Advertisement
ಯತ್ನಾಳ್ ಅವರನ್ನು ಕ್ರಿಟಿಕಲ್ ಇನ್‌ಸೈಡರ್ ಎಂದ ಸಿದ್ದರಾಮಯ್ಯ, ಅವರು ಎಲ್ಲರನ್ನೂ ಟೀಕಿಸುತ್ತಾರೆ. ಅವರೊಂದು ಪೆದ್ದ ಜಾಣ. ಎಲ್ಲವೂ ಗೊತ್ತಿರುತ್ತದೆ. ಆದರೆ ಏನು ಗೊತ್ತಿಲ್ಲದವರಂತೆ ಇರುತ್ತಾರೆ ಎಂದು ಕಾಲೆಳೆದರು. ಇದಕ್ಕೆ ತಿರುಗೇಟು ಕೊಟ್ಟ ಯತ್ನಾಳ್, ನೀವೆಲ್ಲ ಒಂದಾಗಿ ಯಾರ್ಯಾರನ್ನೋ ಸೋಲಿಸಿ ಬಿಡುತ್ತೀರಿ. ನಮಗೆ ಹೊಂದಾಣಿಕೆ ರಾಜಕಾರಣ ಬರುವುದಿಲ್ಲ. ಎಲ್ಲರ ಲೆಕ್ಕಪತ್ರ ಓದುವುದಕ್ಕೆ ಒಬ್ಬರಾದರೂ ಜನ ಬೇಕಲ್ಲ ಎಂದು ಚಟಾಕಿ ಹಾರಿಸಿದರು.
ನಂಜುಂಡಪ್ಪ ವರದಿಯಲ್ಲಿ ಹಿಂದುಳಿದ ತಾಲೂಕುಗಳ ವರ್ಗೀಕರಣದ ಬಗ್ಗೆ ಸಿಎಂ ಪ್ರಸ್ತಾವಿಸುವಾಗ, ವಿಪಕ್ಷ ನಾಯಕ ಆರ್.ಅಶೋಕ್ ಅವರು ಕನಕಪುರವೂ ಹಿಂದುಳಿದ ತಾಲೂಕುಗಳ ಪಟ್ಟಿಯ
ಲ್ಲಿದೆ ಎಂದರು. ಮಾತಿನ ಓಘ ತುಂಡಾಯೆ¤ಂದು ಹುಸಿ ಕೋಪ ಪ್ರದರ್ಶಿಸಿದ ಸಿಎಂ, “ಕನಕಪುರ ಹಿಂದುಳಿದಿದೆ ಎಂದು ನೀನು ಅಲ್ಲಿ ಹೋಗಿ ಚುನಾವಣೆಗೆ ನಿಂತಕಂಡ್ಯಾ?’ ಎಂದು ಪ್ರಶ್ನಿಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್ ಈ ಮಾತಿಗೆ ಖುಷಿಗೊಂಡರೆ, ಅಶೋಕ ಮೌನಕ್ಕೆ ಜಾರಿದರು. ಆಗ ಹಿಂಬದಿ ಸಾಲಿನಿಂದ “ಡೆಪಾಸಿಟ್ ಹೋಯ್ತು’ ಎಂಬ ಮಾತು ಕೇಳಿ ಬಂದಾಗ “ಯೇ..ಅಶೋಕ ನಿಂದು ಡೆಪಾಸಿಟ್ ಹೋಯ್ತಾ?’ ಎಂದು ಕುಟುಕಿದರು. ರಾಜ್ಯ ವಿಭಜನೆಯ ಮಾತು ಬೇಡ
ನಾನು ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಬದ್ಧ. ಅಭಿವೃದ್ಧಿಯಲ್ಲಿ ತಾರತಮ್ಯವಾಗಿದೆ ಎಂಬ ಕಾರಣಕ್ಕೆ ಪ್ರತ್ಯೇಕ ರಾಜ್ಯದ ಕೂಗು ಬೇಡ. ಇದು ಏಕೀಕರಣಕ್ಕಾಗಿ ಹುತಾತ್ಮರಾದವರಿಗೆ ಮಾಡುವ ಅನ್ಯಾಯ. ಉತ್ತರ ಕರ್ನಾಟಕ ಹಿಂದುಳಿಯುವಿಕೆಗೆ ಐತಿಹಾಸಿಕ ಕಾರಣಗಳೂ ಇದ್ದು, ಈ ಭಾಗದ ಅಭಿವೃದ್ಧಿಗೆ ನಮ್ಮ ಸರಕಾರ ಬದ್ಧ ಎಂದರು.
ಪ್ರಿಂಟಿಂಗ್ ಮಿಷನ್ ಇದೆಯಾ ಎಂದು ಕೇಳಿದ್ದರು.
Related Articles
Advertisement
ಮೇಕೆದಾಟು ಯೋಜನೆ ಪ್ರಾರಂಭಿಸುತ್ತೇವೆ ಎಂದು ನೀವು ಪಾದಯಾತ್ರೆ ನಡೆಸಿದಿರಿ. ತಮಿಳುನಾಡಿನಲ್ಲಿ ನಿಮ್ಮದೇ ಮಿತ್ರ ಪಕ್ಷ ಅಧಿಕಾರದಲ್ಲಿದೆ. ಅವರನ್ನು ಒಪ್ಪಿಸಿ. ಇಲ್ಲವಾದರೆ ನೀವು ಮಾಡಿದ್ದು ರಾಜಕೀಯ ಪಾದಯಾತ್ರೆ ಎನ್ನಬೇಕಾಗುತ್ತದೆ. – ಆರ್.ಅಶೋಕ್, ವಿಪಕ್ಷ ನಾಯಕ
ನಿಮ್ಮದು ನುಡಿದಂತೆ ನಡೆದ ಸರಕಾರವಲ್ಲ. ಎಲ್ಲವೂ ಬೋಗಸ್, ಬೋಗಸ್, ಬೋಗಸ್.ಎಲ್ಲರಿಗೂ ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದವರು ಕೊಟ್ರಾ ?-ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ