Advertisement
ಏಕೆಂದರೆ, ಜೆಡಿಎಸ್ ಅಭ್ಯರ್ಥಿ ಯಾವ ಸಮಾಜಕ್ಕೆ ಸೇರಿರುತ್ತಾರೆ ಎಂಬುದು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂಬ ಲೆಕ್ಕಾಚಾರ ಅದು. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಕೌಟಿಲ್ಯ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್‌ನಿಂದ ವಿಧಾನಪರಿಷತ್ ಸದಸ್ಯ ಎನ್.ಧರ್ಮಸೇನಾ ಹಾಗೂ ನಿವೃತ್ತ ಅಧಿಕಾರಿ 76 ವರ್ಷದ ಡಾ.ಡಿ.ತಿಮ್ಮಯ್ಯ ಅವರ ಹೆಸರು ಕೇಳಿ ಬರುತ್ತಿದೆ.
Related Articles
Advertisement
ಸಂದೇಶ್ ನಾಗರಾಜ್ ಬಿಜೆಪಿ ಟಿಕೆಟ್‌ಗೆ ಪ್ರಯತ್ನ ಪಡುತ್ತಿದ್ದಾಗ ಇತ್ತ ಬಿಜೆಪಿ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ಆಪ್ತ ಸಿ.ಬಸವೇಗೌಡರನ್ನು ವಾಪಸ್ ತನ್ನ ಪಕ್ಷಕ್ಕೆ ಕರೆತರಲು ಜೆಡಿಎಸ್‌ನ ಒಂದು ಬಣ ಪ್ರಯತ್ನಿಸಿತು. ವಿಧಾನಪರಿಷತ್ ಚುನಾವಣೆಗೆ ಟಿಕೆಟ್ ನೀಡುವ ಭರವಸೆ ನೀಡಿತು. ಆದರೆ, ಬಸವೇಗೌಡ ಅವರು ಜೆಡಿಎಸ್‌ನ ಈ ಆಹ್ವಾನವನ್ನು ವಿನಯದಿಂದಲೇ ನಿರಾಕರಿಸಿ ಬಿಜೆಪಿಯಲ್ಲೇ ಇರುವುದಾಗಿ ಹೇಳಿದರು.
ಸಂದೇಶ್‌ಗೆ ರೇವಣ್ಣ ಶ್ರೀರಕ್ಷೆ: ಈ ವಿದ್ಯಮಾನಗಳ ಮಧ್ಯೆಯೇ ಸಂದೇಶ್ ನಾಗರಾಜ್ ಈಗ ವಾಪಸ್ ಜೆಡಿಎಸ್ ಕದ ತಟ್ಟುತ್ತಿದ್ದಾರೆ. ಸಂದೇಶ್ ನಾಗರಾಜ್ ಅವರಿಗೆ ಶಾಸಕ ಎಚ್.ಡಿ.ರೇವಣ್ಣ ಅವರ ಶ್ರೀರಕ್ಷೆ ಇದೆ. ಸಂದೇಶ್ ನಾಗರಾಜ್ ಅವರಿಗೆ ಟಿಕೆಟ್ ನೀಡಬೇಕೆಂದು ರೇವಣ್ಣ ಪಟ್ಟು ಹಿಡಿದಿದ್ದಾರೆ. ಆದರೆ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಂದೇಶ್ ನಾಗರಾಜ್ ಅವರಿಗೆ ಟಿಕೆಟ್ ನೀಡಲು ಒಲವಿಲ್ಲ.
ಹೀಗಾಗಿ, ಈಗ ಕಾಂಗ್ರೆಸ್ ನಲ್ಲಿರುವ ಮಂಜೇಗೌಡ ಅವರಿಗೆ ಜೆಡಿಎಸ್ ಟಿಕೆಟ್ ದೊರೆಯುವ ಸಾಧ್ಯತೆ ಹೆಚ್ಚಾಗಿದೆ. ಮಂಜೇಗೌಡ 2008ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಮಂಜೇಗೌಡ ಕೇಂದ್ರ ಭಿಕ್ಷುಕರ ಪರಿಹಾರ ನಿಧಿಯ ಮಾಜಿ ಅಧ್ಯಕ್ಷರೂ ಹೌದು.
ಇಂದು ಜೆಡಿಎಸ್ ಸಭೆ: ಈ ಮಧ್ಯೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪಕ್ಷದ ಅಭ್ಯರ್ಥಿ ಆಯ್ಕೆ ಕುರಿತು ಮೈಸೂರಿನಲ್ಲಿ ಸೋಮವಾರ ಪಕ್ಷದ ಶಾಸ ಕರು, ಜಿಲ್ಲಾ ಪದಾಧಿಕಾರಿಗಳು, ಪ್ರಮುಖ ನಾಯ ಕರ ಸಭೆ ಕರೆದಿದ್ದಾರೆ. ಜೆಡಿಎಸ್ ಟಿಕೆಟ್ ಆಕಾಂಕ್ಷಿ ಮಂಜೇಗೌಡ ಈ ಸಭೆಯಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುವ ಸಾಧ್ಯತೆಯೂ ಹೆಚ್ಚಾಗಿದೆ. ಈ ಕ್ಷೇತ್ರದ ಚುನಾವಣಾ ಕಣದಲ್ಲಿ ಜೆಡಿಎಸ್ ಹೂಡುವ ಅಭ್ಯರ್ಥಿ ಆಯ್ಕೆಯ ತಂತ್ರ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.
ಧರ್ಮಸೇನಾ ಬದಲು ತಿಮ್ಮಯ್ಯಗೆ ಕೈ ಟಿಕೆಟ್?
ಮೈಸೂರು-ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುವ ಈ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಯಾವುದೇ ಗೊಂದಲ ಇಲ್ಲ. ಆದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ವಿಚಾರದಲ್ಲಿ ಈ ಮಾತನ್ನು ಹೇಳುವಂತಿಲ್ಲ. ಕಾಂಗ್ರೆಸ್ ಟಿಕೆಟ್ ಕೈತಪ್ಪುವ ಸಾಧ್ಯತೆಯೇ ಹೆಚ್ಚಾಗಿರುವ ವಿಧಾನಪರಿಷತ್ ಸದಸ್ಯ ಧರ್ಮಸೇನಾ ಮೊದಲಿನಿಂದಲೂ ಕಾಂಗ್ರೆಸ್‌ಗೆ ನಿಷ್ಠಾವಂತರು.
ಆದಿ ಜಾಂಬವ ಸಮಾಜಕ್ಕೆ ಸೇರಿದ ಧರ್ಮಸೇನಾ ವಿವಾದಗಳಿಂದ ದೂರ ಇರುವವರು. ಅವರಿಗೆ ಟಿಕೆಟ್ ಕೈತಪ್ಪಿದರೂ ಪಕ್ಷಕ್ಕೆ ವಿರುದ್ಧವಾದ ಹೆಜ್ಜೆ ಇಡುವ ಸಾಧ್ಯತೆ ತುಂಬಾ ಕಡಿಮೆ. ಕಾಂಗ್ರೆಸ್ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಾಗಿರುವ ಡಾ.ಡಿ.ತಿಮ್ಮಯ್ಯ ಅವರೂ ಆದಿಜಾಂಬವ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ಆದರೆ, ತಿಮ್ಮಯ್ಯ ಅವರು ಮತದಾರರಿಗೆ ಹೆಚ್ಚು ಪರಿಚಿತರಲ್ಲ.