ಇಂಗ್ಲೆಂಡಿನ ವಿಲಿಯಮ್ ಥಾಮ್ಸ್ ಎಂಬಾತ ಜಾನಪದಕ್ಕೆ 1846ರ ಆಗಸ್ಟ್ 22ರಂದು ಫೂಕ್‌ಲೋರ್ ಎಂದು ಹೆಸರಿಸಿದ. ಬದುಕಿನ ಅವಿಭಾಜ್ಯ ಅಂಗವಾಗಿರುವ ಈ ಕುರಿತು ಅಧ್ಯಯನ ಮತ್ತು ಸಂಶೋಧನೆ ನಡೆಸುವಂತೆ ವಿಶ್ವವಿದ್ಯಾಲಯಗಳಿಗೆ ಸಲಹೆ ನೀಡಿದ. ಅಂದಿನಿಂದ ಪ್ರತೀ ವರ್ಷ ಆ.22ಕ್ಕೆ ವಿಶ್ವಜಾನಪದ ದಿನವನ್ನು ಆಚರಿಸಲಾಗುತ್ತಿದೆ ಎಂದರು.
Advertisement
ಇಡೀ ಭಾರತದಲ್ಲೇ ಕರ್ನಾಟಕ ಜನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಹಳ್ಳಿಗರ ಬಾಯಿಯಿಂದ ಬಾಯಿಗೆ ಹರಿದು ಬಂದ ಇದು ಕೇವಲ ಜನಪದವಲ್ಲ, ಜನಪರ ಸಿರಿನುಡಿ ಎಂದರೂ ತಪ್ಪಾಗದು ಎಂದ ಅವರು, ಅಳಿವಿನ ಅಂಚಿನಲ್ಲಿ ಇರುವ ಅದನ್ನು ಉಳಿಸುವುದಕ್ಕಾಗಿ ವಿವಿಧ ಜಾನಪದ ಕಲೆ, ಕಲಾವಿದರನ್ನು ದಾಖಲಿಸುವ ಕೆಲಸವಾಗಬೇಕು ಎಂದರು.ತಾಳಮಡಗಿ ಕನಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಿವರಾಜ ಚೀನಕೇರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲಾವಿದರಿಗೆ ಸಾಹಿತಿಗಳು ಧೈರ್ಯ ಹೇಳಬಹುದು. ಆದರೆ ಆರ್ಥಿಕವಾಗಿ ಸಹಕಾರ ನೀಡುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ಜಾನಪದ ಕಲೆಯ ಜೊತೆಗೆ ಕಲಾವಿದರಿಗೆ ಆರ್ಥಿಕ ನೆರವು ನೀಡಿ, ಪೋಷಿಸುವ ಗುರುತರ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಶಾಸಕರು ಮತ್ತು ಸಚಿವರಾದ ರಾಜಶೇಖರ ಪಾಟೀಲ ಮತ್ತು ಬಂಡೆಪ್ಪ ಕಾಶೆಂಪೂರ ಅವರಿಗೆ ಒತ್ತಾಯಿಸುವುದಾಗಿ ಹೇಳಿದರು.
ದಶಕದಿಂದ ತಾಲೂಕಿನಲ್ಲಿರುವ ಸಾಕಷ್ಟು ಜನ ಜಾನಪದ ಕಲಾವಿದರನ್ನು ಗುರುತಿಸಿ, ಸರ್ಕಾರದಿಂದ ನೆರವು ಕೊಡಿಸಲು ಶಕ್ತಿಮೀರಿ ಯತ್ನಿಸಲಾಗಿದೆ. ಭವಿಷ್ಯದಲ್ಲೂ ಅದರಿಂದ ಯಾವತ್ತೂ ಹಿಂಜರಿಯುವುದಿಲ್ಲ ಎಂದು ಹೇಳಿದರು. ಕರ್ನಾಟಕ ಜಾನಪದ ಪರಿಷತ್ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶೀಲಾಬಾಯಿ, ಮನ್ನಾಎಖೆಳ್ಳಿ ವಲಯ ಕಜಾಪ ಅಧ್ಯಕ್ಷ
ವಿನೋದಕುಮಾರ ರೊಡ್ಡಾ, ರಾಷ್ಟ್ರೀಯ ಜಾನಪದ ಶಿಷ್ಯವೇತನ ಪುರಸ್ಕೃತ ಅಂಬಾದಾಸ ಪೋಳ್ ಅವರನ್ನು ಸನ್ಮಾನಿಸಲಾಯಿತು. ತಾಲೂಕಿನ 10ಕ್ಕೂ ಅಧಿಕ ತಂಡಗಳ ಕಲಾವಿದರು ತಮ್ಮ ಕಲೆ ಪ್ರದರ್ಶಿಸಿದರು.
Related Articles
Advertisement