Advertisement

Cultural of Tulu Nadu: ತುಳು ರಂಗಭೂಮಿಯಲ್ಲಿ ಸೋಜಿಗದ ಸೂಜಿ ಮಲ್ಲಿಗೆ !

01:02 AM Jul 21, 2024 | Team Udayavani |

ಕಾಸರಗೋಡಿನಿಂದ ಕುಂದಾಪುರದವರೆಗೆ ರಾತ್ರಿ ಸಮಯದಲ್ಲಿ ಹಾಗೆ ಒಮ್ಮೆ ತಿರುಗಾಡಿದರೆ ಒಂದೊಂದು ಊರಿನಲ್ಲೂ (ಮಳೆಗಾಲ ಹೊರತು) ಯಕ್ಷಗಾನ ಪ್ರದರ್ಶನ ಕಾಣುತ್ತೇವೆ ಎಂಬ ಮಾತಿದೆ; ಆಟ ಮಾತ್ರವಲ್ಲ ತುಳು ನಾಟಕ ಕೂಡ ಇದಕ್ಕೆ ಹೊರತಲ್ಲ. ಯಕ್ಷಗಾನದಂತೆಯೇ ತುಳು ರಂಗಭೂಮಿ ಕೂಡ ಪ್ರತೀ ದಿನ ಒಂದೊಂದು ಊರಲ್ಲಿ ಪ್ರದರ್ಶನ ಕಾಣುವುದೇ ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ಸೋಜಿಗ.

Advertisement

ನಗರೀಕರಣದ ಜಂಜಾಟ ಎಷ್ಟೇ ವ್ಯಾಪಿಸಿದರೂ ಕೂಡ ತುಳುವಿನಲ್ಲಿ ಬರುವ ನಾಟಕಗಳನ್ನು ಸಂಭ್ರ ಮಿಸುವ ಲಕ್ಷಾಂತರ ಮನಸುಗಳು ಇಲ್ಲಿವೆ. ಉತ್ಸವ, ನೇಮ ನಡಾವಳಿ, ಸಂಘ ಸಂಸ್ಥೆಗಳ ಸಂಭ್ರಮ ಕೂಟದ ಸಮಯದಲ್ಲಿ ತುಳು ನಾಟಕ ಇದ್ದರಷ್ಟೇ ಚಂದ. ಹರಕೆಯ ಸ್ವರೂಪದಲ್ಲಿ ಯಕ್ಷಗಾನ ನಡೆಯುವ ಹಾಗೆ, ಕಾರ್ಯಕ್ರಮದ ಸಂಭ್ರಮಕ್ಕೆ ನಾಟಕ ಎಂಬ ಮನೋಭೂಮಿಕೆಯಿಂದಾಗಿ ಕರಾವಳಿ ಭಾಗದಲ್ಲಿ ತುಳು ರಂಗಭೂಮಿಗೆ ವಿಶೇಷ ಸ್ಥಾನ ಮಾನ, ಗೌರವ.

ಇಲ್ಲಿ 40ಕ್ಕೂ ಅಧಿಕ ವೃತ್ತಿಪರ ತಂಡ ಹಾಗೂ ಅದಕ್ಕೂ ಹೆಚ್ಚಿನ ಹವ್ಯಾಸಿ ನಾಟಕ ತಂಡಗಳು ಸದ್ಯ ಇವೆ. ದೇವದಾಸ್‌ ಕಾಪಿಕಾಡ್‌, ವಿಜಯ್‌ಕುಮಾರ್‌ ಕೊಡಿಯಾಲ್‌ಬೈಲ್‌, ಕಿಶೋರ್‌ ಡಿ. ಶೆಟ್ಟಿ ಸಹಿತ ಹಲವು ಪ್ರಮುಖರ ನಾಯಕತ್ವದ ನಾಟಕ ತಂಡಗಳು ತುಳು ರಂಗಭೂಮಿಯಲ್ಲಿ ವಿಭಿನ್ನ ನಾಟಕಗಳನ್ನು ನೀಡುವುದರ ಮೂಲಕ ಮಿಂಚುತ್ತಿದ್ದಾರೆ. ಇನ್ನು ಶಾರದಾ ಆರ್ಟ್ಸ್ ಮಂಜೇಶ್ವರ, ಕಾಪು ರಂಗ ತರಂಗ, ವಿಜಯ ಕಲಾವಿದೆರ್‌, ಅಮ್ಮ ಕಲಾವಿದೆರ್‌, ನಮ್ಮ ಕಲಾವಿದೆರ್‌, ಅಭಿನಯ ಕಲಾವಿದೆರ್‌, ವಿಧಾತ್ರಿ ಕಲಾವಿದೆರ್‌, ವೈಷ್ಣವಿ ಕಲಾವಿದೆರ್‌… ಹೀಗೆ ನಾಟಕ ತಂಡಗಳ ಪಟ್ಟಿ ದೊಡ್ಡದಿದೆ. ಹಾಸ್ಯ, ಕಥೆ, ಹಾರರ್‌, ಕುತೂಹಲ ಹೀಗೆ ಕೆಲವು ಆಯಾಮದ ಮೂಲಕವೇ ನಾಟಕ ಮನ ಗೆಲ್ಲುತ್ತವೆ. “ಶಿವದೂತೆ ಗುಳಿಗೆ’ಯ ಸ್ವರೂಪದಲ್ಲಿ ಪೌರಾಣಿಕ ನಾಟಕವೂ ಇತ್ತೀಚೆಗೆ ಸಾಕಷ್ಟು ಸದ್ದು ಮಾಡುತ್ತಿರುವುದು ಮತ್ತೂಂದು ವಿಶೇಷ.ಹಗಲಿಡೀ ಕೆಲಸ ಒತ್ತಡ ನಿಭಾಯಿಸಿಕೊಂಡು ರಾತ್ರಿ ನಾಟಕ ನೋಡುವ “ಮೂಡ್‌’ ಯಾರಿಗೆ ಇದೆ? ಎಂದು ಕರಾವಳಿಯಲ್ಲಿ ಕೇಳುವಂತಿಲ್ಲ. ಯಾಕೆಂದರೆ ಇಲ್ಲಿನ ಒಂದೊಂದು ನಾಟಕ ತಂಡವು ಒಂದೊಂದು ವಿಷಯದಲ್ಲಿ ಹೊಸ ಮಜಲು ಸೃಷ್ಟಿಸಿದೆ.


ಒಂದನ್ನೊಂದು ಮೀರಿಸುವ ನಾಟಕ ತಂಡಗಳು ಒಂದೆಡೆಯಾದರೆ, ಕಲಾವಿದರ “ನಾಮಧೇಯ’ದ ಬಲ ಮತ್ತೂಂದೆಡೆ; ಇನ್ನೊಂದೆಡೆ ಕಥೆ, ಹೊಸತನ, ಪ್ರಸ್ತುತಿ, ಆಕರ್ಷಕತೆ, ಸಾಹಿತ್ಯ, ಗೀತರಚನೆ, ಸಂಭಾಷಣೆ… ಹೀಗೆ ನಾನಾ ಕೋನಗಳಿಂದ ತುಳು ನಾಟಕ ತುಳುನಾಡಿಗೆ ಎವರ್‌ಗ್ರೀನ್‌. ಅಂದಹಾಗೆ, ಯಾವುದೇ ಹೊಸ ಪ್ರಯೋಗ ಬಂದರೂ ಕೂಡ ತುಳು ರಂಗಭೂಮಿಗೆ ಯಾವುದೇ ಆಪತ್ತು ಇಲ್ಲ ಬರುವುದೂ ಇಲ್ಲ. ಯಾಕೆಂದರೆ ಕಲೆಯನ್ನು ನೇರವಾಗಿ ಆ ಕ್ಷಣದಲ್ಲೇ ಸಂಭ್ರಮಿಸುವ ಕಲಾಪೋಷಕ ಮನಸ್ಸು ಕರಾವಳಿ ಭಾಗದಲ್ಲಿ ಚಿರಂತನ.

Advertisement

1933ರಲ್ಲೇ ಆರಂಭವಾದ ತುಳು ನಾಟಕ
ಕೋಸ್ಟಲ್‌ವುಡ್‌ಗೆ ಮೂಲ ಅಡಿಪಾಯವೇ ತುಳು ರಂಗಭೂಮಿ. 1970ರಲ್ಲಿ ತುಳು ಸಿನೆಮಾ ಪ್ರದರ್ಶನ ಆರಂಭಿಸಿದರೆ, ತುಳು ರಂಗಭೂಮಿ ಸರಿಸುಮಾರು 1933ರಲ್ಲಿಯೇ ಆರಂಭವಾಗಿತ್ತು. ಮಂಗಳೂರಿನ ಮಾಧವ ತಿಂಗಳಾಯರು ಬರೆದ “ಜನಮರ್ಲ್’ ತುಳುವಿನ ಪ್ರಾರಂಭಿಕ ನಾಟಕ ಎಂಬುದು ಲೆಕ್ಕಾಚಾರ. ಈ ಸಮಯದಲ್ಲಿ ಪಡುಬಿದ್ರಿ ಶಿವಣ್ಣ ಹೆಗ್ಡೆ ಅವರ “ವಿದ್ಯೆದ ತಾದಿ’ 1936ರಲ್ಲಿ, 1945ರಲ್ಲಿ ಕೆಮೂ¤ರು ದೊಡ್ಡಣ್ಣ ಶೆಟ್ಟಿಯವರ “ರಂಗ್‌ದ ಗೊಬ್ಬು’ ಪ್ರದರ್ಶನ ಕಂಡಿತ್ತು. ಅವರ “ಮುತ್ತುನ ಮದೆ¾’ ಆ ಕಾಲದಲ್ಲಿ ಸಾವಿರ ಪ್ರದರ್ಶನ ಕಂಡಿತ್ತು. “ಬೆಚ್ಚ ಬೆಚ್ಚ ಗಂಜಿ ಉಂಡು, ಲತ್ತ್ ಮುಂಚಿ ಚಟ್ನಿ ಉಂಡು.. ಬತ್ತ್ ದೊಂತೆ ಉಂಡ್ರು ಪೋಲೆ, ಬತ್ತ್ದೊಂತೆ ಉಂಡ್ರು ಪೋಲೆ’ ಹಾಡು ಈಗಲೂ ಕೆಲವರಿಗೆ ನೆನಪಿದೆ.


ಕನ್ನಡ ಕೊಂಕಣಿಯಲ್ಲಿ ಆಶಾಭಾವ

ತುಳು ರಂಗಭೂಮಿಯ ಮಧ್ಯೆಯೂ ಕರಾವಳಿಯಲ್ಲಿ ಕನ್ನಡ ರಂಗಭೂಮಿಯೂ ಸಾಕಷ್ಟು ಸದ್ದು ಮಾಡಿದೆ. ಕನ್ನಡ ರಂಗಭೂಮಿಯಲ್ಲಿಯೂ ಕುತೂಹಲ ಭರಿತ ನಾಟಕ ಪ್ರದರ್ಶನ ಕಾಣುತ್ತಿದೆ. ಇಲ್ಲೂ ಕೂಡ ಪ್ರಸಿದ್ದ ನಾಮಧೇಯರ ನಾಟಕಗಳು ಆಯ್ದ ಪ್ರೇಕ್ಷಕರನ್ನು ಆಕರ್ಷಿಸುತ್ತಿರುವುದು ಆಶಾಭಾವದ ಸಂಗತಿ. ಇನ್ನು, ಕೊಂಕಣಿ ರಂಗಭೂಮಿಯಲ್ಲಿಯೂ ಕೆಲವು ನಾಟಕಗಳು ಬರುತ್ತಿವೆ. ಕರಾವಳಿಯಲ್ಲಿ ಕೊಂಕಣಿ ಭಾಷಿಕರು ಸಾಕಷ್ಟು ಸಂಖ್ಯೆಯಲ್ಲಿದ್ದು ಇನ್ನಷ್ಟು ನಾಟಕಗಳನ್ನು ರಂಗಕ್ಕೆ ತರಲು ಇನ್ನಷ್ಟು ಹೆಚ್ಚಿನ ಪ್ರಯತ್ನ ಆಗಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next