Advertisement
ಮಹಾರಾಷ್ಟ್ರದ ಕೊಯ್ನಾದಲ್ಲಿ (ಇದು ಕರ್ನಾಟಕದ ಗಡಿ ಪ್ರದೇಶವೂ ಆಗಿದೆ) 1967ರ ಡಿಸೆಂಬರ್ 11ರಂದು ಇತಿಹಾಸದ ಅತ್ಯಂತ ಭೀಕರ ಭೂಕಂಪವೊಂದು ಸಂಭವಿಸಿತು. 177 ಜೀವ ಹಾನಿ, ಅಪಾರ ಆಸ್ತಿಹಾನಿ ಉಂಟಾಯಿತು. 2,200 ಮಂದಿ ಗಾಯಗೊಂಡರು. ಸಹಸ್ರಾರು ಮಂದಿ ನಿರ್ಗತಿಕರಾದರು. ಆ ಬಳಿಕ ಪರಿಹಾರ ಕ್ರಮಗಳ ಅಂಗವಾಗಿ ಧನ ಸಂಗ್ರಹದ ಕಾರ್ಯವೂ ನಡೆಯಿತು.
Related Articles
ಈ ಪಂದ್ಯಕ್ಕೆ ನೆಹರೂ ಮೈದಾನವನ್ನು ವಿಶೇಷ ವಾಗಿ ಸಜ್ಜುಗೊಳಿಸಲಾಗಿತ್ತು. ಆ ಸಂದರ್ಭಕ್ಕೆ ಮ್ಯಾಟಿಂಗ್ ವಿಕೆಟ್. ವಿಸ್ತಾರವಾದ ಪೆಂಡಾಲ್ ವ್ಯವಸ್ಥೆಯಾಗಿತ್ತು. 5 ಸಾವಿರ ಮಂದಿ ವೀಕ್ಷಿಸಿದ್ದು ಇನ್ನೊಂದು ದಾಖಲೆ. ಮುಂಬಯಿ ಸಹಿತ ಮಹಾರಾಷ್ಟ್ರದಲ್ಲಿ ಸಂಭವಿಸಿದ ಕೆಲವು ಅನಪೇಕ್ಷಿತ ಘಟನೆಗಳ ಪರಿಣಾಮವಾಗಿ ಮಂಗಳೂರಿನ ಪಂದ್ಯದ ಮೂರನೆಯ ದಿನ ಫಲಿತಾಂಶರಹಿತವಾಗಿ ಪಂದ್ಯವನ್ನು ಮುಕ್ತಾಯಗೊಳಿಸಲಾಗಿತ್ತು. ಪ್ರದರ್ಶನದ ಪಂದ್ಯವಾದ್ದರಿಂದ ಅಂಕಪಟ್ಟಿ ದಾಖಲುಗೊಂಡಿಲ್ಲ.
Advertisement
ಮಂಗಳೂರು ಸ್ಪೋರ್ಟ್ಸ್ ಕ್ಲಬ್ ಹಾಗೂ ದ. ಕನ್ನಡ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಮನೋಹರ ನಿವಾಸ್, ಇಲ್ಲಿನ ಎಲ್ಲ ಕ್ರಿಕೆಟ್ ಸಂಸ್ಥೆಗಳ ಸಂಘಟನೆಯ ಈ ಪಂದ್ಯದಲ್ಲಿ 16 ಮಂದಿ ರಾಷ್ಟ್ರ ಮಟ್ಟದ ಆಟಗಾರರ ಜತೆ ಮಂಗಳೂರು, ಉಡುಪಿಯ ಕ್ರಿಕೆಟಿಗರೂ ಭಾಗವಹಿಸಿದ್ದರು. “ಕೊಯ್ನಾ ಅರ್ತ್ ಕ್ವೇಕ್ ರಿಲೀಫ್ ಫಂಡ್ ಕ್ರಿಕೆಟ್ ಮ್ಯಾಚ್’ ಎಂಬುದು ಪಂದ್ಯದ ಶೀರ್ಷಿಕೆ ಯಾಗಿತ್ತು.
ಒಂದು ಲಕ್ಷ ರೂ. ಅರ್ಪಣೆಮಂಗಳೂರಿನ ಕ್ರಿಕೆಟ್ ಪಂದ್ಯದ ಸಂಘಟಕರು ಕೊಯ್ನಾ ಭೂಕಂಪ ಪರಿಹಾರ ನಿಧಿಗೆ 1 ಲಕ್ಷ ರೂ. ಮೊತ್ತ ನೀಡಿದರು. 1968ರ ಸಂದರ್ಭಕ್ಕಿದು ಗಣನೀಯ ಮೊತ್ತ. ಎರಡೂ ತಂಡಗಳ ಆಟಗಾರರು ಆಗಿನ ಆಡಳಿತದ ಹೊಟೇಲ್ ಮೋತಿಮಹಲ್‌ನ ಎರಡು ಅಂತಸ್ತುಗಳ ಕೊಠಡಿಯಲ್ಲಿ ತಂಗಿದ್ದರು. ಒಟ್ಟು ಬಿಲ್ 30 ಸಾವಿರ ರೂ. ಆಗಿತ್ತು. ಆದರೆ ಹೊಟೇಲ್ ಆಡಳಿತದವರು ಅದರಲ್ಲಿ 15 ಸಾವಿರ ರೂ.ಗಳನ್ನು ತಮ್ಮ ಕೊಡುಗೆಯಾಗಿ ರಿಯಾಯಿತಿ ನೀಡಿದರು. ಅತಿರಥ ಸಂಗಮ
ಪಂದ್ಯದಲ್ಲಿ ಭಾಗವಹಿಸಿದ್ದ ಅತಿರಥರಿವರು: ಇ.ಎ.ಎಸ್., ಪ್ರಸನ್ನ, ಎಂ. ಚಿನ್ನಸ್ವಾಮಿ, ಮಾಧವ ಮಂತ್ರಿ, ವಿ. ಸುಬ್ರಹ್ಮಣ್ಯ, ಬಾಪು ನಾಡಕರ್ಣಿ, ಚಂದು ಬೋರ್ಡೆ, ಸುನಿಲ್ ಗಾವಸ್ಕರ್, ಜಿ. ಆರ್. ವಿಶ್ವನಾಥ್, ಅಜಿತ್ ವಾಡೇಕರ್, ರಮಾಕಾಂತ್ ದೇಸಾೖ, ಪದ್ಮಾಕರ್ ಶಿವಾಲ್ಕರ್, ಹೇಮಂತ್ ಕಾನಿಟ್ಕರ್, ವಿಜಯಕೃಷ್ಣ, ವಿಜಯ ಮಂಜ್ರೆàಕರ್, ನರೇಂದ್ರ ತಮಾನೆ. ಸ್ಥಳೀಯರ ಪ್ರಾತಿನಿಧ್ಯ
ಮನೋಹರ್ ನಿವಾಸ್, ಜೇಮ್ಸ್ ವಿಲ್ಸನ್ ಅಮ್ಮಣ್ಣ, ಕಮಲಾಕ್ಷ ಪೈ, ಸುರೇಂದ್ರ ಕಾಮತ್, ಪಿ.ಎನ್. ಭಂಡಾರಿ, ಗೋಪಾಲ್ ಪೈ ಎಸ್., ಕೆ. ರಾಮಚಂದ್ರ, ಕೇಪುಳ ದಿನೇಶ್ ನಾಯಕ್, ಮೋಹನ್ ಭಂಡಾರಿ, ವೆಂಕಪ್ಪ ರೈ, ಸಂಜೀವ ಶೆಣೈ, ಬಸ್ತಿ ವಾಮನ ಶೆಣೈ, ರಮೇಶ್ ಮಲ್ಯ, ಕೆ.ಟಿ. ಕಾಮತ್, ರಾಜಗೋಪಾಲ್, ರಾಜಾರಾಮ್ ಪಂದ್ಯದಲ್ಲಿ ಭಾಗವಹಿಸಿದ್ದ ಸ್ಥಳೀಯರು. ಮನೋಹರ ಪ್ರಸಾದ್ ಚಿತ್ರ ಸಂಗ್ರಹ: ಕಸ್ತೂರಿ ಬಾಲಕೃಷ್ಣ ಪೈ.