Advertisement
ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆಯಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಜಲಪಾತೋತ್ಸವ ಸಮಾರೋಪದಲ್ಲಿ ಮಾತನಾಡಿದರು. ನಾಡಿನ ಸಂಸ್ಕೃತಿ ಉಳಿದು ಭಾಷೆ ಬೆಳೆಯ ಬೇಕಾದರೆ ಪ್ರತಿಯೊಬ್ಬರೂ ನಾಡಿನ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.
Related Articles
Advertisement
ನಂತರ ಸಾಧುಕೋಕಿಲ ಮತ್ತು ತಂಡದ ಉಷಾ ಕೋಕಿಲ, ಚೈತ್ರಾ, ಇಂದುನಾಗರಾಜು, ಶಶಾಂಕ್, ಮನು, ಸಂತೋಷ್, ಪ್ರಕಾಶ್, ಮಿಮಿಕ್ರಿ ಶ್ಯಾಂ ಅವರಿಂದ ಏರ್ಪಡಿಸಿದ್ದ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ಜನರ ಮನಸೂರೆಗೊಂಡಿತು. ಸಂಸದ ಸಿ.ಎಸ್.ಪುಟ್ಟರಾಜು, ಶಾಸಕ ಸಾ.ರಾ.ಮಹೇಶ್, ಮೇಯರ್ ರವಿಕುಮಾರ್, ಜಿ.ಪಂ. ವಿಪಕ್ಷ ನಾಯಕ ಡಿ.ರವಿಶಂಕರ್, ಸದಸ್ಯರಾದ ಅಮಿತ್ ವಿ.ದೇವರಹಟ್ಟಿ, ಕುಪ್ಪೆ ಗ್ರಾಪಂ ಅಧ್ಯಕ್ಷೆ ಪ್ರೇಮಾಕುಮಾರ್, ಉಪಾಧ್ಯಕ್ಷ ಕೆ.ವಿ.ನವೀನ್‌ಕುಮಾರ್, ಉಪ ವಿಭಾಗಾಧಿಕಾರಿ ಡಾ.ಸೌಜನ್ಯಾ, ತಹಶೀಲ್ದಾರ್ ಮಹೇಶ್‌ಚಂದ್ರ, ಇಒ ಚಂದ್ರು, ಅಪರ್ಣಾ ನಿರೂಪಿಸಿದರು.
ಜಲಪಾತೋತ್ಸವ ಸಂಭ್ರಮ… ಸಾವಿರಾರು ಜನರು ಕಾವೇರಿ ಜಲಪಾತೋತ್ಸವವನ್ನು ಕಣ್ತುಂಬಿಕೊಂಡರು. ಜಗಮಗಿಸಿದ ಚುಂಚನಕಟ್ಟೆ, ಆನಂದದ ಅಲೆಯಲ್ಲಿ ತೇಲಿದ ಜನ ಸಾಗರ, ಯುವ ಜನತೆ ನರ್ತಿಸಿದರು. ಚಿತ್ರನಟರನ್ನು ನೋಡಿ ಜೈಕಾರ ಹಾಕಿದ ಸಂಭ್ರಮಿಸಿದ ಪ್ರೇಕ್ಷಕರು ಇದು ಚುಂಚನಕಟ್ಟೆಯಲ್ಲಿ ಭಾನುವಾರ ರಾತ್ರಿ ನಡೆದ ಎರಡನೇ ವರ್ಷದ ಜಲಪಾತೋತ್ಸವದಲ್ಲಿ ಕಂಡು ಬಂದ ದೃಶ್ಯಗಳು. ಜಲಪಾತೋತ್ಸವದ ಅಂಗವಾಗಿ ಜಿಲ್ಲಾಡಳಿತ, ಪ್ರವಾಸೋಧ್ಯಮ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಚುಂಚನಕಟ್ಟೆ ಬಸವನ ವೃತ್ತ ಹಾಗೂ ಶ್ರೀರಾಮ ದೇವಾಲಯದ ಸುತ್ತಮುತ್ತ ಮಾಡಿದ್ದ ದೀಪಾಲಂಕಾರ ಕಣ್ಣು ಕೋರೈಸಿತು. ಇಡೀ ಪ್ರದೇಶ ಜಗ ಮಗಿಸುವಂತೆ ಮಾಡಿತು. ನಟರಾದ ಸಾಧುಕೋಕಿಲ ಮತ್ತು ತಂಡದವರ ಹಾಡಿನ ಮೋಡಿಗೆ ಜನ ಮರುಳಾದರು. ಅವರ ಸಹೋದರ ಲಯಕೋಕಿಲ ಅವರ ಹಾಸ್ಯದ ಝಲಕ್ ಜನರನ್ನು ನಕ್ಕು ನಗಿಸಿತು. ಜಲಪಾತೋತ್ಸವ ವೀಕ್ಷಣೆಗೆ ಜಿಲ್ಲೆಯ ವಿವಿಧೆಡೆಗಳಿಂದ 20 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಇದರಿಂದ ಚುಂಚನಕಟ್ಟೆಯಾದ್ಯಂತ ಎಲ್ಲಿ ನೋಡಿದರೂ ಜನ ಮತ್ತು ವಾಹನಗಳು ಕಂಡು ಬಂದವು. ಅಲ್ಲದೇ, ಡಿವೈಎಸ್‌ಪಿ ರುದ್ರಮುನಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.