ಅಲಿಗಢ : ಮಕ್ಕಳು ಸಿಬ್ಬಂದಿಗಳು ಸರ್ಕಾರಿ ಶಾಲೆಗೆ ಬರುವ ಮೊದಲೇ ಮೊಸಳೆಯೊಂದು ಶಾಲಾ ಆವರಣದೊಳಗೆ ಕುಳಿತು ಎಲ್ಲರನ್ನು ಭಯ ಹುಟ್ಟಿಸಿದ ಘಟನೆ ಉತ್ತರಪ್ರದೇಶದ ಅಲಿಘಡದಲ್ಲಿ ನಡೆದಿದೆ.
ಬೆಳಿಗ್ಗೆ ಮಕ್ಕಳು ಶಾಲೆಗೆ ಬಂದ ವೇಳೆ ಶಾಲೆಯ ಆವರಣದ ಒಳಗೆ ಮೊಸಳೆ ಕಾಣಿಸಿಕೊಂಡಿದೆ, ಕೂಡಲೇ ಅಲ್ಲಿದ್ದ ಕೆಲ ವಿದ್ಯಾರ್ಥಿಗಳು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ, ಮೊಸಳೆ ಕಂಡ ಸ್ಥಳೀಯರು ಅದನ್ನು ಸೆರೆ ಹಿಡಿದು ಶಾಲೆಯ ಕೊಠಡಿಯಲ್ಲಿ ಹಾಕಿ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಶಾಲೆಗೆ ಬಂದ ಅರಣ್ಯ ಅಧಿಕಾರಿಗಳು ಮೊಸಳೆಯನ್ನು ಗಂಗಾ ನದಿಯಲ್ಲಿ ಬಿಟ್ಟಿದ್ದಾರೆ. ಗ್ರಾಮದ ಸುತ್ತ ಮುತ್ತ ಹಲವು ಕೆರೆಗಳು ಇದ್ದು ಇಲ್ಲಿಂದಲೇ ಮೊಸಳೆಗಳು ಬರುತ್ತವೆ ಎನ್ನಲಾಗಿದೆ.
ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಮೊಸಳೆಗಳ ಸಂಚಾರ ಕಂಡುಬಂದಿದ್ದು ಸ್ಥಳೀಯರು ಹಲವು ಬಾರಿ ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಿದ್ದಾರೆ ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎನ್ನುತ್ತಾರೆ ಸ್ಥಳೀಯರು.
ಇದನ್ನೂ ಓದಿ : ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬದ್ದ:ವಿಧಾನಸಭೆಯಲ್ಲಿ ಡಾ.ಸುಧಾಕರ್