ಪಣಜಿ: ಈ ತಿಂಗಳಿನಿಂದ ವಿದ್ಯುತ್ ದರ ಏರಿಕೆಯಿಂದ ಗೋವಾ ವಿದ್ಯುತ್ ಗ್ರಾಹಕರು ಶಾಕ್ ಆಗಲಿದ್ದಾರೆ. ರಾಜ್ಯ ಸರ್ಕಾರವು ಗೃಹ ಮತ್ತು ಇತರ ಗ್ರಾಹಕರಿಗೆ ಪ್ರತಿ ಯೂನಿಟ್‍ಗೆ 20 ಪೈಸೆಯಿಂದ 70 ಪೈಸೆಯಷ್ಟು ದರವನ್ನು ತಕ್ಷಣವೇ ಏರಿಕೆ ಮಾಡಿದೆ, ಇದರಿಂದ ಗೋವಾದಲ್ಲಿ ವಿದ್ಯುತ್ ದುಬಾರಿಯಾಗಲಿದೆ.
ಗೋವಾ ರಾಜ್ಯ ಮುಖ್ಯ ವಿದ್ಯುತ್ ಎಂಜಿನಿಯರ್ ಸ್ಟೀಫನ್ ಫೆನಾರ್ಂಡಿಸ್ ಈ ಆದೇಶ ಹೊರಡಿಸಿದ್ದಾರೆ. ಅದರಂತೆ, ಜುಲೈ ಬಿಲ್‍ನಿಂದ ಪ್ರಾರಂಭವಾಗುವ ಪ್ರತಿ ಬಿಲ್ಲಿಂಗ್ ಸೈಕಲ್‍ನಲ್ಲಿ ಬಳಕೆ ಮಾಡುವ ಪ್ರತಿ ಯೂನಿಟ್ ಮೇಲೆ ಹೆಚ್ಚಿನ ಶುಲ್ಕವನ್ನು ವಿಧಿಸಲಾಗುತ್ತದೆ.
ಕಡಿಮೆ ಲೋಟೆನ್‍ಶನ್ ಗೃಹಬಳಕೆಯ, ಕೃಷಿ (ನೀರಾವರಿ) ಮತ್ತು ತಾತ್ಕಾಲಿಕ ಪೂರೈಕೆ ಸಂಪರ್ಕಗಳಿಗೆ ಯೂನಿಟ್‍ಗೆ 20 ಪೈಸೆ ವಿಧಿಸಲಾಗುತ್ತಿದೆ, ಕಡಿಮೆ ಲೋಡ್ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರು ಮತ್ತು ಕಡಿಮೆ ಒತ್ತಡದ ಹೋಟೆಲ್ ಉದ್ಯಮದ ಗ್ರಾಹಕರಿಗೆ ಪ್ರತಿ ಯೂನಿಟ್‍ಗೆ 70 ಪೈಸೆ ವಿಧಿಸಲಾಗುತ್ತಿದೆ.
ಅಂತೆಯೇ, ಹೋಡಿರ್ಂಗ್‍ಗಳು ಮತ್ತು ಸೈನ್‍ಬೋರ್ಡ್‍ಗಳು, ತಾತ್ಕಾಲಿಕ ವಾಣಿಜ್ಯ ಸಂಪರ್ಕಗಳು ಮತ್ತು ಉದ್ಯಮದಲ್ಲಿನ ಹೈ ಟೆನ್ಷನ್ ಗ್ರಾಹಕರು ಮತ್ತು ಫೆರೋ ಮೆಟಲರ್ಜಿಕಲ್ ಪವರ್ ಇಂಟೆನ್ಸಿವ್ ಯುನಿಟ್‍ಗಳಿಗೆ ಪ್ರತಿ ಯೂನಿಟ್‍ಗೆ 70 ಪೈಸೆ ವಿಧಿಸಲಾಗುತ್ತದೆ ಎನ್ನಲಾಗಿದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಗತ್ಯ ವಸ್ತುಗಳ ಬೆಲೆಯೊಂದಿಗೆ ಇದೀಗ ಗ್ರಾಹಕರಿಗೆ ವಿದ್ಯುತ್ ದರ ಹೆಚ್ಚಳ ಕೂಡ ಶಾಕ್ ನೀಡಿದಂತಾಗಿದೆ.