ಚಿತ್ರದುರ್ಗ: ಅಂಗನವಾಡಿ ಮಕ್ಕಳು ಅಲ್ಲಿರುವ ಶೌಚಾಲಯ ಬಳಸದೆ ಹೊರಗೆ ಹೋಗುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ನಿಟ್ಟಿನಲ್ಲಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕಿಯರು ಅರಿವು ಮೂಡಿಸಬೇಕುಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಕ್ಕಳರಕ್ಷಣಾ ಘಟಕದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಿಶು ಅಭಿವೃದ್ಧಿ ಯೋಜನಾ ಧಿಕಾರಿಗಳು ಅಂಗನವಾಡಿಕೇಂದ್ರಗಳಿಗೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸಬೇಕು ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಲೋಕೇಶಪ್ಪ ಮಾತನಾಡಿ, 2020-21ನೇ ಸಾಲಿನ ವಿಶೇಷ ಪಾಲನೆಯೋಜನೆಯಡಿ ಎಚ್‌ಐವಿ, ಏಡ್ಸ್ ಸೋಂಕಿತ ಹಾಗೂ ಬಾಧಿತ ಅನಾಥ ಹಾಗೂ ಸಂಕಷ್ಟ ಸ್ಥಿತಿಯಲ್ಲಿರುವ ಮಕ್ಕಳಿಗಾಗಿ ವಿಶೇಷ ಪಾಲನಾ ಯೋಜನೆ ಜಾರಿಗೆಬಂದಿದೆ. ಈ ಯೋಜನೆಯಡಿ ಜಿಲ್ಲೆಯಲ್ಲಿ 419ಫಲಾನುಭವಿಗಳಿದ್ದು, ಮಾಸಿಕ 1 ಸಾವಿರದಂತೆಮೂರು ತಿಂಗಳಿಗೊಮ್ಮೆ ಅವರ ಖಾತೆಗೆ ಅನುದಾನಭರಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 17.8 ಲಕ್ಷ ರೂ.ಅನುದಾನ ಬಿಡುಗಡೆಯಾಗಿದ್ದು, 16,91,567 ರೂ. ಖರ್ಚು ಮಾಡಲಾಗಿದೆ. 2013-14ನೇ ಸಾಲಿನಿಂದಈವರೆಗೆ 1.63 ಕೋಟಿ ರೂ. ಅನುದಾನವನ್ನು ಮಕ್ಕಳಖಾತೆಗೆ ಜಮಾ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಅನಾಥ, ಏಕ ಪೋಷಕ, ವಿಧವೆಯರ ಮಕ್ಕಳು,ಕುಷ್ಠರೋಗ, ಎಚ್‌ಐವಿ ಸೋಂಕಿತ ಪೋಷಕರಮಕ್ಕಳು, ಕುಟುಂಬಕ್ಕೆ ಆಧಾರವಾಗಿದ್ದ ಪೋಷಕರು ಬಂಧಿಖಾನೆಯಲ್ಲಿದ್ದರೆ ಅಂತಹ ಕುಟುಂಬದ ಮಕ್ಕಳಿಗೆಪ್ರತಿ ಮಗುವಿಗೆ ಮಾಸಿಕ 1 ಸಾವಿರದಂತೆ ಕುಟುಂಬದಗರಿಷ್ಠ 2 ಮಕ್ಕಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಯೋಜನೆಯಡಿ 140 ಫಲಾನುಭವಿಗಳಿದ್ದು, ರೂ.6.59 ಲಕ್ಷ ಅನುದಾನ ಬಿಡುಗಡೆಯಾಗಿದ್ದು,84 ಫಲಾನುಭವಿಗಳಿಗೆ ಮಾತ್ರ ಅನುದಾನ ಖರ್ಚು ಮಾಡಲಾಗಿದೆ ಎಂದರು.
ಸರ್ಕಾರಿ ಬಾಲಕರ ಮಂದಿರದಲ್ಲಿ ಒಟ್ಟು 42ಮಕ್ಕಳಿದ್ದಾರೆ. ಈ ಮಕ್ಕಳಿಗೆ 3ನೇ ತ್ತೈಮಾಸಿಕದವರೆಗೆ32.82 ಲಕ್ಷ ರೂ.ಅನುದಾನ ಬಂದಿದ್ದು, 19.17 ಲಕ್ಷರೂ. ಖರ್ಚು ಮಾಡಲಾಗಿದೆ. ಸರ್ಕಾರಿ ಬಾಲಕಿಯರಬಾಲಮಂದಿರಲ್ಲಿ ಒಟ್ಟು 25 ಮಕ್ಕಳಿದ್ದು, 27.96ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, 17.78ಲಕ್ಷ ರೂ. ಖರ್ಚು ಮಾಡಲಾಗಿದೆ. ಸರ್ಕಾರಿವೀಕ್ಷಣಾಲಯದಲ್ಲಿ ಒಟ್ಟು 7 ಮಕ್ಕಳಿದ್ದು, 14.51 ಲಕ್ಷರೂ. ಅನುದಾನ ಬಿಡುಗಡೆಯಾಗಿದ್ದು, 12.38 ಲಕ್ಷರೂ. ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.6 ವರ್ಷದೊಳಗಿನ ನಿರ್ಲಕ್ಷéಕ್ಕೊಳಗಾದ ಅನಾಥ,ನಿರ್ಗತಿಕ, ತ್ಯಜಿಸಲ್ಪಟ್ಟ ಮಕ್ಕಳಿಗೆ ಕುಟುಂಬದವಾತಾವರಣವನ್ನು ಕಲ್ಪಿಸಿ ಅವರಿಗೆ ಪ್ರೀತಿ, ವಾತ್ಸಲ್ಯ,ಪೋಷಣೆ ಮತ್ತು ರಕ್ಷಣೆಯನ್ನು ಒದಗಿಸುವಸಲುವಾಗಿ ಜಿಲ್ಲೆಯಲ್ಲಿ ನಗರದ ಮುರುಘಾ ರಾಜೇಂದ್ರಬೃಹನ್ಮಠದಲ್ಲಿ ಮಡಿಲು ದತ್ತು ಕೇಂದ್ರ ತೆರೆಯಲಾಗಿದೆ.ಏಪ್ರಿಲ್‌ನಿಂದ ಡಿಸೆಂಬರ್ ವರೆಗೆ ದತ್ತು ಸಂಸ್ಥೆಗೆ ಒಟ್ಟು16 ಮಕ್ಕಳು ದಾಖಲಾಗಿದ್ದು, ಇದರಲ್ಲಿ 4 ಮಕ್ಕಳುರಕ್ಷಣೆ ಮತು ಪೋಷಣೆಯಲಿದ್ದಾರೆ. 12 ಮಕ್ಕಳು ದತ್ತು ಪ್ರಕ್ರಿಯೆಗೆ ಒಳಪಟ್ಟಿದ್ದಾರೆ ಎಂದರು.
ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ, ಜಿಪಂ ಉಪಕಾರ್ಯದರ್ಶಿ ಮಹಮ್ಮದ್‌ಮುಬೀನ್, ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಕೆ. ಗಿರೀಶ್, ಡಿಎಚ್‌ಒ ಡಾ| ಪಾಲಾಕ್ಷ, ನ್ಯಾಯವಾದಿ ಡಿ.ಕೆ. ಶೀಲಾ ಮತ್ತಿತರೆ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
2020ರ ಏಪ್ರಿಲ್‌ನಿಂದ ಡಿಸೆಂಬರ್ ಅಂತ್ಯದವರೆಗೆ ಪೋಕ್ಸೋ ಕಾಯ್ದೆಯಡಿ ಜಿಲ್ಲೆಯಲ್ಲಿ 42 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 40 ಪ್ರಕರಣಗಳುಖುಲಾಸೆಯಾಗಿದ್ದು, 2 ಪ್ರಕರಣಗಳು ಬಾಕಿ ಇವೆ. ಮಕ್ಕಳ ನಿಧಿ (ಅಭಯ ನಿ ಧಿ) ಯಿಂದ 11 ಮಕ್ಕಳಿಗೆ 65 ಸಾವಿರ ರೂ. ಪರಿಹಾರ ವಿತರಿಸಲಾಗಿದೆ.
-ಲೋಕೇಶಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ