ಕುಂಬಾರಗುಂಡಿಯಲ್ಲಿ 10ಕ್ಕೂ ಹೆಚ್ಚು ಕುಂಬಾರರ ಕುಟುಂಬಗಳು ಹರವಿ, ವಿವಿಧ ಮಾದರಿ ಹಣತೆ, ಬಗೆಬಗೆಯ ಮಡಕೆಗಳನ್ನು ತಯಾರಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಆದರೆ, ಪಿಂಗಾಣಿ ಇವರ ಬದುಕಿಗೆ ಶಾಪವಾಗಿ ಪರಿಣಮಿಸಿದೆ.
Advertisement
ದೂರದ ಕೂಳೇನೂರ ಗ್ರಾಮದ ಕೆರೆ ಸೇರಿದಂತೆ ಸುತ್ತಮುತ್ತಲಿನ ವಿವಿಧ ಕೆರೆಗಳಿಂದ ಜೇಡಿ ಮಣ್ಣನ್ನು ಸುಮಾರು 3000ರೂ. ವೆಚ್ಚದಲ್ಲಿ ಟ್ರ್ಯಾಕ್ಟರ್ ಮೂಲಕ ತಂದು, ಹದ ಮಾಡಿ ಯಾವುದೇ ಸಾಧನಗಳ ಸಹಾಯವಿಲ್ಲದೇ ತಮ್ಮ ಕೈಚಳಕದಿಂದ ಸುಂದರವಾದ ಹಣತೆಗಳನ್ನು ತಯಾರಿಸುತ್ತಾರೆ. ಸತತ ಆರೇಳು ಗಂಟೆಗಳ ಕಾಲ ಬಟ್ಟಿಯಲ್ಲಿ ಸುಟ್ಟು ಮಣ್ಣಿನ ಹಣತೆಗಳಿಗೆ ಅಂತಿಮ ರೂಪ ನೀಡುತ್ತಾರೆ. ಹೀಗೆ 1 ಟ್ರ್ಯಾಕ್ಟರ್ ಮಣ್ಣಿನಲ್ಲಿ ಸಾವಿರಾರು ರೂ. ಖರ್ಚು ಮಾಡಿ ಸುಮಾರು 4ಸಾವಿರದಷ್ಟು ಹಣತೆಗಳನ್ನು ತಯಾರಿಸುತ್ತಾರೆ. ಕೇವಲ 20ರಿಂದ 25ರೂ.ಗೆ ಡಜನ್‌ನಂತೆ ಹಣತೆಗಳನ್ನು ನೀಡಿದರೂ ಅವುಗಳನ್ನು ಕೊಳ್ಳುವವರ ಸಂಖ್ಯೆ ಮಾತ್ರ ಗಣನೀಯವಾಗಿ ಕಡಿಮೆಯಾಗಿದ್ದು, ಬದುಕು ನಡೆಸುವುದು ಕಷ್ಟಕರವಾಗಿದೆ.
Related Articles
ಮಾರುಕಟ್ಟೆಯಲ್ಲಿ ಇಂದು ಪಿಂಗಾಣಿಯ ವಿವಿಧ ಬಗೆಯ, ನಾನಾ ಆಕಾರಗಳಲ್ಲಿ ಬಂದ ಹಣತೆಗಳಿಗೆ ಗ್ರಾಹಕರು ಮಾರು ಹೋಗಿದ್ದು, ಸ್ಥಳೀಯವಾಗಿ ನಾವು ತಯಾರಿಸಿರುವ ಮಣ್ಣಿನ ಹಣತೆಗಳಿಗೆ ಬೇಡಿಕೆ ಕಡಿಮೆಯಾಗಿದೆ. ಇದರ ಜೊತೆಗೆ ಆಕರ್ಷಕ ಮೊಂಬತ್ತಿ, ಸಿಲಾವರ್, ಮೆಟಲ್ ದೀಪಗಳು ಮಾರುಕಟ್ಟೆಗೆ ಲಗ್ಗೆ ಇಟ್ಟ ಮೇಲೆ ಮಣ್ಣಿನ ದೀಪಗಳ ಬಳಕೆ ಹೇರಳವಾಗಿ ಕಡಿಮೆಯಾಗಿದೆ. ಪಿಂಗಾಣಿ ಹಾಗೂ ಸಿಲಾವರ್ ದೀಪಗಳಿಗಿಂತ ಮಣ್ಣಿನ ದೀಪಗಳು ಅಗ್ಗವಾದರೂ ಒಂದು ವರ್ಷ ಕೊಂಡು ಇಟ್ಟರೆ ಪ್ರತಿ ವರ್ಷ ಬಳಕೆ ಮಾಡಬಹುದು ಎಂಬ ಆಲೋಚನೆಯಲ್ಲಿ ಎಲ್ಲರೂ ಅವುಗಳತ್ತ ಮಾರು ಹೋಗಿದ್ದಾರೆ. ಹೀಗಾಗಿ, ದೀಪದ ಕೆಳಗೆ ಕತ್ತಲು ಎಂಬಂತೆ ದೀಪ ತಯಾರಿಸುವವರ ಬದುಕಿನಲ್ಲಿ ಕತ್ತಲು ಆವರಿಸಿರುವುದು ನಿಜಕ್ಕೂ ನೋವಿನ ಸಂಗತಿ.
Advertisement
ಅನೇಕ ವರ್ಷಗಳಿಂದ ಕಂಬಾರಿಕೆ ವೃತ್ತಿ ನಡೆಸುತ್ತಾ ಪ್ರತಿ ವರ್ಷ ಹಣತೆಗಳನ್ನು ತಯಾರಿಸುತ್ತಿದ್ದೇವೆ. ಆದರೆ, ಪಿಂಗಾಣಿ ಹಾವಳಿಯಿಂದಾಗಿ ನಾವು ತಯಾರಿಸಿದ ಹಣತೆಗಳನ್ನು ಕೊಳ್ಳುವವರು ಇಲ್ಲದಾಗಿದೆ. ಸರ್ಕಾರ ನಮಗೆ ಪ್ರೋತ್ಸಾಹ ನೀಡುವಂತಹ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ. ಹಾಗಾಗಿ, ನಾವು ಜೀವನ ನಡೆಸೋದೇಕಷ್ಟವಾಗಿದೆ.
∙ನೀಲಮ್ಮ ಕುಂಬಾರ, ಹಾವೇರಿ