Advertisement
ಗುರುವಾರ ದಿಲ್ಲಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, “ಯಾರು ಹಿಂದೂ ಧರ್ಮದ ಭಾವನೆಗಳನ್ನು ಗೌರವಿಸುತ್ತಾರೋ, ಅವರು ದೇವಾಲಯಗಳಿಗೆ ಹೋಗುತ್ತಾರೆ. ಪ್ರಧಾನಿ ಮೋದಿ ಅವರು ಎಷ್ಟು ಬಾರಿ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ? ಪ್ರತಿ ದಿನ ಬೆಳಗ್ಗೆದ್ದು ಅವರು ದೇಗುಲಕ್ಕೆ ಹೋಗಿದ್ದನ್ನು ಯಾರಾದರೂ ನೋಡಿದ್ದೀರಾ? ಮೋದಿ ಅವರು ಹಿಂದುತ್ವಕ್ಕಾಗಿ ಹಿಂದೂ ಧರ್ಮವನ್ನೇ ತೊರೆದಿದ್ದಾರೆ’ ಎಂದು ಹೇಳಿದ್ದಾರೆ. ಅಲ್ಲದೆ, “ಪ್ರತಿ ಯೊಬ್ಬ ಭಾರತೀಯನನ್ನೂ ತನ್ನ ಸಹೋದರ, ಸಹೋ ದರಿ ಅಥವಾ ತಾಯಿ ಎಂದು ಪರಿಗಣಿಸುವವನು, ಇತರರ ಭಾವನೆಗಳಿಗೆ ನೋವುಂಟುಮಾಡದವನು, ಹಿಂಸೆಯ ವಿರುದ್ಧ ಕೂಡಲೇ ಧ್ವನಿ ಎತ್ತುವವನು, ಎಲ್ಲದರಲ್ಲೂ ರಾಜಕೀಯ ಮಾಡದವನು, ರೈತರ ಬಳಿ ಹೋಗಿ ಅವರ ಸಂಕಷ್ಟವನ್ನು ಅರ್ಥಮಾಡಿಕೊಳ್ಳುವವನೇ ನೈಜ ಹಿಂದೂ,’ ಎಂದೂ ಸಿಬಲ್ ನುಡಿದಿದ್ದಾರೆ. ಜತೆಗೆ, ಗುಜರಾತ್‌ನಲ್ಲಿ ಬಿಜೆಪಿಯವರು ಜಿಎಸ್‌ಟಿ ಬಗ್ಗೆ ಸೊಲ್ಲೆತ್ತುತ್ತಿಲ್ಲ. ಅಂದರೆ, ಚುನಾವಣೆಯಲ್ಲಿ ಅಭಿವೃದ್ಧಿ ಆಧಾರಿತ ವಿಚಾರಗಳು ಮೂಲೆ ಸೇರಿವೆ ಎಂದಿದ್ದಾರೆ.
Related Articles
ಫಲೋಡಿ ಮತ್ತು ಬಿಕಾನೇರ್‌ನ ಬೆಟ್ಟಿಂಗ್ ಮಾರುಕಟ್ಟೆಯ ಬುಕಿ ಗಳ ಪ್ರಕಾರ, ಈ ಬಾರಿಯೂ ಗುಜರಾತ್‌ನಲ್ಲಿ ಗೆಲುವು ಸಾಧಿಸು ವುದು ಬಿಜೆಪಿಯೇ. ಆದರೆ, ಸೀಟುಗಳ ಸಂಖ್ಯೆಯಲ್ಲಿ ಮಾತ್ರ ಇಳಿಕೆ ಖಚಿತ. ಬಿಜೆಪಿ 107ರಿಂದ 110 ಸೀಟುಗಳಲ್ಲಿ ಗೆದ್ದರೆ, ಕಾಂಗ್ರೆಸ್‌ಗೆ 70-72 ಸ್ಥಾನಗಳು ಸಿಗಲಿವೆ ಎಂದು ಬುಕಿಗಳು ಭವಿಷ್ಯ ನುಡಿಯುತ್ತಿದ್ದಾರೆ. ಅದರಂತೆಯೇ, ಬೆಟ್ಟಿಂಗ್ ಕೂಡ ಸಾಗಿದೆ. ಇಲ್ಲಿ ಬಿಜೆಪಿ ದರ 50 ಪೈಸೆ ಇದ್ದರೆ, ಕಾಂಗ್ರೆಸ್‌ನದ್ದು 2 ರೂ. ಪ್ರಧಾನಿ ಮೋದಿ ಅವರ ಸರಣಿ ರ್ಯಾಲಿಗಳ ಬಳಿಕ ಈ ಟ್ರೆಂಡ್ ಕೂಡ ಬದಲಾಗುವ ಸಾಧ್ಯತೆಯಿದೆ ಎಂದೂ ಅಂದಾಜಿಸಲಾಗಿದೆ.
Advertisement