದು ಗಾಯಗೊಂಡಿದ್ದಾರೆ. ದ್ವಿಚಕ್ರ ವಲ್ಲದೆ ಘನವಾಹನಗಳು ಕೂಡ ಅವಘಡಗಳಿಗೆ ಒಳಗಾಗುತ್ತಿವೆ. ಇಂತಹ ರಸ್ತೆಗಳಲ್ಲಿ ಸಂಚರಿಸುವ ಸವಾರರು ಎಚ್ಚರ ವಹಿಸುವುದರ ಜತೆ ಮಂದಗತಿಯಲ್ಲಿ ವಾಹನ ಚಲಾಯಿಸಬೇಕಿದೆ.
Advertisement
ಪ್ರತಿ ವರ್ಷ ಈ ಸಮಸ್ಯೆ ಪುನರಾವರ್ತನೆ ಆಗುತ್ತಿರುತ್ತದೆ. ಇಲಾಖೆಗಳು ಪಕ್ಕನೆ ಎಚ್ಚರವಾಗುವುದಿಲ್ಲ. ಅವಘಡ ಸಂಭವಿಸಿ ಅಮಾಯಕ ಜೀವಗಳು ಬಲಿಯಾದ ಅನಂತರದಲ್ಲಿ ಅವುಗಳು ಎಚ್ಚರಗೊಳ್ಳುತ್ತವೆ. ಆದರೆ ಈ ಬಾರಿ ಇಲಾಖೆಗೆ ಇನ್ನೂ ಎಚ್ಚರವಾಗಿಲ್ಲ.
ಕ್ರಮ ಕೈಗೊಂಡಿಲ್ಲತಾ.ಪಂ., ಸಾಮಾನ್ಯ ಸಭೆಗಳಲ್ಲಿ ನ.ಪಂ.ಸಭೆ, ಸಾಮಾನ್ಯ ಸಭೆ ಮತ್ತು ಗ್ರಾಮ ಸಭೆಗಳಲ್ಲಿ ಅಪಾಯ ಕಾರಿ ಮರ ಹಾಗೂ
ಗಿಡ ಬಳ್ಳಿಗಳ ತೆರವು ಕುರಿತು ಚರ್ಚೆ ಗಳು ನಡೆದಿವೆ. ತೆರವು ಕುರಿತಂತೆ ನಿರ್ಣಯಗಳು ಆಗಿವೆ. ಜನಪ್ರತಿನಿಧಿಗಳು ಈ ಕುರಿತು ಕ್ರಮಕೈಗೊಳ್ಳುವಂತೆ ಹೇಳಿದರೂ ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ರಸ್ತೆ ಬದಿ ಗ್ಯಾಂಗ್‌ಮೆನ್‌ಗಳಿಲ್ಲ
ಹಿಂದೆಲ್ಲ ಇಲಾಖೆ ಕಡೆಯಿಂದ ಗ್ಯಾಂಗ್‌ಮೆನ್ ಸಿಬಂದಿ ಇರುತ್ತಿದ್ದರು. ಅವರು ರಸ್ತೆ ಬದಿ ಮಳೆ ನೀರು ಹಾದು ಹೋಗಲು ತಾತ್ಕಾಲಿಕ ಚರಂಡಿ ನಿರ್ಮಾಣ ಮಾಡುವುದು. ರಸ್ತೆಗೆ ಬಾಗಿದ ವೃಕ್ಷಗಳ ತೆರವು ಕಾರ್ಯ ನಡೆಸುತ್ತಿದ್ದರು. ಹೀಗಾಗಿ ಸ್ವಲ್ಪವಾದರೂ ಇವುಗಳ ನಿರ್ವಹಣೆ ಆಗುತ್ತಿತ್ತು. ಅನಂತರದಲ್ಲಿ ಇಂತಹ ಸಿಬಂದಿ ಹುದ್ದೆ ರದ್ದುಗೊಂಡಿದೆ. ಈ ಸಿಬಂದಿಯನ್ನು ಬೇರೆ ಇಲಾಖೆಗಳ ಕಚೇರಿಯ ಹುದ್ದೆಗಳಿಗೆ ನೇಮಿಸಿಕೊಂಡ ಕಾರಣ ಗ್ಯಾಂಗ್‌ಮೆನ್‌ಗಳು ರಸ್ತೆ ಬದಿ ಕಾಣಿಸುವುದಿಲ್ಲ. ಅನುದಾನ ದೊರೆತಾಗ ತೆರವು
ರಸ್ತೆ ಬದಿಯ ಸಣ್ಣಪುಟ್ಟ ಗಿಡಗಳ ತೆರವು ಕಾರ್ಯ ಇನ್ನೂ ಸಂಪೂರ್ಣ ಆಗಿಲ್ಲ. ಅನುದಾನದ ದೊರೆತ ಬಳಿಕವಷ್ಟೆ ಈ ಕಾರ್ಯ ನಡೆಸುತ್ತೇವೆ.
– ಹರೀಶ,
ಕಿರಿಯ ಎಂಜಿನಿಯರ್, ಪಿಡಬ್ಲ್ಯುಡಿ, ಸುಳ್ಯ ಬಾಲಕೃಷ್ಣ ಭೀಮಗುಳಿ