Advertisement

Cricket World Cup; ಇಂದಿನಿಂದ ಟಿಕೆಟ್‌ ಮಾರಾಟ

11:24 PM Sep 07, 2023 | Team Udayavani |

ಹೊಸದಿಲ್ಲಿ: ಮುಂಬರುವ ವಿಶ್ವಕಪ್‌ ಕ್ರಿಕೆಟ್‌ ಕೂಟದ ಪಂದ್ಯಗಳ ಟಿಕೆಟ್‌ಗೆ ಭಾರೀ ಬೇಡಿಕೆ ಇರುವುದನ್ನು ಮನಗಂಡಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ಮೊದಲ ಹಂತದ ಮಾರಾಟಕ್ಕೆ ಇದೀಗ ನಾಲ್ಕು ಲಕ್ಷದಷ್ಟು ಟಿಕೆಟ್‌ ಬಿಡುಗಡೆ ಮಾಡಿದೆ.

Advertisement

ಆದರೆ ಇದರಲ್ಲಿ ಭಾರತದ ಪಂದ್ಯಗಳ ಟಿಕೆಟ್‌ಗಳು ಎಷ್ಟು ಇವೆ ಎಂಬುದನ್ನು ಬಿಸಿಸಿಐ ಸ್ಪಷ್ಟಪಡಿಸಿಲ್ಲ. ಸಾಧ್ಯವಾದಷ್ಟು ಕ್ರಿಕೆಟ್‌ ಅಭಿಮಾನಿಗಳು ಟಿಕೆಟ್‌ ಖರೀದಿಸುವ ಉದ್ದೇಶದಿಂದ ಬೇರೆ ಬೇರೆ ಹಂತದಲ್ಲಿ ವಿವಿಧ ಪಂದ್ಯಗಳ ಟಿಕೆಟ್‌ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದೆ.

ಎಲ್ಲ ಪಂದ್ಯಗಳ ಟಿಕೆಟ್‌ಗಳ ಸಾಮಾನ್ಯ ಮಾರಾಟವು ಸೆ. 8ರಂದು ಭಾರತೀಯ ಕಾಲಮಾನ ಬೆಳಗ್ಗೆ 8ಕ್ಕೆ ಆರಂಭಗೊಳ್ಳಲಿದೆ. ಅಧಿಕೃತ ಟಿಕೆಟಿಂಗ್‌ ವೆಬ್‌ಸೈಟ್‌ https://tickets.cricketworldcup.comಗೆ ಹೋಗಿ ಟಿಕೆಟ್‌ಗಳನ್ನು ಖರೀದಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next