ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಂಪೆನಿ ಶೇಖರಿಸಿಟ್ಟಿದ್ದ ಕಬ್ಬಿಣದ ಸಾಮಾಗ್ರಿಗಳನ್ನು ಕಳವುಗೈದ ಪ್ರಕರಣದಲ್ಲಿ ತಮಿಳುನಾಡು ನಿವಾಸಿ ಹಾಗೂ ಕಾಂಞಂಗಾಡ್ ಚೇಟ್ಟುಕುಂಡುನಲ್ಲಿ ವಾಸಿಸುವ ಚಿತ್ರಾ(36)ಳನ್ನು ಪೊಲೀಸರು ಬಂಧಿಸಿದ್ದಾರೆ.
ಒಟ್ಟು 6 ಮಂದಿಯ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ವಹಿಸಿಕೊಂಡಿರುವ ಮೆಗಾ ಇಂಜಿನಿಯರಿಂಗ್ ಆ್ಯಂಡ್ ಇನ್ಫ್ರಾಸ್ಟ್ರೆಕ್ಚರ್ ಕಂಪೆನಿಯು ಬೇಕಲ ಪೊಲೀಸರಿಗೆ ನೀಡಿದ ದೂರಿನಂತೆ ಈಕೆಯ ಬಂಧನ ನಡೆದಿದೆ.
ಪೊಯಿನಾಚಿ ಬಳಿಯ ಮೈಲಾಟಿಯಲ್ಲಿನ ಕೇಂದ್ರದಲ್ಲಿ ಇರಿಸಿದ್ದ ಕಬ್ಬಿಣದ ಸರಳು, ಬಿಡಿ ಭಾಗಗಳು, ನೆಟ್, ಬೋಲ್ಟ್ ಸಹಿತ 13 ಸಾವಿರ ರೂ. ಬೆಲೆಯ ಸಾಮಾಗ್ರಿಗಳನ್ನು ಕಳವುಗೈಯ್ಯಲಾಗಿತ್ತು. ಈ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.
ಕಳ್ಳ ಭಟ್ಟಿ ವಶಕ್ಕೆ
ಕಾಸರಗೋಡು: ವೆಳ್ಳರಿಕುಂಡಿನ ಮಾಲೋಂ ಕಾರ್ಯೋಡ್ ಚಾಲಿಲ್‌ನಲ್ಲಿ ವೆಳ್ಳರಿಕುಂಡು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 160 ಬಾಟ್ಲಿ ಕಳ್ಳ ಭಟ್ಟಿ ವಶಪಡಿಸಿದ್ದಾರೆ. ಈ ಸಂಬಂಧ ವ್ಯಕ್ತಿಯೋರ್ವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನೀರಿನ ಬಾಟ್ಲಿಯಲ್ಲಿ ಕಳ್ಳ ಭಟ್ಟಿಯನ್ನು ತುಂಬಿಸಿಡಲಾಗಿತ್ತು.