Advertisement
ಭಾರತದ ಲಸಿಕೆ ಉತ್ಪಾದನೆ ಮತ್ತು ವಿತರಣಾ ಗುರಿಗಳ ವಿವರಗಳನ್ನು ಕೇಂದ್ರ ಸರ್ಕಾರ ಪಟ್ಟಿ ಮಾಡಿದ್ದು, ‘ಕೋವಿಡ್ -19 ಪಬ್ಲಿಕ್ ಹೆಲ್ತ್ ರೆಸ್ಪಾನ್ಸ್ ಪ್ರೊ-ಆಕ್ಟಿವ್, ಪ್ರಿ ಎಂಪ್ಟಿವ್ ಮತ್ತು ಗ್ರೇಡೆಡ್ ರೆಸ್ಪಾನ್ಸ್ ಗೈಡೆಡ್ ಎಪಿಡೆಮಿಯಾಲಾಜಿಕಲ್ ಮತ್ತು ಸೈಂಟಿಫಿಕ್ ರಿಗರ್’ ಎಂಬ ಶೀರ್ಷಿಕೆಯ ವರದಿಯು ಪ್ರಧಾನಿ ಕಚೇರಿಯಿಂದ ಸಂಸದರಿಗೆ ನೀಡಲಾದ ಭಾರತದ ಲಸಿಕೆ ಉತ್ಪಾದನೆಯ ಗುರಿಗಳ ವಿವರಗಳನ್ನು ಒಳಗೊಂಡಿದೆ.
Related Articles
Advertisement
ಕೊವಾಕ್ಸಿನ್ – 3.15 ಕೋಟಿ, ಕೋವಿಶೀಲ್ಡ್ – 23 ಕೋಟಿ, ಒಟ್ಟು ಡೋಸ್ 26.15 ಕೋಟಿ ಲಭ್ಯವಿರಲಿದೆ ಎಂದು ಕೇಂದ್ರ ಹೇಳಿದೆ.
ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್:
ಕೊವಾಕ್ಸಿನ್ – 5.25 ಕೋಟಿ, ಕೋವಿಶೀಲ್ಡ್ – 23 ಕೋಟಿ, ಒಟ್ಟು ಡೋಸ್: 28.25 ಕೋಟಿ ದೇಶದಾದ್ಯಂತ ಲಭ್ಯವಿರಲಿದೆ.
ಆಗಸ್ಟ್ ನಿಂದ ಒಟ್ಟು ಕೋವಿಡ್ ವ್ಯಾಕ್ಸಿನ್ ಡೋಸೇಜ್ ಗಳು:
ಕೊವಾಕ್ಸಿನ್ – 21.55 ಕೋಟಿ, ಕೋವಿಶೀಲ್ಡ್ – 115 ಕೋಟಿ, ಒಟ್ಟು ಡೋಸ್ – 136.55 ಕೋಟಿ ಲಸಿಕಾ ಅಭಿಯಾನದಲ್ಲಿ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಆಗಸ್ಟ್ 2021 ರಿಂದ ಡಿಸೆಂಬರ್ ವರೆಗೆ ಕೇಂದ್ರವು ನೀಡಿದ ಮುಂಗಡ ಆದೇಶದ ಪ್ರಕಾರ, ಪ್ರತಿ ಡೋಸ್ ಗೆ 215.25 ರಂತೆ 8071.87 ಕೋಟಿ ವೆಚ್ಚದಲ್ಲಿ ಲಸಿಕೆಗಳನ್ನು ಖರೀದಿಸಲಾಗುತ್ತದೆ.
ಭಾರತ್ ಬಯೋಟೆಕ್‌ನಿಂದ 28.5 ಕೋಟಿ ಕೋವಾಕ್ಸಿನ್ ಡೋಸ್‌ಗಳನ್ನು ಸರ್ಕಾರವು ಪ್ರತಿ ಡೋಸ್ ಗೆ ರೂ 225.75 ರಂತೆ 6,433.87 ಕೋಟಿ ವೆಚ್ಚದಲ್ಲಿ ಖರೀದಿಸುತ್ತದೆ. ಒಟ್ಟಾರೆಯಾಗಿ, ಒಟ್ಟು 88 ಕೋಟಿ ಲಸಿಕೆ ಪ್ರಮಾಣಗಳನ್ನು ಉತ್ಪಾದಿಸಲಾಗುವುದು ಮತ್ತು ಕೇಂದ್ರವು 66 ಕೋಟಿ ಡೋಸ್ ಗಳನ್ನು ಖರೀದಿಸಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ : ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರಾಜೀನಾಮೆಗೆ ರೆವಲ್ಯೂಶನ್ ಗೋವನ್ಸ್ ಒತ್ತಾಯ..!