Advertisement

ರೈತರಿಗೆ ಬೆಳೆ ವಿಮೆ ಪಾಲಿಸಿ ವಿತರಣಾ ಅಭಿಯಾನ

01:30 PM Sep 03, 2022 | Team Udayavani |

ಬಾಗಲಕೋಟೆ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದ ರೈತರಿಗೆ ವಿಮಾ ಪಾಲಿಸಿಯನ್ನು ಸೆಪ್ಟೆಂಬರ್‌ ದಿಂದ ಅಭಿಯಾನದ ಮಾದರಿಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿತರಿಸಲಾಗುತ್ತದೆ ಎಂದು ಜಿಲ್ಲಾ ಧಿಕಾರಿ ಪಿ.ಸುನೀಲ್‌ಕುಮಾರ ತಿಳಿಸಿದ್ದಾರೆ.

Advertisement

ಈ ಕುರಿತು ಪ್ರಕಟಣೆ ಮೂಲಕ ತಿಳಿಸಿದ ಅವರು ಬೆಳೆ ವಿಮೆ ಮಾಡಿಸಿದ ಪ್ರತಿಯೊಬ್ಬ ರೈತರಿಗೆ ನನ್ನ ಪಾಲಿಸಿ ನನ್ನ ಕೈಯಲ್ಲಿ ಎಂಬ ಘೋಷವಾಕ್ಯದೊಂದಿಗೆ ರೈತರು ಮಾಡಿಸಿದ ಬೆಳೆಯ ವಿಮೆ ಮಾಹಿತಿ ಹಾಗೂ ಬೆಳೆ ವಿಮೆ ಯೋಜನೆಯ ಸಂಕ್ಷಿಪ್ತ ಮಾಹಿತಿಯನ್ನು ಒಳಗೊಂಡ ಪಾಲಿಸಿಯನ್ನು ವಿತರಿಸಲಾಗುತ್ತದೆ.

ಈ ಕಾರ್ಯದಲ್ಲಿ ಕಂದಾಯ ಮತ್ತು ಗ್ರಾಮೀಣ ಹಾಗೂ ಕೃಷಿ, ತೋಟಗಾರಿಕೆ, ಕೃಷಿ ವಿಜ್ಞಾನ ಕೇಂದ್ರ, ಜಿಲ್ಲಾ ಅಗ್ರಣೀಯ ಬ್ಯಾಂಕ್‌, ಜಿಲ್ಲಾ ಕೃಷಿ ಮಾರುಕಟ್ಟೆ ಇಲಾಖೆ, ಇ-ಆಡಳಿತ ಮತ್ತು ಬೆಳೆ ವಿಮೆ ಸಂಸ್ಥೆಯ ಸಹಯೋಗ ದೊಂದಿಗೆ ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಆ. 26ರವರೆಗೆ 24832 ರೈತರು ನೊಂದಾಯಿಸಿಕೊಂಡಿದ್ದಾರೆ. ಈ ಪೈಕಿ 4283 ಬೆಳೆ ಸಾಲ ಪಡೆದ ರೈತರು ಹಾಗೂ 20549 ಬೆಳೆ ಸಾಲ ಪಡೆಯದ ರೈತರು ಬೆಳೆ ವಿಮೆ ಮಾಡಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಬೆಳೆ ವಿಮೆ ಸಂಸ್ಥೆಯ ಪ್ರತಿನಿ ಗಳನ್ನು ಅಥವಾ ತಾಲ್ಲೂಕು, ಹೋಬಳಿ ಮಟ್ಟದ ಕೃಷಿ ಇಲಾಖೆಯ ಕಛೇರಿಗೆ ಭೇಟಿ ನೀಡಬಹುದಾಗಿದೆ. ಈ ಅಭಿಯಾನದ ಉದ್ದೇಶ ಬೆಳೆ ವಿಮೆ ಮಾಡಿಸಿದ ರೈತರಿಗೆ ಬೆಳೆ ವಿಮೆ ಮಾಹಿತಿಯೊಂದಿಗೆ ಪಾಲಿಸಿ ವಿತರಿಸಲಾಗುತ್ತಿದೆ.

3ರಂದು ಕಿತ್ತಲಿ, ಆಲೂರ ಎಸ್‌.ಕೆ, ಹೆಬ್ಬಳ್ಳಿ, ನೀಲಗುಂದ, ನಾಗರಾಳ ಎಸ್‌.ಪಿ, ಮಂಗಳಗುಡ್ಡ, ಲಾಯದ ಗುಂದಿ, ಬಿಲ್ಲಕೇರಿ, ತಿಮ್ಮಾಪೂರ, ಸೀತಿಮನಿ, ಮುಗಳೊಳ್ಳಿ, ಹಿರೇಮಾಗಿ, ಅಮೀನಗಡ, ಮರೋಳ, ಕಂದಗಲ್ಲ, ನಂದವಾಡಗಿ, ಕುಂದರಗಿ, ಕಾರತಕಿ, ಕಂದಗಲ್ಲ, ಕುಂಬಾರಹಳ್ಳ, ಕೊಣ್ಣೂರ, ಮುತ್ತೂರು, ಹಿಪ್ಪರಗಿ, ಕುಲಹಳ್ಳಿ, ಯಲ್ಲಟ್ಟಿ, ಚಿಚಖಂಡಿ ಕೆಡಿ, ಗುಲಗಾಲ, ಜಂಬಗಿ, ಕಸಬಾ ಜಂಬಗಿ, ಸೆ. 4ರಂದು ಜಾಲಿಹಾಳ, ಬೇಲೂರ, ಹಲಕುರ್ಕಿ,
ಚೊಳಚಗುಡ್ಡ, ಮಂಗಳೂರು, ಹೊಸೂರ, ಹಳದೂರ, ಹಾನಾಪೂರ ಎಸ್‌.ಪಿ, ಹಂಸನೂರ, ಶಿಗಿಕೇರಿ, ಸಿಮಿಕೇರಿ, ಯಡಹಳ್ಳಿ, ಧನ್ನೂರ ಸೂಳಿಭಾವಿ, ಕಮತಗಿ, ಕರಡಿ, ಬೂದಿಹಾಳ ಎಸ್‌.ಕೆ, ಹೊನ್ನಿಹಾಳ, ಗಿರಿಸಾಗರ, ಚಿಕ್ಕಲಗುಂಡಿ, ಹನಗಂಡಿ, ಸಸಾಲಟ್ಟಿ, ಕಿಶೋರಿ, ಶಿರೋಳ, ಸೋರಗಾಂವ ಗ್ರಾಮಗಳಲ್ಲಿ ವಿಮೆ ಪಾಲಸಿ ವಿತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Advertisement

5ರಂದು ಕುಳಗೇರಿ, ಮಮಟ ಗೇರಿ, ನರಸಾಪುರ, ಕಾತರಕಿ, ಗುಳೇದಗುಡ್ಡ, ಗದ್ದನಕೇರಿ, ತುಳಸಿಗೇರಿ, ಕಲಾದಗಿ, ಹೂವಿನಹಳ್ಳಿ, ರಕ್ಕಸಗಿ, ನಾಗೂರ, ಜಂಬಲದಿನ್ನಿ, ಗೊರಬಾಳ, ಬೂದಿಹಾಳ, ಬೀಳಗಿ, ಯುಎಲ್‌ಬಿ ಬೀಳಗಿ, ಲಿಂಗನೂರ, ಮೈಗೂರ, ಸಿದ್ದಾಪೂರ, ಕೇಸರ ಕೊಪ್ಪ, ಸೈದಾಪೂರ, ಮಳಲಿ, ಬೆಳಗಲಿ, ನಾಗರಾಳ, ಉತ್ತೂರ, ಒಂಟಿಗೋಡಿ, ಸೆ. 6ರಂದು ಪಕೀರಬೂದಿಹಾಳ, ಕೈನಕಟ್ಟಿ, ಅನವಾಲ, ನೀರಬೂದಿಹಾಳ, ಹಳ್ಳೂರ, ಚಿಕ್ಕಮ್ಯಾಗೇರಿ, ಸುತಗುಂಡಾರ, ನಾಯನೇಗಲಿ, ಬಿಂಜವಾಡಗಿ, ಹಿರೇಬಾದೊಡಗಿ, ಹಿರೇಮಳಗಾವಿ, ಹಿರೇಕೊಡಗಲಿ, ಚಿಕ್ಕಕೊಡಗಲಿ, ಚಿಕ್ಕನಾಳ, ಬಾಡಗಿ, ಬಾಡಗಂಡಿ, ಜಂಬಗಿ ಬಿಕೆ, ಸಾವಳಗಿ, ಖಾಜಿಬೀಳಗಿ, ಜಗದಾಳ, ಮಂಟೂರ, ಹಲಗಲಿ, ಮುಧೋಳ, ಮುಗಳಖೋಡ. 7ರಂದು ಬಾದಾಮಿ, ಸೂಳಿಕೇರಿ, ಚಿಕ್ಕಶೆಲ್ಲಿಕೇರಿ, ದೇವನಾಳ, ಕದಾಂಪೂರ, ಖಜ್ಜಿಡೋಣಿ, ಅಮರಾವತಿ, ಮುರಡಿ, ಗುಡೂರ ಎಸ್‌ಸಿ, ಕೆಲೂರ, ಅನಗವಾಡಿ, ಬಿದರಿ, ಗೋಠೆ, ಅಡಿಹುಡಿ, ಢವಳೇಶ್ವರ, ನಂದಗಾಂವ, ಮೆಟಗುಡ್ಡ, 9ರಂದು ತೊದಗಬಾಗಿ, ತುಂಗಳ, ಚಿಕ್ಕಪಡಸಗಿ ಗ್ರಾಮಗಳಲ್ಲಿ ರೈತರಿಗೆ ಬೆಳೆ ವಿಮೆ ಪಾಲಸಿ ವಿತರಿಸಲಾಗುತ್ತಿದೆ ಎಂದು ಜಿಲ್ಲಾ
ಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next