Advertisement
ಈ ಪಂದ್ಯಾಟವು ಡಿ.5ರಂದು ರಾತ್ರಿ ವಿದ್ಯುಕ್ತ ಚಾಲನೆ ಕಂಡು ಡಿ.6ರಂದು ತಡರಾತ್ರಿ ವರ್ಣರಂಜಿತ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿತು. 30 ಗಜಗಳ ಮೃದು ಚೆಂಡಿನ ಹರಾಜು ಪ್ರಕ್ರಿಯೆಯಲ್ಲಿ ನಡೆದ ಈ ಕ್ರಿಕೆಟ್ ಪಂದ್ಯಾಟದಲ್ಲಿ ದ್ವೀಪದ ಭಾರತೀಯ ಮೂಲದ ಪುರುಷರ 12 ತಂಡಗಳು ಹಾಗೂ ಮಹಿಳೆಯರ 6 ಬಲಿಷ್ಠ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿದವು.
Related Articles
Advertisement
ಈ ಸಂದರ್ಭದಲ್ಲಿ ಅಶ್ವಿನ್ ಸನಿಲ್ ಕುರ್ಕಾಲು, ಗೌರವ ಅತಿಥಿಗಳಾಗಿ ಆಗಮಿಸಿದ್ದ ಬಂಟ್ಸ್ ಕತಾರ್‌ನ ಅಧ್ಯಕ್ಷರಾದ ನವೀನ್ ಶೆಟ್ಟಿ ಹಾಗೂ ಬಿಲ್ಲವಾಸ್ ಕತಾರ್‌ನ ಅಧ್ಯಕ್ಷರಾದ ಸಂದೀಪ್ ಸಾಲಿಯಾನ್ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು. ಎಲ್ಲ ವಿಜೇತ ತಂಡಗಳಿಗೆ ವೈಎಂಎಸ್ ಟ್ರೋಫಿ ಹಾಗೂ ನಗದು ಬಹುಮಾನವನ್ನು ನೀಡಲಾಯಿತು.
ಈ ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ ಪ್ರೀತಮ್ ಅಚಾರ್ಯ ನೇತೃತ್ವದ ಶೈನಿಂಗ್ ಸ್ಟಾರ್ ನೃತ್ಯ ತಂಡದ ಸುಮಾರು 70ಕ್ಕೂ ಹೆಚ್ಚು ಮಕ್ಕಳಿಂದ ವೈವಿಧ್ಯಮಯ ನೃತ್ಯ ಹಾಗೂ ಡಿಜೆ ಧನುಷ್ ಅವರಿಂದ ಲಯ ಬದ್ಧವಾದ ಡಿಜೆ ಸಂಯೋಜನೆ, ಪ್ರದರ್ಶನಗೊಂಡು ನೆರೆದ ಕ್ರೀಡಾಪ್ರೇಮಿಗಳ ಮನಸೂರೆಗೊಂಡಿತು. ಜತೆಗೆ ಬಹ್ರೈ ನ್ ದ್ವೀಪ ರಾಷ್ಟ್ರದ 53ನೇ ರಾಷ್ಟ್ರೀಯ ದಿನವನ್ನು ಪೂರ್ವಭಾವಿಯಾಗಿ ಸಂಭ್ರಮಿಸಲಾಯಿತು.
ಈ ಪಂದ್ಯಾಟದ ತೀರ್ಪುಗಾರರಾಗಿ ಸುರೇಂದ್ರ ಭಂಡಾರಿ, ಕಮಲ್, ಮುಬಾರಕ್ ಸಹಕರಿಸಿದರು. ವೀಕ್ಷಕ ವಿವರಣೆಗಾರರಾಗಿ ಮನ್ಸೂರ್ ಸೌದಿ ಅರೇಬಿ ಯಾ, ಫ್ರೀಡಾ ಸಿಕ್ವೇರಾ ಜಾಯ್ ಅವರುಗಳು ಸಹಕರಿಸಿದರು.
ವಸಂತ್ ಸಾಲಿಯಾನ್ ಮಲ್ಪೆ, ಪ್ರಶಾಂತ್ ಬಂಗೇರ ಕತಾರ್, ಶರಣ್ ಬಂಟಕಲ್, ರತೀಶ್ ಭಂಡಾರಿ, ದೀಕ್ಷಿತ್ ಸಾಲಿಯಾನ್, ಶಶಿಧರ್ ಕುಲಾಲ್ ಕೈರಂಗಳ, ಅನೀಶ್, ಯತೀಶ್ ಪೂಜಾರಿ, ಶರತ್ ಶೆಟ್ಟಿ, ಧನರಾಜ್ ಶೆಟ್ಟಿ, ನವೀನ್ ಕುಮಾರ್, ಭರತ್ ನಾಯಕ್, ಪ್ರವೀಣ್, ನಿತ್ಯ ನಾಯಕ್, ಕಾರ್ತಿಕ್ ಶೆಟ್ಟಿ, ಕೌಶಿಕ್ ಶೆಟ್ಟಿ , ವಿವಿನಿjತ್ ಡಿ’ಸೋಜಾ, ಸುನಿಲ್ ಉಪ್ಪೂರ್, ಬಪ್ಪಿ ಮುಂತಾದವರು ಉಪಸ್ಥಿತರಿದ್ದು ಪಂದ್ಯಾಟವು ಯಶಸ್ವಿಯಾಗಿ ಜರಗುವಲ್ಲಿ ಸಹಕರಿಸಿದರು.
ರೂಪೇಶ್ ಸಾಲಿಯಾನ್ ಅವರು ಕಾರ್ಯಕ್ರಮ ನಿರೂಪಿಸಿದರು. ಕಳೆದ 3 ವರುಷಗಳಿಂದ ಈ ಕ್ರಿಕೆಟ್ ಪಂದ್ಯಾಟವನ್ನು ದ್ವೀಪ ರಾಷ್ಟ್ರದಲ್ಲಿ ಆಯೋಜಿಸುತ್ತ ಬಂದಿರುವ ವೈಎಂಎಸ್ ನಿಸರ್ಗ ತಂಡವು ದ್ವೀಪ ರಾಷ್ಟ್ರದ ಕ್ರಿಕೆಟ್ ಆಟಗಾರರಿಗೆ ಉತ್ತಮ ವೇದಿಕೆ ಒದಗಿಸುವುದರ ಜತೆಗೆ ಹಲವಾರು ಸಮಾಜಮುಖೀ ಕೆಲಸಗಳನ್ನು ಕೂಡ ಮಾಡುತ್ತಿದೆ.
ಪುರುಷರ ವಿಭಾಗದ ವಿಜೇತರುಪುರುಷರ ವಿಭಾಗದಲ್ಲಿ ಪ್ರವೀಣ್ ಪಿರೇರಾ ಮಾಲಕತ್ವದ ಸೆವೆನ್ ಸ್ಟಾರ್ ತಂಡ ಚಾಂಪಿಯನ್ ಆಗಿ ಮೂಡಿಬಂದು ಕರಾವಳಿ ಗೆಳೆಯರ ಮಾಲಕತ್ವದ ಕರಾವಳಿ ಫೈಟರ್ಸ್ ತಂಡ ರನ್ನರ್ ಅಪ್ ಪ್ರಶಸ್ತಿ, ನವೀನ್ ಶೆಟ್ಟಿ ಮಾಲಕತ್ವದ ಸಾಚಿ ತಂಡ ತೃತೀಯ ಸ್ಥಾನ, ದಿನೇಶ್ ಪೂಜಾರಿ ಮಾಲಕತ್ವದ ಸರ್ವೋದಯ ಫ್ರೆಂಡ್ಸ್ ಕಲ್ಲಮುಂಡ್ಕೂರ್ ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ಫೈಜಲ್ ಗಂಗೊಳ್ಳಿ ಸರಣಿ ಶ್ರೇಷ್ಠ , ಫೈನಲ್ ಪಂದ್ಯ ಶ್ರೇಷ್ಠ, ಅತ್ಯುತ್ತಮ ದಾಂಡಿಗ ಪ್ರಶಸ್ತಿ, ಕಿಶನ್ ಶೆಟ್ಟಿ ಅತ್ಯುತ್ತಮ ಎಸೆತಗಾರ ಪ್ರಶಸ್ತಿ, ಸಂದೇಶ್ ಅತ್ಯುತ್ತಮ ಗೂಟರಕ್ಷಕ ಪ್ರಶಸ್ತಿ, ಗುರುಪ್ರಸಾದ್ ಶೆಟ್ಟಿ ಅತ್ಯುತ್ತಮ ಕ್ಷೇತ್ರ ರಕ್ಷಕ ಪ್ರಶಸ್ತಿ ತನ್ನದಾಗಿಸಿಕೊಂಡರು. ವನಿತೆಯರ ವಿಭಾಗ ವಿಜೇತರು
ವನಿತೆಯರ ವಿಭಾಗದಲ್ಲಿ ದಿನೇಶ್ ಪೂಜಾರಿ ಹಾಗೂ ರಂಜಿತ್ ಮಾಲಕತ್ವದ ಸರ್ವೋದಯ ಫ್ರೆಂಡ್ಸ್ ಕಲ್ಲಮುಂಡ್ಕೂರು ತಂಡ ಚಾಂಪಿಯನ್ ಆಗಿ ಮೂಡಿಬಂದು, ರಶ್ಮಿ ಸಂಪತ್ ಶೆಟ್ಟಿ ಮಾಲಕತ್ವದ ಎಸ್‌ಆರ್ ನ್ಪೋರ್ಟ್ಸ್ ತಂಡ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಸಾರಾ ವಿವೇಕ್ ಸರಣಿ ಶ್ರೇಷ್ಠ, ಅತ್ಯುತ್ತಮ ದಾಂಡಿಗಿತ್ತಿ ಹಾಗೂ ಫೈನಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡರೆ, ಸಿಲ್ವಿಯಾ ದಾಂತಿಸ್ ಅತ್ಯುತ್ತಮ ಎಸೆತಗಾರ್ತಿ ಪ್ರಶಸ್ತಿ, ಮಮತಾ ಅಗರ್ಬೈಲ್ ಅತ್ಯುತ್ತಮ ಕ್ಷೇತ್ರ ರಕ್ಷಕಿ ಪ್ರಶಸ್ತಿ ತನ್ನದಾಗಿಸಿಕೊಂಡರು.