Advertisement
ಕರ್ನಾಟಕಕ್ಕೆ 94,47,900 ಡೋಸ್ ನೀಡಲಾಗಿದೆ. ಈ ಪೈಕಿ, 91,01,215 ಡೋಸ್ ಫಲಾನುಭವಿಗಳಿಗೆ ನೀಡಿದ್ದು, ಇದೀಗ ರಾಜ್ಯದಲ್ಲಿ 3,46,685 ಡೋಸ್ ಲಭ್ಯವಿದೆ. ಇದಲ್ಲದೆ ರಾಜ್ಯಕ್ಕೆ 4 ಲಕ್ಷ ಡೋಸ್ ಹೆಚ್ಚುವರಿಯಾಗಿ ಲಸಿಕೆ ನೀಡುವುದಾಗಿ ಸಚಿವಾಲಯ ಹೇಳಿದೆ.
Related Articles
Advertisement
ಪ್ರಸ್ತುತ ಕರ್ನಾಟಕದಲ್ಲಿ ಬುಧವಾರದ ಅಂತ್ಯಕ್ಕೆ ನಾಲ್ಕು ಲಕ್ಷ ಡೋಸ್‌ನಷ್ಟು ಲಸಿಕೆ ಇದೆ. ರಾಜ್ಯದಲ್ಲಿ ಈವರೆಗೂ 80 ಲಕ್ಷಕ್ಕೂ ಅಧಿಕ ಮಂದಿ ಕೊರೊನಾ ಲಸಿಕೆ ಪಡೆದಿದ್ದಾರೆ. ಈ ಪೈಕಿ 38 ಲಕ್ಷ ಮಂದಿ ಎರಡನೇ ಡೋಸ್ ಪೂರ್ಣಗೊಳಿಸಿದ್ದಾರೆ.
ಲಸಿಕೆ ಪಡೆದವರ ಪೈಕಿ 45 ವರ್ಷ ಮೇಲ್ಪಟ್ಟ ಸಾರ್ವಜನಿಕರು 68 ಲಕ್ಷ ಮಂದಿ ಇದ್ದಾರೆ. ಸೂಕ್ತ ರೀತಿಯಲ್ಲಿ ಲಸಿಕೆ ಹಂಚಿಕ ಸಾಧ್ಯವಾಗದೆ ಹಲವು ಜಿಲ್ಲೆಗಳಲ್ಲಿ ಲಸಿಕೆ ಪಡೆಯಲು ಬರುವ 45 ವರ್ಷ ಮೇಲ್ಪಟ್ಟವರನ್ನು “ಲಸಿಕೆ ಖಾಲಿಯಾಗಿದೆ, ನಾಳೆ ಬನ್ನಿ’ ಎಂದು ವಾಪಸ್ ಕಳುಹಿಸಲಾಗುತ್ತಿದೆ ಎಂಬ ದೂರು ಕೇಳಿಬಂದಿದೆ.
ಕರಾವಳಿಯಲ್ಲೂ ಕಷ್ಟ: ಮೇ 1ರಿಂದ ದ.ಕ. ಹಾಗೂ ಉಡುಪಿಯಲ್ಲಿ 18ಕ್ಕಿಂತ ಮೇಲ್ಪಟ್ಟ ವಯೋ ಮಾನದವರಿಗೆ ಲಸಿಕೆ ಲಭ್ಯವಾಗುವುದು ಅನುಮಾನ. ದ.ಕ. ಜಿಲ್ಲೆಯಲ್ಲಿ ಲಸಿಕೆ ಲಭ್ಯತೆ ಆಧರಿಸಿ ಮೇ 10ರ ಬಳಿಕ ನೀಡುವುದಾಗಿ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ ತಿಳಿಸಿದ್ದರೆ, ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸಹ, ಸರಕಾರ ಸೂಚಿಸಿದ ದಿನಾಂಕದಂದು ಲಸಿಕೆ ನೀಡುವುದಾಗಿ ತಿಳಿಸಿದ್ದಾರೆ.
ಉಭಯ ಜಿಲ್ಲೆಗಳಲ್ಲಿ ಒಂದು ವಾರದಿಂದ ಲಸಿಕೆ ಪಡೆಯುವವರ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಹಾಗಾಗಿ ದ.ಕ. ಜಿಲ್ಲೆಯಲ್ಲಿ ಸಾಕಷ್ಟು ಲಸಿಕೆ ಸಿಗುತ್ತಿಲ್ಲ. ಕೆಲವು ಕೇಂದ್ರಗಳಿಗೆ ನಿಗದಿತ ಸಂಖ್ಯೆಗಿಂತ ಹೆಚ್ಚು ಜನರು ಬಂದು ವಾಪಸಾಗುತ್ತಿದ್ದಾರೆ. ಹಾಗಾಗಿ ಕೆಲವು ದಿನ ಮೊದಲನೇ ಡೋಸ್ ಲಸಿಕೆ ಸಿಗದು. ಎರಡನೇ ಡೋಸ್‌ಗೆ ಸಮಸ್ಯೆ ಇಲ್ಲ. ಆದರೆ ಉಡುಪಿ ಜಿಲ್ಲೆಯಲ್ಲಿ ಸಮಸ್ಯೆ ಇಲ್ಲ.