Advertisement
ವೇಗ ಸಿಕ್ಕಿಲ್ಲರೈತರೇ ತಮ್ಮ ಮೊಬೈಲ್‌ನಲ್ಲಿ ಬೆಳೆ ಸಮೀಕ್ಷೆ ನಡೆಸಲು ಸರಕಾರ ಆ. 10ರಿಂದ 24ರ ವರೆಗೆ ಮುಕ್ತ ಅವಕಾಶ ನೀಡುವ ಮೂಲಕ ರೈತರರನ್ನು ಡಿಜಿಟಲ್ ಕ್ರಾಂತಿಗೊಳಪಡಿಸಿತ್ತು. ಆದರೆ ದ.ಕ. ಜಿಲ್ಲೆಯಲ್ಲಿ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿಲ್ಲ. ದ.ಕ. ಜಿಲ್ಲೆ ಮಾತ್ರವಲ್ಲದೆ ರಾಜ್ಯಾದ್ಯಂತ ಇದೇ ಪರಿಸ್ಥಿತಿ ಇದೆ.
ಮೊಬೈಲ್ ಮೂಲಕ ರೈತರೇ ಬೆಳೆ ಸಮೀಕ್ಷೆ ನಡೆಸಲು ಈ ಹಿಂದೆ ಆ. 24 ಕೊನೆ ದಿನಾಂಕವಾಗಿದ್ದು, ಬಳಿಕ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಸೆ. 23ರ ವರೆಗೆ ವಿಸ್ತರಣೆ ಮಾಡುವುದಾಗಿ ಘೋಷಿಸಿದ್ದರು. ಆದರೆ ಇಲಾಖೆಗೆ ಈ ಕುರಿತು ಅಧಿಕೃತ ಮಾಹಿತಿ ಬಂದಿಲ್ಲ. ಇನ್ನು ಮುಂದೆ ಕೃಷಿ ಇಲಾಖೆ ನೇಮಿಸಿದ ಖಾಸಗಿ ವ್ಯಕ್ತಿಗಳ ಸಹಾಯದಿಂದ ನೋಂದಣಿ ಮಾಡಬೇಕಿದೆ. ಅವರಿಗೆ ಸರಕಾರ ಒಂದು ಪ್ಲಾಟ್ ನೋಂದಣಿಗೆ ಇಂತಿಷ್ಟು ಕಮಿಷನ್ ರೂಪದಲ್ಲಿ ಟಾರ್ಗೆಟ್ ನೀಡಿದೆ. ರೈತರ ನೇರ ಸಹಭಾಗಿತ್ವದದ ಕೃಷಿ ಇಲಾಖೆ ಈ ಯೋಜನೆಯಿಂದ ನಿಖರ ಮಾಹಿತಿ ಸಂಗ್ರಹಿಸಲು ಪೂರಕವಾಗಿದ್ದರೂ ನೋಂದಣಿಯಿಂದ ಹಿಂದುಳಿದಿದೆ. ರಾಜ್ಯದಲ್ಲಿ 2.12 ಕೋಟಿ ಕೃಷಿ ಕ್ಷೇತ್ರದ ಬೆಳೆ ಸಮೀಕ್ಷೆಗೆ ಉದ್ದೇಶಿಸಿದ್ದರೂ 14 ದಿನಗಳಲ್ಲಿ 10 ಲಕ್ಷ ರೈತರಷ್ಟೇ ಖುದ್ದಾಗಿ ಬೆಳೆ ಸಮೀಕ್ಷೆ ಕೈಗೊಂಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಡಿಜಿಟಲ್ ತಂತ್ರಜ್ಞಾನಕ್ಕೆ ರೈತರು ಒಗ್ಗಿಕೊಳ್ಳದೇ ಇರುವುದು ಒಂದೆಡೆಯಾದರೆ, ಪಟ್ಟಣಗಳಲ್ಲೇ ನಿರ್ಲಕ್ಷéಕೊಳಗಾಗಿದೆ.
Related Articles
ಪರಿವರ್ತಿತ ಭೂ ಪ್ರದೇಶ ಹೊರತುಪಡಿಸಿ ಪಾಳು ಬಿದ್ದ ಭೂಮಿ ಇದ್ದಲ್ಲಿಯೂ ಸರ್ವೆ ನಂ. ಆಧಾರದಲ್ಲಿ ನೋಂದಣಿ ಮಾಡಬೇಕಿದೆ. ಕೃಷಿ ಮಾತ್ರವಲ್ಲದೆ, ಹಟ್ಟಿ, ಫಾರ್ಮ್, ಇನ್ನಿತರ ಉಪ ಬೆಳೆಗಳ ಬಗ್ಗೆ ನೋಂದಣಿ ಕಡ್ಡಾಯವಾಗಿದೆ. ಕೋವಿಡ್ ನಡುವೆ ಹೆಚ್ಚಿನ ಮಂದಿ ಸಮೀಕ್ಷೆಗೆ ಆಸಕ್ತಿ ತೋರಿಲ್ಲ. ಇತ್ತ ಪ್ರತಿ ತಾಲೂಕುವಾರು ಕೃಷಿ ಇಲಾಖೆಯಲ್ಲಿ 20ಕ್ಕೂ ಹೆಚ್ಚು ಸಿಬಂದಿ ಕೊರತೆಗಳಿರುವುದರಿಂದ ಸಂಪೂರ್ಣವಾಗಿ ರೈತರ ಬಳಿಗೆ ತಲುಪಲೂ ಸಾಧ್ಯವಾಗತ್ತಿಲ್ಲ. ಪ್ರಸಕ್ತ ಇಲಾಖೆ ಕೆಲಸದ ಒತ್ತಡದಿಂದಾಗಿ ವೃತ್ತಿಗೆ ರಾಜೀನಾಮೆ ನೀಡುವ ಮಟ್ಟಕ್ಕೆ ಸಿಬಂದಿ ಹೈರಾಣಾಗಿದ್ದಾರೆ.
Advertisement
ಗ್ರಾಮೀಣ ಭಾಗದಲ್ಲಿ ಜಿಪಿಎಸ್ ಅಡ್ಡಿಯಾಗುವುದರಿಂದ 4ಜಿ ನೆಟ್‌ವರ್ಕ್ ವ್ಯಾಪ್ತಿಯಲ್ಲೂ ಅಪ್ಲೋಡಿಂಗ್ ಸಮಸ್ಯೆ ಕಂಡುಬರುತ್ತಿದೆ. ಬಿಎಸ್‌ಎನ್‌ಎಲ್ ಇನ್ನೂ 3ಜಿ ಸೇವೆಯಲ್ಲಿರುವುದು ಒಂದೆಡೆಯಾದರೆ, ಗ್ರಾಮೀಣ ಭಾಗದ ಬಹುತೇಕ ರೈತರು ಸ್ಮಾರ್ಟ್ ಫೋನ್ ಹೊಂದಿಲ್ಲ. ಹಿರಿಯ ರೈತರಿಗೆ ಮೊಬೈಲ್ ಮೂಲಕ ಬೆಳೆ ಸಮೀಕ್ಷೆ ಮಾಡುವ ಮಾಹಿತಿ ಇಲ್ಲ. ಮಕ್ಕಳು ಹಾಗೂ ಅನ್ಯರನ್ನು ಅವಲಂಬಿತವಾಗಬೇಕಿದೆ.
ಕೃಷಿಕರೇ ಹೆಚ್ಚಿನ ಆಸಕ್ತಿ ತೋರಬೇಕಿದೆಈ ನಡುವೆ ಜಿಲ್ಲೆಯಲ್ಲಿ ಪ್ರತಿ ತಾಲೂಕಿಗೆ ಪುತ್ತೂರು-65, ಬಂಟ್ವಾಳ-165, ಬೆಳ್ತಂಗಡಿ-152, ಮಂಗಳೂರು-165, ಮೂಡುಬಿದಿರೆ -50, ಸುಳ್ಯ-60 ಕಡಬ-55 ಸಹಿತ 712 ಮಂದಿ ಖಾಸಗಿ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಇವರ ಮೂಲಕ ಬೆಳೆ ಸಮೀಕ್ಷೆ ನಡೆಸಬಹುದಾಗಿದೆ.
ಮುಖ್ಯವಾಗಿ ಕೃಷಿಕರೇ ಹೆಚ್ಚಿನ ಆಸಕ್ತಿ ತೋರಿ ಬೆಳೆ ಸಮೀಕ್ಷೆಗೆ ಮುಂದಾದಾಗ ಸರಕಾರದ ಯೋಜನೆ ಫಲಪ್ರದವಾಗಲಿದೆ. ಮಂಗಳೂರಿನಲ್ಲಿ 6,859 ಪ್ಲಾಟ್‌ಗಳು ನೋಂದಣಿ
ಜಿಲ್ಲೆಯಲ್ಲಿ ಮಂಗಳೂರಿನಲ್ಲಿ ಗರಿಷ್ಠ 6,859 ಪ್ಲಾಟ್‌ಗಳು ನೋಂದಣಿಯಾಗಿದ್ದು, 2ನೇ ಸ್ಥಾನದಲ್ಲಿ ಬೆಳ್ತಂಗಡಿ 6,307 ಪ್ಲಾಟ್‌ಗಳು ನೋಂದಣಿ ಯಾಗಿವೆ. ಉಳಿದಂತೆ ಬಂಟ್ವಾಳ 4,703, ಮೂಡು ಬಿದಿರೆ 4,422, ಸುಳ್ಯ 3,424, ಪುತ್ತೂರು 5,422, ಕಡಬ 3,726 ಪ್ಲಾಟ್‌ಗಳು ನೋಂದಣಿಯಾಗಿವೆ. ಜಿಲ್ಲೆಯಲ್ಲಿ ಒಟ್ಟು 9,62,012 ಪ್ಲಾಟ್‌ಗಳ ಪೈಕಿ ಕೇವಲ 34,863 (ಆ. 24ರ ವರೆಗೆ ) ಪ್ಲಾಟ್‌ಗಳಷ್ಟೆ ನೋಂದಣಿಗೊಂಡಿವೆ. ತಾಂತ್ರಿಕ ತೊಂದರೆಗಳು, ಮಾಹಿತಿ ಕೊರತೆ, ನೋಂದಣಿಗೆ ರೈತರ ನಿರಾಸಕ್ತಿ, ಜಿಪಿಎಸ್ ಸಮಸ್ಯೆಗಳಿಂದ ಗುರಿ ತಲುಪದಿರುವ ಸಾಧ್ಯತೆ ಹೆಚ್ಚಿದೆ. ಅಧಿಕೃತ ಮಾಹಿತಿ ಬರಬೇಕಿದೆ
ರೈತರೇ ಬೆಳೆ ಸಮೀಕ್ಷೆ ಮಾಡುವ ಉತ್ತಮ ಅವಕಾಶ ಇದಾಗಿದ್ದು, ಸೆ. 23ರ ವರೆಗೆ ದಿನಾಂಕ ವಿಸ್ತಾರ ಮಾಡಿರುವುದಾಗಿ ಮಾಹಿತಿ ಇದೆ. ಈ ಕುರಿತು ಇಲಾಖೆಗೆ ಅಧಿಕೃತ ಮಾಹಿತಿ ಬರಬೇಕಿದೆ. ರೈತರು ಹೆಚ್ಚಾಗಿ ಆಸಕ್ತಿ ತೋರಿ ಸಮೀಕ್ಷೆಯಲ್ಲಿ ತೊಡಗಿಸಿಕೊಂಡಲ್ಲಿ ಯೋಜನೆಗೆ ಮಹತ್ವ ಬರಲಿದೆ.
-ಸೀತಾ, ಜಂಟಿ ಕೃಷಿ ನಿರ್ದೇಶಕರು ದ.ಕ. ಜಿಲ್ಲೆ