Advertisement

ಎಚ್ಚರ : ಬ್ಯಾಂಕ್ ಖಾತೆಗೆ ಕನ್ನ.. ಸೈಬರ್ ವಂಚನೆ ಆಯ್ತು.. ಈಗ ಮೊಬೈಲ್ ಟವರ್ ಸರದಿ

07:22 PM Mar 22, 2022 | Team Udayavani |

ಕುದೂರು : ಬ್ಯಾಂಕ್ ಖಾತೆಗಳಿಗೆ ಕನ್ನ, ಸೈಬರ್ ವಂಚನೆ ಆಯ್ತು. ಈಗ ಮೊಬೈಲ್ ಟವರ್ ವಂಚನೆ ಮಾಡುವ ಮೂಲಕ ಸಾರ್ವಜನಿಕರನ್ನು ಯಾಮಾರಿಸುತ್ತಿದ್ದಾರೆ. ಕುದೂರು ಹೋಬಳಿಯ ಅದರಂಗಿ ಗ್ರಾಮದ ವಿಜಯ್ ಕುಮಾರ್ ಎಂಬವರ ಜಮೀನಿನಲ್ಲಿ ಮೊಬೈಲ್ ಟವರ್ ಅಳವಡಿಸುವುದಾಗಿ ನಂಬಿಸಿ ಶುಲ್ಕದ ಹೆಸರಿನಲ್ಲಿ 2500೦ ಕಟ್ಟಿಸಿಕೊಂಡು ಮೋಸ ಹೋದ ಘಟನೆ ನಡೆದಿದೆ.

Advertisement

5 ಜಿ ನೆಟ್ವರ್ಕ್ ಗಳಿಗಾಗಿ ಟವರ್ ಅಳವಡಿಸಲು ನಿಮ್ಮ ಜಮೀನು ಇಲ್ಲವೇ ಮನೆ ಮಹಡಿ ಮೇಲೆ ಜಾಗ ನೀಡಿ ಇದಕ್ಕಾಗಿ ಮುಂಗಡ 50ಲಕ್ಷ ರೂ ಹಣ ಹಾಗೂ ತಿಂಗಳಿಗೆ 50 ಸಾವಿರ ರೂ ಮಾಡುತ್ತೇವೆ ಆಸಕ್ತಿ ಉಳ್ಳವರು ಕರೆ ಮಾಡಿ ಎಂದು ಫೋನ್ ನಂಬರ್ ಕಳುಹಿಸುತ್ತಾರೆ ಇದನ್ನು ನಂಬಿದ ವಿಜಯ್ ಕುಮಾರ್ ಆ ನಂಬರಿಗೆ ಕರೆ ಮಾಡಿ ಮೊಬೈಲ್ ಟವರ್ ಹಾಕಲು ಒಪ್ಪಿಗೆ ನೀಡಿದ್ದಾರೆ ಅದರಂತೆ ಕರಾರು ಶುಲ್ಕ ಜಿಎಸ್ಟಿ ಮುಂತಾದ ಶುಲ್ಕಗಳನ್ನು ಕಟ್ಟಬೇಕು ಎಂದು 25000 ಕಟ್ಟಿಸಿಕೊಂಡಿದ್ದಾರೆ ಹಣ ಜಮೆ ಮಾಡಿದ ನಂತರ ವಿಜಯಕುಮಾರ್ ಟವರ್ ಯಾವಾಗ ಹಾಕುತ್ತೀರಾ ಎಂದು ಕೇಳಲು ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ ನಂತರ ಅರ್ಧ ಗಂಟೆ ಬಿಟ್ಟು ಮತ್ತೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಮೂಸ ಹೋಗಿರುವುದಾಗಿ ಗೊತ್ತಾಗಿದೆ.

ಇದನ್ನೂ ಓದಿ : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬ್ರೋಕರ್ ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ : ವಿಶ್ವನಾಥ್

ಮೊಬೈಲ್ ನಲ್ಲಿ ಟೆಕ್ಸ್ಟ್ ಮೆಸೇಜ್ ಗಳನ್ನು ನಂಬಿಕೊಂಡು ಕರೆಮಾಡುವ ಅಮಾಯಕರನ್ನು ಗುರಿಯಾಗಿಸಿ ಕೊಳ್ಳುವ ಕಳ್ಳರು ನಿಮ್ಮ ಬಳಿ ಟವರ್ ಅಳವಡಿಸಲು ಜಾಗವಿದ್ದರೆ ಜಮೀನಿನ ದಾಖಲೆಗಳನ್ನು ಸಲ್ಲಿಸಿ. ಮನೆ ಮೇಲೆ ಅಳವಡಿಸಿದರೆ ಮನೆಯ ದಾಖಲೆಗಳನ್ನು ನೀಡಿ ಎಂದು ಪುಸಲಾಯಿಸಿ ಅವರಿಂದ ದಾಖಲೆಗಳನ್ನು ಪಡೆದು ಯಾಮಾರಿಸುತ್ತಿದ್ದಾರೆ.  ತಿಂಗಳಿಗೆ 50 ಸಾವಿರ ಬಾಡಿಗೆ ಬರುತ್ತದೆ ಎಂಬ ಆಸೆಯಿಂದ ಸಾರ್ವಜನಿಕರು ಯಾಮಾರುತ್ತಿದ್ದಾರೆ ಯಾವುದೇ ನೆಟ್ವರ್ಕ್ ಕಂಪನಿಗಳು ಬಹಿರಂಗವಾಗಿ ನೆಟ್ವರ್ಕ್ ಅಳವಡಿಸಿಕೊಳ್ಳುವ ಸಂಬಂಧ ಸಂದೇಶ ನೀಡುವುದಿಲ್ಲ ಇದೆಲ್ಲ ಸುಳ್ಳು ಯಾರು ಈ ರೀತಿ ಮೋಸ ಹೋಗದಿರಿ.

Advertisement

Udayavani is now on Telegram. Click here to join our channel and stay updated with the latest news.

Next