ಬೆಂಗಳೂರು: ಈ ಬಾರಿಯ ವಿಶ್ವಕಪ್ ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ಪರದಾಟ ಮುಂದುವರಿದಿದೆ. ಶ್ರೀಲಂಕಾ ವಿರುದ್ಧದ ಗೆಲ್ಲಲೇಬೇಕಾದ ಪಂದ್ಯದಲ್ಲಿ ಜೋಸ್ ಬಟ್ಲರ್ ತಂಡವು ಕೇವಲ 156 ರನ್ ಗೆ ಗಂಟೆಮೂಟೆ ಕಟ್ಟಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿತು. ಮೊದಲ ವಿಕೆಟ್ ಗೆ ಬೇರಿಸ್ಟೋ ಮತ್ತು ಮಲಾನ್ 45 ರನ್ ಜತೆಯಾಡಿದರು. ಆದರೆ ಬಳಿಕ ಬೆನ್ ಸ್ಟೋಕ್ಸ್ ಹೊರತುಪಡಿಸಿ ಯಾವುದೇ ಬ್ಯಾಟರ್ ರನ್ ಗಳಿಸಲು ಪರದಾಡಿದರು.
ಇದನ್ನೂ ಓದಿ:Amala Paul: ಎಂಗೇಜ್ಮೆಂಟ್ ರಿಂಗ್ ಹಾಕಿ ಚುಂಬನ; ಮದುವೆಗೆ ಎಸ್ ಎಂದ ʼಹೆಬ್ಬುಲಿʼ ಬೆಡಗಿ
ತಂಡವನ್ನು ಆಧರಿಸಲು ಯತ್ನಿಸಿದ ಬೆನ್ ಸ್ಟೋಕ್ಸ್ 73 ಎಸೆತ ಎದುರಿಸಿ 43 ರನ್ ಗಳಿಸಿದರು. ನಾಲ್ಕು ಪಂದ್ಯಗಳ ಬಳಿಕ ಆಡುವ ಅವಕಾಸ ಪಡೆದ ಮೋಯಿನ್ ಅಲಿ 15 ರನ್ ಮಾತ್ರ ಗಳಿಸಿದರು.
ರನ್ ಪ್ರವಾಹಕ್ಕೆ ಹೆಸರಾದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಂಗ್ಲ ಬ್ಯಾಟರ್ ಗಳನ್ನು ಲಂಕಾ ಬೌಲರ್ ಗಳು ಕಟ್ಟಿ ಹಾಕಿದರು. ಲಹಿರು ಕುಮಾರ್ ಮೂರು ವಿಕೆಟ್ ಪಡೆದರೆ, ಕಸುನ್ ರಜಿತಾ ಮತ್ತು ಆ್ಯಂಜಲೋ ಮ್ಯಾಥ್ಯೂಸ್ ತಲಾ ಎರಡು ವಿಕೆಟ್ ಕಿತ್ತರು.