Advertisement
ಕೆಲವು ವರ್ಷಗಳ ಹಿಂದೆ ತಮ್ಮ ಮನೆ ಮುಂಭಾಗದಲ್ಲಿ ಕೆಲವು ಕಾಫಿ ಗಿಡಗಳನ್ನು ನೆಟ್ಟಿದ್ದರಂತೆ. ಅದು ಹುಲುಸಾಗಿ ಬೆಳೆದು ಕಾಯಿ ಬಿಟ್ಟವು. ಈ ಪ್ರಾಯೋಗಿಕ ಹಂತದಿಂದ ಹುಮ್ಮಸ್ಸು ಹೊಂದಿ ಕಾಫಿ ಬೆಳೆ ವಿಸ್ತರಣೆಗೆ ಮುಂದಾಗಿದ್ದಾರೆ.
Related Articles
Advertisement
ಆರು ಬಗೆಯ ಕೃಷಿಮಿಶ್ರ ಪದ್ಧತಿಯ ಕೃಷಿ ಅತ್ಯುತ್ತಮ ಅನ್ನುವ ರೈಗಳು, ತನ್ನ ತೋಟದಲ್ಲಿ ಅಡಿಕೆ, ಕಾಳುಮೆಣಸು, ರಬ್ಬರ್, ಕಾಫಿ, ಸಿಲ್ವರ್, ಕೊಕ್ಕೊ ಬೆಳೆಸಿದ್ದಾರೆ. ಅಡಿಕೆ 6 ಸಾವಿರ, ಕಾಳುಮೆಣಸು 4 ಸಾವಿರ, ಸಿಲ್ವರ್ 1 ಸಾವಿರ, ರಬ್ಬರ್ 600 ಗಿಡಗಳಿವೆ. ಸಿಲ್ವರ್ ಗಿಡ
ರೈಗಳ ತೋಟದಲ್ಲಿ ಬೆಳೆದು ನಿಂತಿರುವ ಸುಮಾರು 1 ಸಾವಿರ ಸ್ವಿಲರ್ ಗಿಡಗಳು ಕಾಫಿಗೆ ನೆರಳಾಗುತ್ತಿದ್ದು, ಜತೆಗೆ ಕಾಳು ಮೆಣಸು ಬಳ್ಳಿಗೆ ಆಸರೆಯಾಗಿವೆ. ಸ್ವಿಲರ್ ಮರಗಳಿಗೆ ಟನ್ಗೆ 10ರಿಂದ 12 ಸಾವಿರ ತನಕವೂ ಧಾರಣೆ ಇದೆ. ಇದನ್ನು ಹಾಸನ ಭಾಗದ ಕಾರ್ಖಾನೆಗಳು ಖರೀದಿಸುತ್ತಿದ್ದು, ವಿದೇಶಗಳಿಂದಲೂ ಬೇಡಿಕೆ ಇದೆ. ನೀರುಣಿಸಲು ಸುಧಾರಿತ ತಂತ್ರಜ್ಞಾನ
20 ಎಕ್ರೆ ಕೃಷಿ ಭೂಮಿಗೆ ನೀರು ಹರಿಸಲು ಸ್ವಯಂಚಾಲಿತ ವಿಧಾನ ಅಳವಡಿಸಲಾಗಿದೆ. ಕಾಫಿ, ಕಾಳುಮೆಣಸು, ಸಿಲ್ವರ್, ಅಡಿಕೆ ತೋಟಕ್ಕೆ ಪ್ರತ್ಯೇಕ ಲೈನ್ ಅಳವಡಿಸಲಾಗಿದೆ. ಮೊಬೈಲ್ ಮೂಲಕ ಅನುಷ್ಠಾನ ಮಾಡಲಾಗುತ್ತಿದ್ದು, ಎಲ್ಲವನ್ನೂ ಆ್ಯಪ್ ಮೂಲಕ ಗಮನಿಸುವ ವ್ಯವಸ್ಥೆ ಇಲ್ಲಿದೆ. ಎಲ್ಲಿಗೆ ಎಷ್ಟು ಪ್ರಮಾಣದಲ್ಲಿ ನೀರು ಹರಿಸಬೇಕು ಎನ್ನುವುದನ್ನು ಮೊದಲೇ ನಿಗದಿಪಡಿಸಿದರೆ ಬಳಿಕ ತಾನಾಗಿಯೇ ಅವು ಕಾರ್ಯ ನಿರ್ವಹಿಸುತ್ತವೆ. ವಿದೇಶ ಪ್ರವಾಸ
ಅಜಿತ್ ಪ್ರಸಾದ್ ರೈಗಳು ಕಾಫಿ, ಕಾಳುಮೆಣಸಿನ ಕೃಷಿ ಅಧ್ಯಯನಕ್ಕಾಗಿ 70ರ ಇಳಿ ವಯಸ್ಸಿನಲ್ಲೂ ವಿಯೆಟ್ನಾಂ, ಕಾಂಬೋಡಿಯಾ ಸಹಿತ ಹಲವು ರಾಷ್ಟ್ರಗಳಿಗೆ ಹೋಗಿ ಬರುತ್ತಿದ್ದಾರೆ. ತೋಟ ವೀಕ್ಷಣೆಗೆಂದು ಬರುವ ನೂರಾರು ಮಂದಿಗೆ ತನ್ನ ಯಶೋಗಾಥೆಯನ್ನು ವಿವರಿಸುತ್ತಾರೆ. ಕಾಫಿ ಕೃಷಿಗೆ ಇಲ್ಲಿನ ವಾತಾವರಣ ಪೂರಕ. ಭವಿಷ್ಯದಲ್ಲಿ 20 ಎಕ್ರೆ ಪ್ರದೇಶದಲ್ಲೂ ಕಾಫಿ ಬೆಳೆಯುವ ಉದ್ದೇಶ ಹೊಂದಿದ್ದು, 10 ಸಾವಿರ ಗಿಡ ತರಲು ಸಿದ್ಧತೆ ನಡೆಸಿದ್ದೇನೆ. ಅಡಿಕೆ, ರಬ್ಬರ್, ಕಾಳುಮೆಣಸು ಜತೆಗೆ ಉಪ ಬೆಳೆಯಾಗಿ ಕಾಫಿಯನ್ನು ಬೆಳೆಯಬಹುದು. ಆದಾಯದಿಂದಲೂ ಕಾಫಿ ಅನುಕೂಲ. ಹಳದಿ ಎಲೆ ಬಾಧಿತ ಕೃಷಿ ತೋಟಗಳಲ್ಲಿ ಈ ಕೃಷಿ ಸಾಧ್ಯವಿದೆ.
-ಅಜಿತ್ ಪ್ರಸಾದ್ ರೈ
ಪ್ರಗತಿಪರ ಕೃಷಿಕ – ಕಿರಣ್ ಪ್ರಸಾದ್ ಕುಂಡಡ್ಕ