Advertisement

Created a new record; 5 ವರ್ಷಗಳಲ್ಲಿ 221ವಿಧೇಯಕ್ಕೆ ಸಮ್ಮತಿ: ಜೋಶಿ

12:34 AM Feb 11, 2024 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಅತ್ಯಂತ ಯಶಸ್ವಿ ಅಧಿಕಾರವಧಿಗೆ 17ನೇ ಲೋಕಸಭೆ ಸಾಕ್ಷಿಯಾಗಿದ್ದು, ಹಲವು ಐತಿಹಾಸಿಕ ಮಸೂದೆಗಳನ್ನು ಈ ಅವಧಿಯಲ್ಲಿ ಅಂಗೀಕರಿಸಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಹೇಳಿದ್ದಾರೆ.

Advertisement

ಸಂಸತ್‌ ಬಜೆಟ್‌ ಅಧಿವೇಶನ ಮತ್ತು 17ನೇ ಲೋಕಸಭೆ ಅವಧಿಯ ಕೊನೆ ಅಧಿವೇಶನ ಮುಕ್ತಾಯದ ಬಳಿಕ 5 ವರ್ಷಗಳ ಸಾಧನೆಯ ವಿವರಗಳನ್ನು ನೀಡಿದ್ದಾರೆ.

ಈ ವೇಳೆ 17ನೇ ಲೋಕಸಭೆಯ ಉತ್ಪಾದಕತೆಯನ್ನು ಶ್ಲಾ ಸಿದ್ದಾರೆ. ಸಂಸತ್ತಿನ ಉಭಯ ಸದನಗಳು ಸೇರಿ ಒಟ್ಟು 221 ಮಸೂದೆಗಳಿಗೆ ಅಂಗೀಕಾರ ನೀಡಿವೆ. ಈ ಪೈಕಿ ಕೆಲ ಐತಿಹಾಸಿಕ ವಿಧೇಯಕಗಳು ಸೇರಿವೆ ಎಂದಿದ್ದಾರೆ. ಕಾಶ್ಮೀರಕ್ಕಾಗಿ ಇರುವ ಸಂವಿಧಾನದ ವಿಶೇಷ ಸ್ಥಾನಮಾನ ರದ್ದು, ತ್ರಿವಳಿ ತಲಾಕ್‌ ವಿರುದ್ಧದ ಕಾಯ್ದೆ ಸೇರಿ ಹಲವು ಮಹತ್ವದ ಕಾಯ್ದೆಗಳಿಗೆ ಅನುಮೋದನೆ ನೀಡಲಾಗಿದೆ ಎಂದರು.

ಸಂಸತ್‌ನ ಬಜೆಟ್‌ ಅಧಿವೇಶನದ ಬಗ್ಗೆ ಮಾತನಾಡಿದ ಅವರು, ಅಧಿವೇಶನದಲ್ಲಿ ಲೋಕಸಭೆ ಉತ್ಪಾದಕತೆ ಶೇ.148 ಮತ್ತು ರಾಜ್ಯಸಭೆಯ ಉತ್ಪಾದಕತೆ ಶೇ.137ರಷ್ಟಿತ್ತು ಎಂದು ಹೇಳಿದ್ದಾರೆ. 17 ನೇ ಲೋಕಸಭೆ ಹಾಗೂ ರಾಜ್ಯ ಸಭೆಯ ಸದಸ್ಯರು ಅತ್ಯಂತ ಅದೃಷ್ಟ ಶಾಲಿಗಳೆಂದು ನಾನು ಭಾವಿಸುತ್ತೇನೆ. ಏಕೆಂದರೆ ಈ ಸದಸ್ಯರು ಹಳೆಯ ಸಂಸತ್‌ ಕಟ್ಟಡದಿಂದಲೂ, ಹೊಸ ಸಂಸತ್‌ ಭವನದಿಂದಲೂ ಕಾರ್ಯನಿರ್ವಹಿಸಿದ್ದಾರೆ. ಮುಂದೆ ಬರುವವರು ಕೇವಲ ಹೊಸ ಸಂಸತ್‌ ಭವನದಲ್ಲಿದ್ದರೆ, ಹಳಬರು ಹಳೆಯ ಸಂಸತ್‌ ಭವನದಿಂದ ಮಾತ್ರ ಕಾರ್ಯನಿರ್ವಹಿಸಿದ್ದರು ಎಂದೂ ಹೇಳಿದ್ದಾರೆ.

ಕಲಾಪ ಮುಂದೂಡಿಕೆ
ಲೋಕಸಭೆ ಕಲಾಪಗಳನ್ನು ಶನಿವಾರ ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದೆ. ಲೋಕಸಭೆಯಲ್ಲಿ ಮಾತನಾಡಿದ ಸ್ಪೀಕರ್‌ ಓಂ ಬಿರ್ಲಾ ಆಡಳಿತ ಪಕ್ಷ ಹಾಗೂ ವಿಪಕ್ಷಗಳನ್ನು ಸಮಾನವಾಗಿ ಪರಿಗಣಿಸಿದ್ದೇನೆ, ಸದನದ ಘನತೆ ಕಾಪಾಡಲು ಕೆಲವು ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

Advertisement

ಹೊಸ ದಾಖಲೆ ಸೃಷ್ಟಿಸಿದ್ದೇವೆ: ಸಚಿವ ಜೋಶಿ
ಮೋದಿ ಅವರ ನಾಯಕತ್ವದಲ್ಲಿ ನಾವು ಹೊಸ ದಾಖಲೆಗಳನ್ನೇ ಸೃಷ್ಟಿಸಿದ್ದೇವೆ. 2014ರಿಂದ ಇಲ್ಲಿಯವರೆಗೆ ಬಳಕೆಯಲ್ಲಿಲ್ಲದ ಅನಗತ್ಯವಾದ 1562 ಕಾನೂನುಗಳನ್ನು ರದ್ದುಗೊಳಿಸಿದ್ದೇವೆ ಎಂದು ಜೋಷಿ ಹೇಳಿದ್ದಾರೆ. ಜತೆಗೆ ಸಂಸದೀಯ ವ್ಯವಹಾರಗಳ ಸಚಿವಾಲಯದ ಸಾಧನೆಗಳನ್ನು ಉಲ್ಲೇಖೀಸಿ, ಸಚಿವಾಲಯದ ಪ್ರಮುಖ ಸಾಧನೆಗಳಲ್ಲಿ ಒಂದು ರಾಷ್ಟ್ರೀಯ -ಇ-ವಿಧಾನ್‌ ಅಪ್ಲಿಕೇಶನ್‌ ಮೂಲಕ ಕಾಗದರಹಿತ ಶಾಸಕಾಂಗ ಖಾತರಿ ಪಡಿಸುವುದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ 22 ಶಾಸಕರೊಂದಿಗೆ ನಾವು ಒಪ್ಪಂದ ಮಾಡಿಕೊಂಡಿದ್ದೇವೆ ಮತ್ತು 12 ಸಚಿವಾಲಯಗಳು ಸಂಪೂರ್ಣವಾಗಿ ಕಾಗದ ರಹಿತವಾಗಿವೆ ಎಂದು ಹೇಳಿದ್ದಾರೆ.

5 ವರ್ಷಗಳ ಕಾಲ ಪ್ರಧಾನಿ ಅವರ ಸಮರ್ಥ ನಾಯಕತ್ವದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸುವ ಸುಯೋಗಕ್ಕಾಗಿ ಕೃತಜ್ಞನಾಗಿರುತ್ತೇನೆ. 5 ವರ್ಷದಲ್ಲಿ ಉಭಯ ಸದನಗಳ ವ್ಯವಹಾರಕ್ಕೆ ಕೊಡುಗೆ ನೀಡಿ 545 ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಪ್ರತಿಯೊಬ್ಬ ಸದಸ್ಯರು ಹಾಗೂ ರಾಜಕೀಯ ಪಕ್ಷಗಳಿಗೆ ಹೃತೂ³ರ್ವಕ ಧನ್ಯವಾದಗಳು
– ಪ್ರಹ್ಲಾದ ಜೋಶಿ

ಶೇ.148- ಲೋಕಸಭೆ ಉತ್ಪಾದಕತೆ
ಶೇ.137- ರಾಜ್ಯಸಭೆ ಉತ್ಪಾದಕತೆ
545 ಸಿಟ್ಟಿಂಗ್‌ಗಳು- 5 ವರ್ಷಗಳಲ್ಲಿ
221 – ಅಂಗೀಕಾರಗೊಂಡ ವಿಧೇಯಕಗಳು
1562- 5 ವರ್ಷಗಳಲ್ಲಿ ರದ್ದಾಗಿರುವ ಹಳೇ ಕಾಯ್ದೆಗಳು

Advertisement

Udayavani is now on Telegram. Click here to join our channel and stay updated with the latest news.

Next