Advertisement

ಕರ್ಟಿಸ್‌ ಕಾಂಫ‌ರ್‌ ಪರಾಕ್ರಮ; ಐರ್ಲೆಂಡ್‌ಗೆ 6 ವಿಕೆಟ್‌ಗಳ ಅಮೋಘ ಜಯ

04:22 PM Oct 19, 2022 | Team Udayavani |

ಹೋಬರ್ಟ್‌: ಐರ್ಲೆಂಡ್‌-ಸ್ಕಾಟ್ಲೆಂಡ್‌ ನಡುವಿನ “ಬಿ’ ವಿಭಾಗದ ಮೊದಲ ಅರ್ಹತಾ ಪಂದ್ಯ ಭಾರೀ ಜೋಶ್‌ನಿಂದ ಕೂಡಿತ್ತು. ಇನ್ನೇನು ಗೆದ್ದೇ ಬಿಟ್ಟೆವು ಎಂಬ ಖುಷಿಯಲ್ಲಿದ್ದ ಸ್ಕಾಟ್ಲೆಂಡ್‌ಗೆ ಐರ್ಲೆಂಡ್‌ನ‌ ಮಧ್ಯಮ ಕ್ರಮಾಂಕದ ಬ್ಯಾಟರ್‌ ಕರ್ಟಿಸ್‌ ಕಾಂಫ‌ರ್‌ ಮರ್ಮಾಘಾತವಿಕ್ಕಿದರು. ಸಿಡಿಲಬ್ಬರ ಬ್ಯಾಟಿಂಗ್‌ ಪ್ರದರ್ಶಿಸಿದ ಅವರು ಐರ್ಲೆಂಡ್‌ಗೆ 6 ವಿಕೆಟ್‌ಗಳ ಅಮೋಘ ಜಯವನ್ನು ತಂದಿತ್ತರು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಸ್ಕಾಟ್ಲೆಂಡ್‌ 5 ವಿಕೆಟಿಗೆ 176 ರನ್‌ ಬಾರಿಸಿತು. ಐರ್ಲೆಂಡ್‌ 9.3 ಓವರ್‌ಗಳಲ್ಲಿ 61ಕ್ಕೆ 4 ವಿಕೆಟ್‌ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಆಗ ಕರ್ಟಿಸ್‌ ಕಾಂಫ‌ರ್‌-ಜಾರ್ಜ್‌ ಡಾಕ್ರೆಲ್‌ ಮತ್ತೆ 9.3 ಓವರ್‌ಗಳಲ್ಲಿ ಮುರಿಯದ 5ನೇ ವಿಕೆಟಿಗೆ 119 ರನ್‌ ಪೇರಿಸಿ ತಂಡಕ್ಕೆ ಅಸಾಮಾನ್ಯ ಗೆಲುವನ್ನು ತಂದಿತ್ತರು.
ಕಾಂಫ‌ರ್‌ ಸಿಡಿಲಬ್ಬರದ ಬ್ಯಾಟಿಂಗ್‌ ನಡೆಸಿ ಕೇವಲ 32 ಎಸೆತಗಳಿಂದ 72 ರನ್‌ ಬಾರಿಸಿದರು (7 ಬೌಂಡರಿ, 2 ಸಿಕ್ಸರ್‌). ಡಾಕ್ರೆಲ್‌ 27 ಎಸೆತಗಳಿಂದ 39 ರನ್‌ ಬಾರಿಸಿದರು (4 ಬೌಂಡರಿ, 1 ಸಿಕ್ಸರ್‌).

ಸ್ಕಾಟ್ಲೆಂಡ್‌ ಪರ ಆರಂಭಕಾರ ಮೈಕಲ್‌ ಜೋನ್ಸ್‌ ಪಂದ್ಯದಲ್ಲೇ ಸರ್ವಾಧಿಕ 86 ರನ್‌ (55 ಎಸೆತ, 6 ಫೋರ್‌, 4 ಸಿಕ್ಸರ್‌) ಹೊಡೆದರು.

Advertisement

Udayavani is now on Telegram. Click here to join our channel and stay updated with the latest news.

Next