Advertisement

Maharashtra ಗುಂಪು ಘರ್ಷಣೆಯ ನಂತರ ಅಮಲ್ನೇರ್‌ನಲ್ಲಿ ಕರ್ಫ್ಯೂ; 31 ಮಂದಿ ಬಂಧನ

02:24 PM Jun 11, 2023 | Team Udayavani |

ಮುಂಬಯಿ: ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಅಮಲ್ನೇರ್‌ನಲ್ಲಿ ಎರಡು ಗುಂಪುಗಳ ನಡುವೆ ಸಣ್ಣ ವಿಚಾರವಾಗಿ ಘರ್ಷಣೆ ಸಂಭವಿಸಿದ ಬಳಿಕ ನಗರದಲ್ಲಿ 48 ಗಂಟೆಗಳ ಕಾಲ ಕರ್ಫ್ಯೂ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಜೂನ್ 9 ರಂದು (ಶುಕ್ರವಾರ) ರಾತ್ರಿ 10 ಗಂಟೆ ಸುಮಾರಿಗೆ ಮಕ್ಕಳ ಆಟಿಕೆಗಳ ಬಗ್ಗೆ ಎರಡು ಗುಂಪುಗಳ ನಡುವೆ ತೀವ್ರ ವಾಗ್ವಾದ ನಡೆದಾಗ ಈ ಘಟನೆ ಸಂಭವಿಸಿದೆ. ನಂತರ ವಾದವು ಹಿಂಸಾತ್ಮಕ ತಿರುವು ಪಡೆದುಕೊಂಡಿದ್ದು ಎರಡೂ ಗುಂಪುಗಳು ಪರಸ್ಪರ ಇಟ್ಟಿಗೆಗಳಿಂದ ಹೊಡೆದಾಡಿಕೊಂಡಿದ್ದಾವೆ.

ಘಟನೆಗೆ ಸಂಬಂಧಿಸಿದಂತೆ 100 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 31 ಜನರನ್ನು ಬಂಧಿಸಲಾಗಿದೆ. ಘರ್ಷಣೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ರಸ್ತೆಬದಿಯ ಮಾರಾಟಗಾರರ ಬಂಡಿಯನ್ನು ಉರುಳಿಸಿರುವುದನ್ನು ಮತ್ತು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾದ ಇಟ್ಟಿಗೆಯ ತುಂಡುಗಳ ದೃಶ್ಯಗಳು ಕಂಡು ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next