ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳದಿರುವುದು ವಿಷಾದನೀಯ. ಈಗ ಅದನ್ನು ಪುನರ್ ವಿಮರ್ಶೆಗೊಳಪಡಿಸಿ ಮತ್ತೂಂದು ವರದಿ ಮೂಲಕ ಅಧಿಕೃತ ಶಾಸನವಾಗಿ ಜಾರಿಗೊಳಿಸಬೇಕಿದೆ ಎಂದು ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ ಪ್ರತಿಪಾದಿಸಿದ್ದಾರೆ.
Advertisement
87ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಬುಧವಾರ ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಹಿಷಿ ವರದಿ ಪರಿ ಷ್ಕರಣೆ ಕುರಿತು ತಮ್ಮ ನಿಲುವು ವ್ಯಕ್ತಪ ಡಿಸಿದ್ದಾರೆ. ಸಂದರ್ಶನದ ವಿವರ ಇಲ್ಲಿದೆ.
ಇದೊಂದು ಅನಿರೀಕ್ಷಿತ ಸುದ್ದಿ. ಕಸಾಪ ಅಧ್ಯಕ್ಷರಾದ ಮಹೇಶ್ ಜೋಶಿ ದೂರವಾಣಿ ಕರೆ ಮಾಡಿ ತಿಳಿಸಿದಾಗ ಖುಷಿಯಾಯಿತು. ನನಗೆ ಸಾಕಷ್ಟು ವಯಸ್ಸಾಗಿದೆ, ಮೊದಲಿನಂತೆ ಸಾಹಿತ್ಯ ಚಟುವಟಿಕೆಯಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಳ್ಳುತ್ತಿಲ್ಲ. ಆದರೂ ಹಲವು ಜವಾಬ್ದಾರಿ ಹೊತ್ತು ಕಸಾಪದ ತೇರು ಎಳೆದಿದ್ದೇನೆ, ನಮ್ಮದೇ ಮಾತೃ ಸಂಸ್ಥೆ ಸಾರ್ವಭೌಮವಾಗಿ ಆಯ್ಕೆ ಮಾಡಿದೆ. ಹಾಗಾಗಿ ಸಂತೋಷದಿಂದ ಒಪ್ಪಿದ್ದೇನೆ. -ಇತ್ತೀಚಿನ ಸಮ್ಮೇಳನಗಳು ಜಾತ್ರೆಯಂತಾಗುತ್ತಿವೆ ಎಂಬ ಆರೋ ಪಗಳಿವೆ. ಇದನ್ನು ಒಪ್ಪುತ್ತೀರಾ, ಹಾಗಾದರೆ ಸಮ್ಮೇ ಳ ನಗಳು ಹೇಗಿರಬೇಕು?
ನನ್ನ ಪ್ರಕಾರ ಅದೊಂದು ಸಾಂಸ್ಕೃತಿಕ ಜಾತ್ರೆ. ಅದಕ್ಕೆ ತನ್ನದೇ ಪಾವಿತ್ರ್ಯತೆ, ಘನತೆ ಇದೆ. ಸಮ್ಮೇಳನದಲ್ಲಿ ಸಾಹಿತ್ಯದ ಸೊಗಡು, ಪರಂಪರೆ, ಜನರ ಬದುಕಿನ ಚರ್ಚೆಯಾಗಬೇಕು. ಜನರಿಗೆ ವೈಚಾರಿಕತೆ, ವಿವಿಧ ಸಾಹಿತ್ಯದ ಪ್ರಕಾರಗಳು, ಪ್ರಾಚೀನ ಸೌಂದರ್ಯವನ್ನು ತಿಳಿಸಬೇಕು.
Related Articles
ಯಾವುದೇ ಶಿಕ್ಷಣ ನೀತಿಯನ್ನು ಸರಕಾರವೇ ನಿರ್ಧರಿಸಬೇಕು. ಏನು ನಿರ್ಧರಿಸಬೇಕು ಎಂಬುದನ್ನು ಕನ್ನಡಸಾಹಿತ್ಯ ಪರಿಷತ್ತು, ಕನ್ನಡಪರ ಹೋರಾಟಗಾರರು ಸಲಹೆ ನೀಡಬಹುದಷ್ಟೇ. ಆಂಗ್ಲ ಭಾಷೆಯನ್ನು ಕೂಡ ತಳ್ಳಿಹಾಕುವಂತಿಲ್ಲ ಅದೊಂದು ಜಾಗತಿಕ ಭಾಷೆ. ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲಿ ಆಗಬೇಕು, ಆದರೆ ಎಳೆ ಮನಸ್ಸುಗಳ ಮೇಲೆ ಆಂಗ್ಲ ಶಿಕ್ಷಣ ಹೇರುವುದು ಸರಿಯಲ್ಲ. ಆಂಗ್ಲ ಶಿಕ್ಷಣಕ್ಕೆ ಪ್ರತ್ಯೇಕ ತರಬೇತಿ ನೀಡಬಹುದು ಇದರಿಂದ ಉದ್ಯೋಗಾವಕಾಶಗಳು ಹೆಚ್ಚಲಿವೆ.
Advertisement
-ಕನ್ನಡ ಮಾಧ್ಯಮದಿಂದ ವಿಮುಖರಾಗುತ್ತಿರುವ ಪೋಷಕರನ್ನು ಕರೆತರುವುದು ಹೇಗೆ? ಪೋಷಕರಿಗೆ ತಮ್ಮ ಮಕ್ಕಳ ಉದ್ಯೋಗ, ಭವಿಷ್ಯದ ಭದ್ರತೆ ಬಗ್ಗೆ ಚಿಂತನೆ ಇರುತ್ತದೆ. ಆಂಗ್ಲ ಶಿಕ್ಷಣ ವ್ಯವಹಾರಿಕ ಭಾಷೆಯಾಗಿದ್ದು, ಕನ್ನಡದಿಂದಲೂ ಉದ್ಯೋಗಾವಕಾಶ ಸಿಗಲಿವೆ ಎಂದು ಶಿಕ್ಷಣ ಇಲಾಖೆ ಪೋಷಕರಿಗೆ ಮನವರಿಕೆ ಮಾಡಬೇಕು. ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಕನ್ನಡದಲ್ಲೇ ನೀಡಬೇಕು. – ಯುವಜನತೆಯಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿಯ ಆಸಕ್ತಿ ಕಡಿಮೆಯಾಗುತ್ತಿದೆ. ಅವರನ್ನು ಹೇಗೆ ಆಕರ್ಷಿಸುವಿರಿ?
ಸಾಂಸ್ಕೃತಿಕ ಕಾರ್ಯಕ್ರಮದ ಆಶಯ ಮನೋರಂಜನೆಯಾದರೂ ಸಂಸ್ಕೃತಿ ಬಗ್ಗೆ ಅಭಿಮಾನ ಮೂಡಿಸಲು ಹೆಚ್ಚಾಗಿ ಸಾಹಿತ್ಯ ಶಿಬಿರ, ಸಾಂಸ್ಕೃತಿಕ ಚಟವಟಿಕೆಯನ್ನು ಆಯೋಜಿಸಿ ಉತ್ತೇಜನ ನೀಡಿದಾಗ ಯುವಜನತೆಯಲ್ಲಿ ಒಲವು ಮೂಡಲಿದೆ. ಈ ನಿಟ್ಟಿನಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಯುವಸಬಲೀಕರಣ ಇಲಾಖೆ ಮುಂದಾಗಬೇಕು. -ಜಾನಪದ ವಿ.ವಿ. ಸ್ಥಾಪನೆಯಲ್ಲಿ ನಿಮ್ಮ ಹೋರಾಟ ಪ್ರಮುಖವಾದುದು ಈಗ ಅದರ ಕಾರ್ಯವೈಖರಿ ತೃಪ್ತಿ ತಂದಿದಿಯಾ?
ವಿ.ವಿ. ಸ್ಥಾಪನೆ ತೃಪ್ತಿ ತಂದಿದೆ, ಆದರೆ ಅದರ ಬೆಳವಣಿಗೆ ತೃಪ್ತಿ ತಂದಿಲ್ಲ. ಈ ಬಗ್ಗೆ ಸರ್ಕಾರ, ಸಚಿವರಿಗೆ ಮನವಿ ಮಾಡಿದ್ದೆ. ನಿರೀಕ್ಷಿತ ಬೆಳವಣಿಗೆಯಾಗಿಲ್ಲ. ಜಾನಪದ ವಿ.ವಿ.ಯೇ ಜನರ ಬಳಿಗೆ ಹೋಗಬೇಕು ಎಂಬುದು ನನ್ನ ಆಶಯ. -ಗಡಿನಾಡ ಕನ್ನಡಿಗರ ಸಮಸ್ಯೆಗಳು, ಮುಖ್ಯವಾಗಿ ಉದ್ಯೋಗ,ಮೀಸಲಾತಿ ಬಗ್ಗೆ ಹೇಳುವುದಾದರೆ?
ಗಡಿನಾಡ ಕನ್ನಡಿಗರ ಸಮಸ್ಯೆ ಪರಿಹರಿಸಲು ಕನ್ನಡ ಗಡಿ ಅಭಿವೃದ್ಧಿ ಪ್ರಾಧಿಕಾರವಿದೆ. ಗಡಿನಾಡಿನ ಕನ್ನಡಿಗರಲ್ಲಿ ಭಾಷೆ, ಸಂಸ್ಕೃತಿ ಅಚ್ಚೋತ್ತುವಂತೆ ಮಾಡಬೇಕು. ಪ್ರಾಥಮಿಕ ಸೌಲಭ್ಯ ಒದಗಿಸಲು ಆದ್ಯತೆ ನೀಡಬೇಕು. ಕಾನೂನಿನ ಚೌಕಟ್ಟಿನಲ್ಲಿ ಕೈಗೊಳ್ಳಬೇಕಾದ ಯೋಜನೆಗಳನ್ನು ರೂಪಿಸಿಕೊಳ್ಳಬೇಕಿದೆ -ಆಡಳಿತದಲ್ಲೇ ಇನ್ನೂ ಕನ್ನಡ ಸರಿಯಾಗಿ ಅನುಷ್ಠಾನವಾಗದ ಬಗ್ಗೆ?
ಇಂದಿಗೂ ಆಂಗ್ಲ ಭಾಷೆಯಲ್ಲಿಯೇ ನಡೆಯುತ್ತಿದೆ. ಈ ಬಗ್ಗೆ ಮುಖ್ಯ ಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಧಿಕಾರಿಗಳು ಪಾಲಿಸ ಬೇಕು. ಪರಿಷತ್ತಿನ ಸಂಸ್ಥೆಗಳು ಈ ನಿಟ್ಟಿನಲ್ಲಿ ಗಟ್ಟಿನಿಲುವು ತೆಗೆದುಕೊಳ್ಳಬೇಕು. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೊ.ರು.ಚ. ಆಯ್ಕೆ
ಮಂಡ್ಯದಲ್ಲಿ ಡಿಸೆಂಬರ್ 20, 21 ಮತ್ತು 22ರಂದು ಆಯೋಜಿತವಾಗಿರುವ 87ನೆಯ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಬರಹಗಾರ, ಜನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ ಅವರು ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ| ಮಹೇಶ ಜೋಶಿ ಅಧಿಕೃತ ಘೋಷಣೆ ಮಾಡಿದರು. -ರಘು ಕೆ. ಜಿ.