Advertisement

ಮದರಸಾಗಳಲ್ಲಿ ಉಗ್ರರ ಸೃಷ್ಟಿ: ರಿಜ್ವಿ

06:35 AM Jan 10, 2018 | Team Udayavani |

ನವದೆಹಲಿ: ದೇಶದಲ್ಲಿರುವ ಮದರಸಾಗಳನ್ನು ಮುಚ್ಚುವಂತೆ ಕೋರಿ ಉತ್ತರಪ್ರದೇಶದ ಶಿಯಾ ಸೆಂಟ್ರಲ್‌ ವಕ್ಫ್ ಬೋರ್ಡ್‌ ಅಧ್ಯಕ್ಷ ವಾಸಿಂ ರಿಜ್ವಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಮದರಸಾಗಳು ವಿದ್ಯಾರ್ಥಿಗಳ‌ನ್ನು ಉಗ್ರ ಸಂಘಟನೆಗಳಿಗೆ ಸೇರಿಕೊಳ್ಳಲು ಪ್ರೇರೇಪಿಸುತ್ತಿವೆ. ಕೆಲವು ಮದರಸಾಗಳಲ್ಲಿ ಭಯೋತ್ಪಾದಕರನ್ನು ಹುಟ್ಟುಹಾಕುತ್ತಿದೆ ಎಂದು ಆರೋಪಿಸಿರುವ ರಿಜ್ವಿ, ಮದರಸಾಗಳನ್ನು ಸಿಬಿಎಸ್‌ಇ ಮತ್ತು ಐಸಿಎಸ್‌ಇಗಳ ಅಡಿ ಬರುವ ಶಿಕ್ಷಣ ಸಂಸ್ಥೆಗಳ ಭಾಗವಾಗಿಸುವಂತೆ ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.

Advertisement

ಮದರಸಾಗಳನ್ನು ನಡೆಸಲು ಬರುತ್ತಿರುವ ದೇಣಿಗೆ ಪಾಕ್‌, ಬಾಂಗ್ಲಾದ  ಉಗ್ರ ಸಂಘಟನೆಗಳಿಂದ ಬರುತ್ತಿದೆ ಎಂದು ಆರೋಪಿಸಿದ್ದಾರೆ. ಹೇಳಿಕೆಗೆ ಪ್ರತಿಕ್ರಿಯಿ ಸಿರುವ ಸಂಸದ  ಅಸಾದುದ್ದೀನ್‌ ಒವೈಸಿ, “ಅಂಥವುಗಳ ವಿವರವನ್ನು ರಿಜ್ವಿ ಕೇಂದ್ರಕ್ಕೆ ನೀಡಲಿ’  ಎಂದು ಸವಾಲು ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next