Advertisement

ಅಮಿತ್‌ ಶಾರಿಂದ ಕೋಮು ಭಾವನೆ ಸೃಷ್ಟಿ

02:29 PM Jul 21, 2017 | |

ಹೊನ್ನಾಳಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ದೇಶದಲ್ಲಿ ಕೋಮು ಭಾವನೆ ಸೃಷ್ಟಿ ಮಾಡುತ್ತಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಉಸ್ತುವಾರಿ ವೀಕ್ಷಕ ಮಧುಗೌಡ ಯಾಸ್ಕಿ ಆರೋಪಿಸಿದರು.

Advertisement

ಗುರುವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರಪ್ರದೇಶ ರಾಜ್ಯದಲ್ಲಿ ಹಿಂದೂ, ಮುಸ್ಲಿಂ ಎಂದು ಜಾತಿ ಸೃಷ್ಟಿ ಮಾಡಿ ಅಲ್ಲಿನ ವಿಧಾನ ಸಭೆಯಲ್ಲಿ ಬಿಜೆಪಿ ಗೆಲುವ ಸಾಧಿಸುವಂತೆ ಮಾಡಲಾಯಿತು. ಭಾರತ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ದೇಶವಾಗಿದ್ದು, ಹಿಂದೂಗಳು, ಅಲ್ಪಸಂಖ್ಯಾತರ ಸಹೋದರಂತೆ ಬಾಳಬೇಕು. ಆದರೆ ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ಪ್ರಾರಂಭವಾಗಿವೆ ಎಂದು ದೂರಿದರು.

ಮೋದಿ ನೋಟ್‌ಬ್ಯಾನ್‌ ಮಾಡಿದ್ದರಿಂದ ಹಣವಂತರಿಗೆ ತೊಂದರೆಯಾಗದೇ ಕೇವಲ ಬಡ ಬಗ್ಗರಿಗೆ ಹಾಗೂ ಮಧ್ಯಮ ವರ್ಗದವರಿಗೆ ಇನ್ನಿಲ್ಲದೆ ತೊಂದರೆಯಾಯಿತು. ಈಗ ಜಾರಿಗೆ ತಂದಿರುವ ಜಿಎಸ್‌ಟಿ ದೇಶವನ್ನು ಮತ್ತಷ್ಟು ಅಧೋಗತಿಗೆ ತೆಗೆದುಕೊಂಡು
ಹೋಗುತ್ತದೆ. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ನಮ್ಮ ಅಕ್ಕಪಕ್ಕದ ದೇಶಗಳಾದ ಪಾಕಿಸ್ತಾನ, ಚೀನಾ, ಶ್ರೀಲಂಕಾ ಸೇರಿದಂತೆ ಬೇರೆ ದೇಶಗಳೊಂದಿಗೆ ಸಂಬಂಧ ಕೆಟ್ಟು ಹೋಗಿದೆ. ಒಂದು ದೇಶ ಇನ್ನೊಂದು ದೇಶವನ್ನು ಅನುಮಾನದಿಂದ
ನೋಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರ ರಹಿತ ಮತ್ತು ಉತ್ತಮ ಆಡಳಿತ ನಡೆಸುತ್ತಿದೆ. ಅನೇಕ ಯೋಜನೆಗಳನ್ನು ರೂಪಿಸಿರುವುದಲ್ಲದೇ ವೃತ್ತಿ ಶಿಕ್ಷಣದಲ್ಲಿ ತೊಡಗಿರುವವ ಬಡ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಿಸುವ
ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು. ರೈತರ ಸಾಲವನ್ನು ಮನ್ನಾ ಮಾಡಿರುವ ರಾಜ್ಯ ಸರ್ಕಾರದ
ನಿರ್ಧಾರ ಉತ್ತಮವಾದದ್ದು. ಅದೇ ರೀತಿ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಬೇಕು. ರಾಹುಲ್‌ಗಾಂಧಿ  ಅವರ ಆದೇಶದಂತೆ ಕಾಂಗ್ರೆಸ್‌ ಪಕ್ಷವನ್ನು ಬೂತ್‌ಮಟ್ಟದಲ್ಲಿ ಸಂಘಟಿಸುವ ಕಾರ್ಯ ದೇಶಾದ್ಯಂತ ನಡೆಯುತ್ತಿದ್ದು, ಈ ಕಾರ್ಯ ಕರ್ನಾಟಕದಲ್ಲಿ ವ್ಯಾಪಕವಾಗಿ ಹಮ್ಮಿಕೊಳ್ಳಲಾಗುವುದು ಎಂದರು. 

ಶಾಸಕ ಡಿ.ಜಿ.ಶಾಂತನಗೌಡ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌ .ಬಿ.ಮಂಜಪ್ಪ, ಎಪಿಎಂಸಿ ಅಧ್ಯಕ್ಷ ಎಸ್‌. ಎಸ್‌.ಬೀರಪ್ಪ, ಯುವ ಕಾಂಗ್ರೆಸ್‌ ತಾಲೂಕು ಅಧ್ಯಕ್ಷ ಮಧುಗೌಡ, ಮುಖಂಡರಾದ ಎಂ.ಸಿದ್ದಪ್ಪ, ಆರ್‌ .ನಾಗಪ್ಪ, ಕ.ವಿ.ಚನ್ನಪ್ಪ, ವಸಂತನಾಯ್ಕ,
ವಾಜೀದ್‌, ಮಲ್ಲೇಶಪ್ಪ ಇತರರಿದ್ದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next