ಬಂಗಾರಪೇಟೆ: ಸರ್ಕಾರಕ್ಕೆ ಸೇರಿದ ಜಮೀನನ್ನು ಅಕ್ರಮವಾಗಿ ನಿವೇಶನ ಮಾಡಿ ಇ-ಸ್ವತ್ತು ಖಾತೆ ಮಾಡಿರುವ ಆರೋಪ ಮೇಲೆ ತಾಲೂಕಿನ ಚಿನ್ನಕೋಟೆ ಗ್ರಾಪಂನ ಪಿಡಿಒ ವಿ.ಕೃಷ್ಣಪ್ಪ ಹಾಗೂ ಕಾರ್ಯದರ್ಶಿ ಜಿ. ಮುನಿಯಪ್ಪ ಅವರನ್ನು ಜಿಪಂ ಸಿಇಒ ಸೇವೆಯಿಂದ ಅಮಾನತು ಮಾಡಿ ಕ್ರಿಮಿನಲ್ ದೂರು ದಾಖಲಿಸುವಂತೆ ಆದೇಶಿಸಿದ್ದಾರೆ.
ಭೂ ಪರಿವರ್ತನೆ: ತಾಲೂಕಿನ ಚಿನ್ನಕೋಟೆ ಗ್ರಾಪಂ ವ್ಯಾಪ್ತಿಯ ಸೋರೇಗೌಡನಕೋಟೆ ಗ್ರಾಮದ ಸ.73/9ರಲ್ಲಿ ಜರೀನಾ ಬೇಗಂ ಕೋಂ ಮಹಮ್ಮದ್ ಸಲೇಹಾ ಎಂಬುವವರಹೆಸರಿನಲ್ಲಿ 23.04 ಗುಂಟೆ ಜಮೀನಿದ್ದು, ಈ ಜಮೀನಿನಲ್ಲಿ ಸರ್ಕಾರಿಖರಾಬು1.34 ಎಕರೆ ಜಮೀನಿದ್ದು, ಸರ್ಕಾರದ ಖರಾಬು ಸೇರಿ ಎಲ್ಲಾ ಜಮೀನಿಗೂ 5 7 ಇ-ಸ್ವತ್ತು ಖಾತೆಗಳನ್ನು ಅಕ್ರಮವಾಗಿ ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಮಾಡಿರುವ ಬಗ್ಗೆ ನಕಲಿದಾಖಲೆ ಸೃಷ್ಟಿಸಿ ಇ-ಸ್ವತ್ತು ಖಾತೆ ಮಾಡಿರುವುದರಿಂದ ಅಮಾನತು ಮಾಡಲಾಗಿದೆ.
ಕಳೆದ ಸಾಲಿನಲ್ಲಿ ಅಕ್ರಮ: ಸಮಾಜ ಸೇವಕ ಎಸ್.ನಾರಾಯಣಸ್ವಾಮಿ ನೀಡಿರುವ ದೂರಿನನ್ವಯ ಜಿಪಂ ಅಧಿಕಾರಿಗಳುತನಿಖೆಗೆ ಆದೇಶಿಸಿದ್ದರು. ಗ್ರಾಪಂ ಆಡಳಿತಮಂಡಳಿಯಲ್ಲಿ 2013-14ನೇ ಸಾಲಿನ ಗ್ರಾಪಂ ಕಡತದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕಳೆದ ಸಾಲಿನಲ್ಲಿ ಈ ಅಕ್ರಮ ಖಾತೆಗಳನ್ನು ಮಾಡಿದ್ದಾರೆ.
ಅಧಿಕೃತವಾಗಿ ಸಹಿ ಇಲ್ಲ: 1982ರಲ್ಲಿ ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಮಾಡಿರುವ ಬಗ್ಗೆ ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ. ನ.20 1980 ರಲ್ಲಿ ನಂಜಪ್ಪ ಬಿನ್ ಆರ್ಮುಗಂರ ಹೆಸರಿನಲ್ಲಿ ಬಂಗಾರಪೇಟೆ ತಹಶೀಲ್ದಾರ್ ಹೆಸರಿನಲ್ಲಿ ಸ.73/2 ರಲ್ಲಿನ ಜಮೀನಿಗೆ ಮಂಜೂರಾಗಿರುವ ಭೂ ಪರಿವರ್ತನೆ ಜಾಗವನ್ನು ಸ.73/9ಕ್ಕೆ ಸೇರಿಸಿ ನಕ್ಷೆಗೆ ಯಾವುದೇ ಅಧಿಕೃತವಾಗಿ ಸಹಿ ಇಲ್ಲದೇ ನಕಲಿ ದಾಖಲೆ ಸೃಷ್ಟಿ ಮಾಡಿರುವ ಬಗ್ಗೆ ಜಿಪಂನ ತನಿಖಾಧಿಕಾರಿಗಳು ತಿಳಿಸಿರುವ ವರದಿಯಲ್ಲಿ ಆರೋಪಿಸಿದ್ದಾರೆ.
ಆಕ್ಷೇಪ: ಜರೀನಾ ಬೇಗಂ ಹೆಸರಿನಲ್ಲಿ ಅಕ್ರಮವಾಗಿ 57 ನಿವೇಶನಗಳನ್ನು ಸರ್ಕಾರಿ ಖರಾಬು ಸೇರಿದಂತೆ ಇ-ಸ್ವತ್ತು ಮಾಡಿರುವುದರ ಬಗ್ಗೆ ಸಾರ್ವಜನಿಕವಾಗಿ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಜು.3 ರಂದು ಗ್ರಾಪಂ ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ಅಕ್ರಮವಾಗಿ ಮಾಡಿರುವ 57 ಇ-ಸ್ವತ್ತುಗಳನ್ನು ರದ್ದು ಮಾಡುವ ಬಗ್ಗೆ ತೀರ್ಮಾನಿಸಿರುವುದಕ್ಕೆ ಜಿಪಂ ಅಧಿಕಾರಿಗಳುಆಕ್ಷೇಪ ವ್ಯಕ್ತಪಡಿಸಿದ್ದರಿಂದ ತಾಪಂ ಇಒ ಹಂತದಲ್ಲಿ ತಟಸ್ಥವಾಗಿದೆ.
ಅಕ್ರಮದಲ್ಲಿನೇರವಾಗಿಭಾಗಿಯಾಗಿರುವ ಚಿನ್ನಕೋಟೆ ಗ್ರಾಪಂ ವಿ.ಕೃಷ್ಣಪ್ಪ, ಕಾರ್ಯದರ್ಶಿ ಯಾಗಿದ್ದ ಹಾಗೂ ಕೆಜಿಎಫ್ ತಾಲೂಕಿನ ಶ್ರೀನಿವಾಸಸಂದ್ರ ಗ್ರಾಪಂನಲ್ಲಿ ಗ್ರೇಡ್-2 ಕಾರ್ಯದರ್ಶಿಯಾಗಿರುವ ಜಿ.ಮುನಿಯಪ್ಪರನ್ನು ಸೇವೆಯಿಂದ ಅಮಾನತು ಮಾಡಿದ್ದು, ಸ್ಥಳೀಯ ಠಾಣೆಯಲ್ಲಿ ಕ್ರಿಮಿನಲ್ ದೂರು ದಾಖಲಿಸಲು ಜಿಪಂ ಸಿಇಒ ಎಂ.ಆರ್. ರವಿಕುಮಾರ್ ಆದೇಶಿಸಿದ್ದಾರೆ.
ಚಿನ್ನಕೋಟೆ ಗ್ರಾಪಂನಲ್ಲಿ ಅಕ್ರಮವಾಗಿ 57ಇ-ಸ್ವತ್ತು ಖಾತೆ ಮಾಡಿರುವ ಬಗ್ಗೆ ಜಿಪಂ ಮೇಲಾಧಿಕಾರಿಗಳು ತನಿಖೆ ನಡೆಸಿ ಪಿಡಿಒವಿ.ಕೃಷ್ಣಪ್ಪ,ಕಾರ್ಯದರ್ಶಿಯಾಗಿದ್ದ ಜಿ.ಮುನಿಯಪ್ಪರನ್ನು ಸೇವೆಯಿಂದ ಅಮಾನತು ಮಾಡ ಲಾಗಿದ್ದು, ದೂರುದಾಖಲಿಸಲುಕ್ರಮ ಗೊಳ್ಳಲಾಗುವುದು.
– ಎನ್.ವೆಂಕಟೇಶಪ್ಪ. ಇಒ, ತಾಪಂ, ಬಂಗಾರಪೇಟೆ