Advertisement

ಕಾಪು: ದೇಗುಲದ ಹುಂಡಿ ಒಡೆದು ನಗದು ಕಳವು

11:31 PM Aug 07, 2022 | Team Udayavani |

ಕಾಪು: ಕಾಪು ಶ್ರೀ ಲಕ್ಷ್ಮೀಜನಾರ್ಧನ ದೇವಸ್ಥಾನದ ಉತ್ತರ ಭಾಗದ ಬೀಗ ಮುರಿದು ದೇವಸ್ಥಾನದ ಒಳಗೆ ನುಗ್ಗಿದ ಕಳ್ಳರು ಕಾಣಿಕೆ ಡಬ್ಬವನ್ನು ಒಡೆದು ನಗದು ಹಣವನ್ನು ದೋಚಿದ ಘಟನೆ ರವಿವಾರ ನಡೆದಿದೆ.

Advertisement

ರವಿವಾರ ಬೆಳಗ್ಗಿನ ಜಾವ ಕಾಣಿಕೆ ಡಬ್ಬವನ್ನು ಒಡೆದ ಕಳ್ಳರು ಚಿಲ್ಲರೆ ಹಣವನ್ನು ಅಲ್ಲೇ ಬಿಟ್ಟು ಬರೀ ನೋಟುಗಳನ್ನು ಕದ್ದೊಯ್ದಿದ್ದು ಸುಮಾರು 2-3 ಸಾವಿರ ರೂಪಾಯಿ ಕಳವಾಗಿರಬಹುದೆಂದು ಊಹಿಸಲಾಗಿದೆ.

ದೇವಸ್ಥಾನದಲ್ಲಿ ರಾತ್ರಿ ವಾಚ್‌ಮನ್‌ ವ್ಯವಸ್ಥೆಯಿದ್ದು, ಆತ ನಿದ್ರೆಗೆ ಜಾರಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ಕಾಣಿಕೆ ಡಬ್ಬಗಳನ್ನು ಹೊತ್ತೂಯ್ದ ಕಳ್ಳರು ಅದನ್ನು ದೇವಸ್ಥಾನ ಮುಂಭಾಗದ ಮೈದಾನದಲ್ಲಿ ಇರಿಸಿದ್ದು, ನಗದು ಹಣವನ್ನು ಕೊಂಡೊಯ್ದು, ಚಿಲ್ಲರೆ ಹಣವನ್ನು ಅಲ್ಲೇ ಉಳಿಸಿ ಪರಾರಿಯಾಗಿದ್ದಾರೆ.

ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾರ್ಯನಿರ್ವಹಣಾಧಿಕಾರಿ ಸುಧೀರ್‌ ಕುಮಾರ್‌ ಶೆಟ್ಟಿ ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next