Advertisement

ಸಚಿವೆ ಜೊಲ್ಲೆಯಿಂದ ಬೆಳೆಹಾನಿ ಪರಿಶೀಲನೆ

05:45 PM Aug 16, 2020 | Suhan S |

ಇಂಡಿ: ಜಿಲ್ಲಾ ಉಸ್ತುವಾರಿ ಸಚಿವೆ ಶಶೀಕಲಾ ಜೊಲ್ಲೆ ಶನಿವಾರ ತಾಲೂಕಿನ ತಡವಲಗಾ, ಅಥರ್ಗಾ ಗ್ರಾಮಕ್ಕೆ ಭೇಟಿ ನೀಡಿ ಮಳೆಯಿಂದ ಹಾನಿಯಾದ ಬೆಳೆ ಮತ್ತು ಕೃಷಿ ಹೊಂಡಗಳನ್ನು ಪರಿಶೀಲಿಸಿದರು.

Advertisement

ಈ ವೇಳೆ ರೈತರೊಂದಿಗೆ ಮಾತನಾಡಿದ ಅವರು, ಲಿಂಬೆ, ದಾಳಿಂಬೆ, ಪಪ್ಪಾಯಿ, ಮಾವು, ತೊಗರಿ, ಟೋಮಾಟೋ ಸೇರಿದಂತೆ ಇತರೆ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ. ಸರಕಾರಕ್ಕೆ ನಿಮ್ಮ ಬಗ್ಗೆ ಕಾಳಜಿ ಇದೆ. ಹಾನಿ ಬಗ್ಗೆ ಸಮೀಕ್ಷೆ ಮಾಡಿ ಅಧಿಕಾರಿಗಳು ವರದಿ ಕೊಟ್ಟ ನಂತರ ಪರಿಹಾರ ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ಮಾತನಾಡಿ, ಕಳೆದ ಮೂರ್ನಾಲ್ಕು ವರ್ಷಗಳಿಂದ ಮಳೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಬೇಸಿಗೆಯಲ್ಲಿ ಕುಡಿಯಲು ನೀರು ಸಿಗದೆ ರೈತರು ಪರದಾಡುವ ಪರಸ್ಥಿತಿ ಇದೆ. ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಜೀವದ ಹಂಗು ತೊರೆದು ಶ್ರಮಿಸುತ್ತಾರೆ. ಕೂಡಲೆ ಮಳೆಯಿಂದ ಹಾನಿಯಾದ ರೈತರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಿ ಎಂದು ವಿನಂತಿಸಿದರು.

ಆರ್‌.ಎಸ್‌. ಪಾಟೀಲ, ಶೀಲವಂತ ಉಮರಾಣಿ, ಮಲ್ಲಿಕಾರ್ಜುನ ಕೀವುಡೆ, ಎಸಿ ಸ್ನೇಹಲ್‌ ಲೋಖಂಡೆ, ರಾಜಶೇಖರ ವಿಲಿಯಂ, ತಹಶೀಲ್ದಾರ್‌ ಚಿದಾನಂದ ಕುಲಕರ್ಣಿ, ಮಹಾದೇವಪ್ಪ ಏವೂರ, ಆರ್‌.ಟಿ. ಹಿರೇಮಠ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next