Advertisement
ಕೆಲವು ವರ್ಷಗಳ ಹಿಂದೆ ಆರೋಪಿ ಹಣದ ಸಹಾಯ ಕೇಳಿಕೊಂಡು ಬಂದಿದ್ದು, ಅನಂತರದ ದಿನಗಳಲ್ಲಿ ವೀರೇಂದ್ರ ಹೆಗ್ಡೆ ಅವರೊಂದಿಗೆ ಮಿತೃತ್ವ ಬೆಳೆಸಿಕೊಂಡಿದ್ದ. ಇತರ ಮೂವರು ಆರೋಪಿಗಳಾದ ಹರಿಪ್ರಸಾದ್, ಇಮಿ¤ಯಾಜ್, ಸತ್ಯನಾಥ್ ಪೈ ಅವರನ್ನು ಸೇರಿಸಿಕೊಂಡು ಬೆದರಿಸಿ, ಹಣ ಲಪಟಾಯಿಸಲು ಯೋಜನೆ ರೂಪಿಸಿದ್ದು, ಉದ್ಯಮಿಯ ಜವಳಿ ಕಟ್ಟಡದ ಬಗ್ಗೆ ವಿವಿಧ ಸರಕಾರಿ ಇಲಾಖೆ ಗಳಿಗೆ ಸುಳ್ಳು ಅರ್ಜಿಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಬೆಂಗಳೂರಿನಲ್ಲಿ ಹರಿಪ್ರಸಾದ್ ಎಂಬವನನ್ನು ಶಾಮೀಲಾಗಿಸಿಕೊಂಡು ಬೆಂಗಳೂರಿಗೆ ಕರೆಸಿಕೊಂಡ ಆರೋಪಿ ಗಳು ಪಿಸ್ತೂಲ್ ತೋರಿಸಿ, ಬೆದರಿಸಿದ್ದು, 5 ಕೋ. ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇಲ್ಲದಿದ್ದಲ್ಲಿ ಉದ್ಯಾವರದ ಕಟ್ಟಡವನ್ನು ವಿವಿಧ ಇಲಾಖೆಗಳ ಮೂಲಕ ನೆಲಸಮಗೊಳಿಸುವುದಾಗಿ ಬೆದರಿಕೆ ಯೊಡ್ಡಿದ್ದಾರೆ ಎಂದು ವೀರೇಂದ್ರ ಹೆಗ್ಡೆ ಕೇಸು ದಾಖಲಿಸಿದ್ದಾರೆ. ವಿವಿಧ ಇಲಾಖೆಗೆ ನೀಡಿದ ಸುಳ್ಳು ದೂರಿನ ವಿರುದ್ಧ ಉಡುಪಿ ನ್ಯಾಯಾಲಯದಲ್ಲಿ ಮಾನನಷ್ಟದ ಖಾಸಗಿ ದೂರು ದಾಖಲಿಸಿದ್ದಾರೆ.