ಮಾಗಡಿ: ದೇಶದ ಅಭಿವೃದ್ಧಿಯಲ್ಲಿಯುವ ಜನತೆಯ ಪಾತ್ರ ಮುಖ್ಯವಾಗಿದ್ದು, ಆರೋಗ್ಯವಂತ ಯುವಶಕ್ತಿ ನಿರ್ಮಾಣವಾಗಬೇಕಾದರೆ, ಗರ್ಭಿಣಿ, ಬಾಣಂತಿ ಮತ್ತು ಮಕ್ಕಳ ಆರೋಗ್ಯ ಮುಖ್ಯ ಎಂದು ತಾಪಂ ಅಧ್ಯಕ್ಷ ನಾರಾಯಣಪ್ಪ ತಿಳಿಸಿದರು.
ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಡ್ಯ ಇಫ್ರೋ ಆಯೋಜಿಸಿದ್ದ ಪೋಷಣಾ ಅಭಿಯಾನ 2020 ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೌಷ್ಟಿಕ ಆಹಾರದ ಅಗತ್ಯತೆ ತಿಳಿಸಲು ಕೇಂದ್ರ ಸರ್ಕಾರ ಸೆಪ್ಟೆಂಬರ್ ತಿಂಗಳನ್ನು ರಾಷ್ಟ್ರೀಯ ಪೋಷಣಾ ಮಾಸ ಎಂದು ಆಚರಿಸುತ್ತಿದೆ. ಅಪೌಷ್ಟಿಕತೆಯಲ್ಲಿ ಕುಪೋಷಣೆ ಮತ್ತು ಸ್ಥೂಲಕಾಯತೆಯು ಅವಳಿ ಸಮಸ್ಯೆಯಾಗಿದ್ದು, ಸಾರ್ವಜನಿಕರಿಗೆ ಆರೋಗ್ಯಕರ ಆಹಾರದ ಬಗ್ಗೆ ಸಂವೇದನಾಶೀಲಗೊಳಿಸುವುದು ಮತ್ತು ಅವುಗಳನ್ನು ಪರಿಹರಿಸುವುದು ಮತ್ತು 2022 ರ ಒಳಗೆ ಅಪೌಷ್ಟಿಕತೆ ಮುಕ್ತ ಭಾರತದ ನಿರ್ಮಾಣ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ರೈತ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಹಸಿವು ಸೂಚ್ಯಂಕದಲ್ಲಿ ಭಾರತಕ್ಕೆ 102ನೇ ಸ್ಥಾನ: ಕೇಂದ್ರದ ವಿಜಾnನಿ ಲತಾ ಆರ್.ಕುಲಕರ್ಣಿ ಮಾತನಾಡಿ, ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 102ನೇ ಸ್ಥಾನದಲ್ಲಿದ್ದು, 5 ವರ್ಷದೊಳಗಿನ ಶೇ.35% ರಷ್ಟು ಮಕ್ಕಳು ಕಡಿಮೆ ಎತ್ತರದವರಾಗಿದ್ದು, ದೀರ್ಘಕಾಲದ ಅಪೌಷ್ಟಿಕತೆಗೆ ತುತ್ತಾಗಿದ್ದು, ಅಪೌಷ್ಟಿಕತೆ ನಿರ್ಮೂಲನೆಗಾಗಿ ಸಮತೋಲನ ಆಹಾರದಅವಶ್ಯಕತೆಇದೆ ಎಂದರು.
ಕೇಂದ್ರದ ವಿಜಾnನಿಯಾದ ದಿನೇಶ್, ಎಸ್.ಎಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಶಾಂತಮ್ಮ, ಕೇಂದ್ರದ ಮುಖ್ಯಸ್ಥೆ ಸವಿತಾ ಎಸ್.ಎಂ, ವಿಜ್ಞಾನಿ ವಿಕಾಸ ಎ.ಎನ್, ಇಪ್ರೋ ಕ್ಷೇತ್ರ ಸಹಾಯಕ ಭಗತ್ ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ಆರೋಗ್ಯ ತಪಾಸಣಾ ಶಿಬಿರ ಮತ್ತು ವಿವಿಧ ಪೌಷ್ಟಿಕಾಂಶ ಆಹಾರಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಹಾಗೂ ಪೌಷ್ಟಿಕ ಕೈತೋಟದ ಕಿರುಚಿತ್ರ ಬಿಡುಗಡೆ ಮಾಡಲಾಯಿತು. ಇಫೋ› ಸಂಸ್ಥೆಯಿಂದ ತರಕಾರಿ ಬೀಜಗಳ ಕಿಟ್ ಹಾಗೂ ಕೆವಿಕೆಯಿಂದ ಹಣ್ಣು, ತರಕಾರಿಗಳ ಸಸಿ ವಿತರಿಸಲಾಯಿತು.
ವಿಜ್ಞಾನಿಗಳಾದ ಪ್ರೀತು ಡಿ.ಸಿ, ರಾಜೇಂದ್ರ ಪ್ರಸಾದ್ ಬಿ.ಎಸ್,ಕೇಂದ್ರದ ವಿಸ್ತರಣಾ ವಿಜ್ಞಾನಿ ಚೈತ್ರಶ್ರೀ, ಹೆಚ್.ಎಂ, ಮುಖಂಡರಾದ ಕುದೂರಿನ ಚಂದ್ರ ಶೇಖರ್, ಚಕ್ರಬಾವಿಯ ಶ್ರೀನಿವಾಸ, ಅಂಗನವಾಡಿ ಕಾರ್ಯ ಕರ್ತೆಯರು, ರೈತ ಮಹಿಳೆಯರು ಹಾಗೂ ಕೇಂದ್ರದ ಸಿಬ್ಬಂದಿ ಭಾಗವಹಿಸಿದ್ದರು.