Advertisement
ಮರಳು ದಿಬ್ಬಗಳಿಂದ ಮರಳು ತೆಗೆಯುವ ಕುರಿತು ಅನುಸರಿಸಬೇಕಾದ ಕ್ರಮಗಳೇನು ಎಂದು ಸೂಕ್ತ ನಿರ್ದೇಶನ ಕೋರಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರನ್ನು ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಕೋರಲಾಗಿತ್ತು. ಈ ಬಗ್ಗೆ ಸರಕಾರದ ಅರಣ್ಯ, ಪರಿಸರ ಇಲಾಖೆಯ ಕಾರ್ಯದರ್ಶಿಗಳು ಉತ್ತರಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದಿಂದ ಹೊರಡಿಸುವ ಆದೇಶವನ್ನು ನಿರೀಕ್ಷಿಸುವಂತೆ ತಿಳಿಸಿದ್ದಾರೆ. ಹಾಗಾಗಿ ಈ ವಿಚಾರವೀಗ ಮತ್ತಷ್ಟು ಜಟಿಲಗೊಂಡಿದೆ.
Related Articles
ಜಿಲ್ಲೆಯ ನಾನ್ ಸಿಆರ್‌ಝಡ್ ಪ್ರದೇಶದಲ್ಲಿ 29 ಬ್ಲಾಕ್‌ಗಳನ್ನು ಈಗಾಗಲೇ ಗುರುತಿಸಿ ಗುತ್ತಿಗೆ ನೀಡಲಾಗಿದ್ದು, ಅದರ ಮರಳನ್ನು ಬಳಸಬಹುದು ಎನ್ನುತ್ತಾರೆ ಅಧಿಕಾರಿಗಳು. ನಿರ್ಮಾಣ ಚಟುವಟಿಕೆಗಳಿಗೆ ಈ ಮರಳು ಬಳಸಬಹುದು ಎನ್ನುತ್ತಾರಾದರೂ ಗುತ್ತಿಗೆದಾರರ ಪ್ರಕಾರ ಈ ಮರಳು ಒಳಪ್ರದೇಶಗಳಿಂದ ಬರುವ ಕಾರಣ ದರ ಜಾಸ್ತಿ.
ಸದ್ಯಕ್ಕೆ ಗುತ್ತಿಗೆದಾರರು ರಾತ್ರಿ ಅಕ್ರಮವಾಗಿ ಬರುವ ಸಿಆರ್‌ಝಡ್‌ನ ಮರಳನ್ನೇ ನೆಚ್ಚಿಕೊಂಡಿದ್ದಾರೆ. ಈ ಮರಳು ಉತ್ತಮ ದರ್ಜೆಯದ್ದು, ಅಲ್ಲದೆ ದರವೂ ಕಡಿಮೆ ಎನ್ನುವ ಕಾರಣಕ್ಕೆ ಅದನ್ನೇ ಬಳಸುವುದು ಜಾಸ್ತಿ.
Advertisement
ಒಂದು ವರ್ಷದಿಂದ ಸಿಆರ್‌ಝಡ್ ಮರಳಿಲ್ಲ2023ರ ಮೇ ಬಳಿಕ ಜಿಲ್ಲೆಯಲ್ಲಿ ಸಿಆರ್‌ಝಡ್ ಪ್ರದೇಶದ ಮರಳು ತೆಗೆಯುವುದು ಸಾಧ್ಯವಾಗಿಲ್ಲ. ಸಿಆರ್‌ಝಡ್ ಪ್ರದೇಶದ ಮರಳನ್ನು ವಾಣಿಜ್ಯವಾಗಿ ಮಾರಾಟ ಮಾಡುವುದಕ್ಕೆ ಹಿಂದೆ ಸಿಆರ್‌ಝಡ್ ನಿಯಮಗಳ ಪ್ರಕಾರ ಅವಕಾಶ ಇರಲಿಲ್ಲ. ಕೇವಲ ಮರಳು ದಿಬ್ಬಗಳ ಮರಳನ್ನು ತೆರವು ಮಾಡಿ, ನದಿಯಲ್ಲೇಇರುವ ಹೊಂಡಗಳಿಗೆ ತುಂಬುವುದಕ್ಕೆ ಮಾತ್ರ ಅವಕಾಶ. ಮಾರಾಟ ಮಾಡುವಂತಿಲ್ಲ. ಪ್ರಸ್ತುತ ಹೊಸ ಸಿಆರ್‌ಝಡ್ ನಿಯಮಗಳು ಜಾರಿಗೆ ಬಂದಿದ್ದರೂ ಮರಳು ತೆರವಿನ ಕುರಿತು ಮಾರ್ಗಸೂಚಿಗಳು ಇನ್ನೂ ಬಾರದಿರುವುದು ಸಮಸ್ಯೆಗೆ ಕಾರಣ. ಈ ಎಲ್ಲ ಕಾರಣಗಳಿಂದ ಈ ಸೀಸನ್‌ನಲ್ಲೂ ಸಿಆರ್‌ಝಡ್ ಮರಳು ಸಿಗುವ ಸಾಧ್ಯತೆ ಕಡಿಮೆ. ಏನಿದ್ದರೂ ಕೇಂದ್ರ ಪರಿಸರ ಸಚಿವಾಲಯದಿಂದ ಮಾರ್ಗಸೂಚಿ ಬರಬೇಕಿದೆ. ಸಿಆರ್‌ಝಡ್ ವ್ಯಾಪ್ತಿ ಇರುವ ದ.ಕ. ಜಿಲ್ಲೆ ಹಾಗೂ ಉಡುಪಿಯಲ್ಲಿ ಮರಳು ತೆಗೆಯುವಂತಿಲ್ಲ, ಆದರೆ ಕಾರವಾರದಲ್ಲಿ ಅಲ್ಲಿನ ಜಿಲ್ಲಾಧಿಕಾರಿ ಮಾತ್ರ ಮರಳು ತೆರವಿಗೆ ಆದೇಶ ಮಾಡಿದ್ದಾರೆ. ಅವರು ಯಾವ ಮಾನದಂಡ ಅನುಸರಿಸಿದ್ದಾರೆ ತಿಳಿಯದು. ಅಲ್ಲಿ ಕೊಡುವಾಗ ಇಲ್ಲಿ ಯಾಕಿಲ್ಲ ಎನ್ನುವುದು ಕೆಲವು ಮರಳು ತೆಗೆಯುವವರ ಪ್ರಶ್ನೆ. -ವೇಣುವಿನೋದ್ ಕೆ.ಎಸ್.