Advertisement

ಕ್ರಿಕೆಟ್ ಬೆಟ್ಟಿಂಗ್ ಮೂವರ ಬಂಧನ, 3 ಲಕ್ಷ ರೂ. ವಶಕ್ಕೆ ಪಡೆದ ಪೊಲೀಸರು

05:57 PM Sep 30, 2020 | sudhir |

ವಿಜಯಪುರ: ಜಿಲ್ಲೆಯ ಅಪರಾಧ ವಿಭಾಗದ (ಡಿಸಿಐಬಿ) ಸಿಪಿಐ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ಇಂಡಿ ಪಟ್ಟಣದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿ, 3 ಲಕ್ಷ ರೂ. ಹಣ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

Advertisement

ಇಂಡಿ ಪಟ್ಟಣದಲ್ಲಿ ಮಂಗಳವಾರ ಐಪಿಎಲ್ ಕ್ರಿಕೆಟ್ ಬೆಟ್ಡಿಂಗ್ ನಡಯುತ್ತಿರುವ ಕುರಿತು ಪೊಲೀಸರಿಗೆ ಮಾಹಿತಿ ಬಂದಿದೆ. ಕೂಡಲೇ ಎಚ್ಚೆತ್ತ ಎಸ್ಪಿ ಅನುಪಮ ಅಗರವಾಲ, ಎಎಸ್ಪಿ ರಾಮ‌ ಅರಸಿದ್ಧಿ ಮಾರ್ಗದರ್ಶನದಲ್ಲಿ ಡಿಸಿಐಬಿ ಸಿಪಿಐ ಸಿ.ಬಿ.ಬಾಗೇವಾಡಿ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿದೆ.

ದಾಳಿಯ ವೇಳೆ ಶಿವಪುತ್ರ ಚಂದ್ರಾಮ ಬಗಲಿ (31), ಚಂದ್ರಕಾಂತ ಭೈರಪ್ಪ ಪಾಟೀಲ (24) ಹಾಗೂ ಸಾಯಬಣ್ಣ @ ವಿಜಯ ವಾಸುದೇವ ಮೂರಮಾನ (34) ಎಂಬ ಮೂವರು ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಮೂವರು ಆರೋಪಿಗಳಿಂದ 3 ಲಕ್ಷ ರೂ. ನಗದು, 10‌ಮೊಬೈಲ್, 1 ಟಿವಿ ವಶಕ್ಕೆ ಪಡೆದಿದ್ದಾರೆ.

ಇದನ್ನು ಓದಿ :ಬಾಬರಿ ತೀರ್ಪು ಖಂಡಿಸಿ ಮಂಗಳೂರಿನಲ್ಲಿ ಎಸ್ ಡಿಪಿಐ ಪ್ರತಿಭಟನೆ ಪೋಲೀಸರಿಂದ ಬಂಧನ

ಈ ಕುರಿತು ಇಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next