Advertisement

ಇನ್ ಸ್ಟಾಗ್ರಾಮ್ ನಲ್ಲಿ 300ಮಿಲಿಯನ್ ಫಾಲೋವರ್ಸ್ ದಾಟಿದ ಫುಟ್ ಬಾಲ್ ಸ್ಟಾರ್ ಆಟಗಾರ ರೊನಾಲ್ಡೋ

09:27 PM Jun 20, 2021 | Team Udayavani |

ಜಗತ್ತಿನ ಶ್ರೇಷ್ಠ ಪಂಕ್ತಿಯಲ್ಲಿರುವ ಫುಟ್ ಬಾಲ್ ಸ್ಟಾರ್ ಆಟಗಾರ  ರೊನಾಲ್ಡೋ ಈಗ ಇನ್ ಸ್ಟಾಗ್ರಾಂ ನಲ್ಲಿ300 ಮಿಲಿಯನ್ ಫಾಲೋವರ್ಸ್ ಪಡೆದ ಜಗತ್ತಿನ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisement

ಕ್ರಿಸ್ಟಿಯಾನೋ ರೊನಾಲ್ಡೋ ಅವರ ಇನ್ ಸ್ಟಾಗ್ರಾಂ ಪೇಜ್ ಖಾತೆಯು ಈವರೆಗೆ 300 ಮಿಲಿಯಲ್ ದಾಟಿದ ಮೊದಲ ಖಾತೆಯಾಗಿ ಹೊರ ಹೊಮ್ಮಿದೆ.

ಇದನ್ನೂ ಓದಿ : ಕೋವಿಡ್ ವಿರುದ್ಧ ಹೋರಾಡಲು ಕೈ ಜೋಡಿಸಿ : ರಾಜ್ಯದ ಜನರಲ್ಲಿ ಅಬ್ಬಿಗೆರೆ ಮನವಿ

ರೊನೋಲ್ಡೋ ಅವರ ಪ್ರತಿಸ್ಪರ್ಧಿ ಮತ್ತು ಶ್ರೇಷ್ಠ ಫುಟ್ ಬಾಲ್ ಆಟಗಾರ ಅರ್ಜೆಂಟೇನಾ ಮತ್ತು ಬಾರ್ಸಿಲೋನಾ ಫುಟ್ ಬಾಲ್ ಕ್ಲಬ್ ನಾಯಕ ಲಿಯೋನೆಲ್ ಮೆಸ್ಸಿ ಫಾಲೋವರ್ಸ್ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಲಿಯೋನೆಲ್ ಮೆಸ್ಸಿ 219 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಜಗತ್ತಿನ ಅತಿ ಹೆಚ್ಚು ಇನ್ ಸ್ಟಾಗ್ರಾಂ ಫಾಲೋವರ್ಸ್ ಇರುವ ಎರಡನೇ ವ್ಯಕ್ತಿಯಾಗಿದ್ದಾರೆ.

ಇನ್ನು, ಮೂರನೇ ಸ್ಥಾನದಲ್ಲಿ ಬ್ರೆಜಿಲ್ ಹಾಗೂ ಪೆಸ್ ಜಿ ಯ ಡ್ಯಾಶಿಂಗ್ ಫಾರ್ವರ್ಡ್ ನೇಮಾರ್ ಜೂನಿಯರ್ ಇದ್ದಾರೆ. ಈ ಖ್ಯಾತ ಫೂಟ್ ಬಾಲ್ ಆಟಗಾರ ಇನ್  ಸ್ಟಾಗ್ರಾಂ ನಲ್ಲಿ 152 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

Advertisement

ಕ್ರಿಕೇಟ್ ತಾರೆ ವಿರಾಟ್ ಕೋಹ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಪ್ರಸ್ತುತ ಪ್ರಪಂಚದ ಉತ್ತಮ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರಾದ ಕೊಹ್ಲಿಗೆ 128 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ಇದನ್ನೂ ಓದಿ : ದಕ್ಷಿಣ ಕನ್ನಡ : ಅಗತ್ಯ ವಸ್ತು ಖರೀದಿಗೆ ಅವಧಿ ವಿಸ್ತರಣೆ, ನೈಟ್ ಕರ್ಫ್ಯೂ ಮುಂದುವರಿಕೆ

Advertisement

Udayavani is now on Telegram. Click here to join our channel and stay updated with the latest news.

Next