ಉಡುಪಿ: ಕೋವಿಡ್ ಲಸಿಕೆಯ ಬಗ್ಗೆಯೂ ಕೆಲವು ಪಕ್ಷಗಳು ಅಪಪ್ರಚಾರ ಮಾಡುತ್ತಿರುವುದು ದುರ್ದೈವದ ಸಂಗತಿ. ಜನರ ಆರೋಗ್ಯದ ದೃಷ್ಟಿಗಿಂತ ನಮ್ಮ ದೇಶದಲ್ಲಿ ತಯಾರಾದ ಔಷಧದ ಬಗ್ಗೆ ಅಪ ಪ್ರಚಾರ ಮಾಡುವುದೇ ಷಡ್ಯಂತ್ರವಾಗಿದೆ ಎಂದು ಬಿಜೆಪಿ ರಾ. ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪ್ರಧಾನಿ ಈ ಬಗ್ಗೆ ಸ್ಪಷ್ಟಪಡಿಸಿ¨ªಾರೆ. ಸಂಪೂರ್ಣ ಮುನ್ನೆಚ್ಚರಿಕೆಗಳೊಂದಿಗೆ ಲಸಿಕೆ ಕೊಡುವ ಕಾರ್ಯಕ್ರಮ ಮಾಡುತ್ತೇವೆ ಎಂದರು.
ನಮ್ಮ ದೇಶದಲ್ಲಿ ಲಸಿಕೆ ತಯಾರಾದರೆ ಕೆಲವರಿಗೆ ನಂಬಿಕೆಯೇ ಇಲ್ಲ. ನಮ್ಮ ವಿಜ್ಞಾನಿಗಳ ಮೇಲೆಯೂ ವಿಶ್ವಾಸವಿಲ್ಲ. ಆದರೆ ಅದು ಇಟಲಿಯಿಂದ ಬರುವುದಾಗಿ ದ್ದರೆ ಬರುವ ಮೊದಲೇ ಬಹಳ ಒಳ್ಳೆಯದು ಎನ್ನುವ ಸರ್ಟಿಫಿಕೇಟ್ ಕೊಡುತ್ತಿದ್ದರು ಎಂದು ರವಿ ಕಾಂಗ್ರೆಸ್‌ನ ಹೆಸರನ್ನು ಹೇಳದೆ ಕುಟುಕಿದರು.
2 ದಿನದೊಳಗೆ ಲಸಿಕೆ ;
ಮಂಗಳೂರು: ಮೊದಲ ಹಂತದ ಲಸಿಕೆ ಮಂಗಳವಾರ ಬೆಂಗಳೂರು ತಲುಪಿದ್ದು, ಇಂದು ಅಥವಾ ನಾಳೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಕೇಂದ್ರಕ್ಕೆ ರವಾನೆಯಾಗುವ ನಿರೀಕ್ಷೆ ಇದೆ. ಜ. 16ರಂದು ಜಿಲ್ಲೆಯ
6 ಕೇಂದ್ರಗಳಲ್ಲಿ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಿಗೆ ಮಂಗಳೂರಿನಿಂದಲೇ ಲಸಿಕೆ ರವಾನೆ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.