Advertisement

ಪಿಎಸ್‌ಐ ಮೇಲೆ ಮಾರಕಾಸ್ತ್ರದಿಂದ ಹಲ್ಲೆ

05:04 PM Mar 05, 2021 | Team Udayavani |

ಬೆಂಗಳೂರು/ಕೆಜಿಎಫ್: ಕಳ್ಳತನ ಪ್ರಕರಣವೊಂದರಲ್ಲಿ ಬೇಕಾಗಿದ್ದ ಆರೋಪಿಯನ್ನು ಬಂಧಿಸಲು ತೆರಳಿದ ಪೊಲೀಸರ ಮೇಲೆಯೇ ಆರೋಪಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಕೆಜಿಎಫ್ ನಲ್ಲಿ ನಡೆದಿದೆ.

Advertisement

ಘಟನೆಯಲ್ಲಿ ಬೆಂಗಳೂರಿನ ಮಹದೇವಪುರ ಠಾಣೆಯ ಸಬ್‌ಇನ್‌ಸ್ಪೆಕ್ಟರ್‌ ಹರಿನಾಥ ಬಾಬು ಗಾಯ ಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆರೋಪಿ ಅಪ್ಪೆನ್‌ (36) ಪತ್ತೆಗಾಗಿ ಮಹದೇವ ಪುರ ಠಾಣೆಯ ಒಂದು ತಂಡ ಮತ್ತು ಸ್ಥಳೀಯ ಪೊಲೀಸರ ಒಂದು ತಂಡ ಕಾರ್ಯಾಚರಣೆ ನಡೆಸುತ್ತಿದೆ.

ಆರೋಪಿ ಅಪ್ಪೆನ್‌ ವಿರುದ್ಧ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಕಳ್ಳತನ, ದರೋಡೆ, ಕೊಲೆ ಯತ್ನ ಸೇರಿ ಸುಮಾರು 25-30 ಪ್ರಕರಣಗಳು ದಾಖಲಾಗಿವೆ. ಕೆಜಿಎಫ್ ವಿವಿಧ ಠಾಣೆಯಲ್ಲೂ 20 ಅಪರಾಧ ಪ್ರಕರ ಣಗಳು ದಾಖಲಾಗಿದ್ದು, ರೌಡಿ ಪಟ್ಟಿ ತೆರೆಯಲಾಗಿದೆ. ಇತ್ತೀಚೆಗೆ ಮಹದೇವಪುರ ಠಾಣಾ ವ್ಯಾಪ್ತಿಯಲ್ಲಿ ಕಳ್ಳ ತನ ಎಸಗಿ ತನ್ನ ಸ್ವಂತ ಊರಾದ ಆಂಡರಸನ್‌ ಪೇಟೆ ಬಳಿಯ ಲೂದ್‌ ನಗರಕ್ಕೆ ಹೋಗಿದ್ದ. ಈ ಮಾಹಿತಿ ಮೇರೆಗೆ ಪಿಎಸ್‌ಐ ಹರಿನಾಥ ಬಾಬು ತಮ್ಮ ತಂಡದ ಜತೆ ಆತನ ಮನೆ ಬಳಿ ಹೋಗಿ ಬುಧ ವಾರ ತಡ ರಾತ್ರಿ 1.30ರ ಸುಮಾರಿಗೆ ಹುಡುಕಾಟದಲ್ಲಿ ತೊಡಗಿದ್ದು, ಆತನ ಪುತ್ರನನ್ನು ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಕತ್ತಲೆಯಲ್ಲಿ ಬಂದ ಆರೋಪಿ ಮಾರಕಾಸ್ತ್ರದಿಂದ ಸಬ್‌ಇನ್‌ಸ್ಪೆಕ್ಟರ್‌ ಕೈಗೆ ಬೀಸಿದ್ದಾರೆ. ಪರಿಣಾಮ ಪಿಎ ಸ್‌ಐ ಅವರ ಎರಡು ಕೈಗಳಿಗೆ ಗಾಯಗಳಾಗಿವೆ. ಆದರೂ ಆರೋಪಿಗೆ ಬಂಧನವಾಗುವಂತೆ ಸೂಚಿಸಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೆ, ಆರೋಪಿ ಕತ್ತಲೆಯಲ್ಲಿ ತಲೆ ಮರೆಸಿಕೊಂಡು ಹೋಗಿ ದ್ದಾನೆ. ಕೂಡಲೇ ಸಬ್‌ ಇನ್ಸ್‌ಪೆಕ್ಟರ್‌ ಹರಿನಾಥಬಾಬು ಅವರನ್ನು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆ ತರಲಾಯಿತು. ಪ್ರಥಮ ಚಿಕಿತ್ಸೆ ಕೊಡಿಸಿ, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಸದ್ಯಚಿಕಿತ್ಸೆ ಪಡೆ ದುಕೊಳ್ಳುತ್ತಿದ್ದಾರೆ. ಈ ಸಂಬಂಧವಾಗಿ ಆಂಡರಸನ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ ಅಪ್ಪೆನ್‌ ಮತ್ತು ಮತ್ತೂಬ್ಬ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್‌, ಡಿವೈಎಸ್ಪಿ ಉಮೇಶ್‌ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

ಆರೋಪಿ ಬಂಧನಕ್ಕೆ ತಂಡ ರಚನೆ: ಪರಾರಿಯಾಗಿರುವ ಆರೋಪಿ ಅಪ್ಪೆನ್‌ ಸೆರೆ ಹಿಡಿಯಲು ವಿಶೇಷ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್‌ ಉದಯವಾಣಿಗೆ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next