Advertisement

ಕೋವಿಡ್‌ ಚಿಕಿತ್ಸೆಗೆ ಬಳಕೆಯಾಗಲಿ ಖಾಸಗಿ ವೈದ್ಯ ಪಡೆ

12:15 AM May 02, 2021 | Team Udayavani |

ಬೆಂಗಳೂರು: ರಾಜ್ಯಾದ್ಯಂತ 70 ಸಾವಿರಕ್ಕೂ ಹೆಚ್ಚು ಖಾಸಗಿ ವೈದ್ಯರಿದ್ದು, ಅಗತ್ಯವೆನಿಸಿದರೆ ಮುಂದೆ ಕೋವಿಡ್‌ ಪೀಡಿತರ ಚಿಕಿತ್ಸೆಗೆ ಇವರನ್ನು ಬಳಸಿಕೊಳ್ಳುವ ಬಗ್ಗೆ ಚರ್ಚೆ ಆರಂಭವಾಗಿದೆ.
ಸೋಂಕಿನ ಎರಡನೇ ಅಲೆ ಮೇ ತಿಂಗಳಲ್ಲಿ ಇನ್ನಷ್ಟು ಉಲ್ಬಣಿಸುವ ನಿರೀಕ್ಷೆಯಿದ್ದು, ನಿರ್ವಹಣೆಗೆ ವೈದ್ಯರು, ಅರೆ ವೈದ್ಯಕೀಯ ಸಿಬಂದಿಯನ್ನು ಹೊಂದಿಸಿಕೊಳ್ಳುವ ಸವಾಲು ಎದುರಾಗಿದೆ. ಕೋವಿಡ್‌ ಹರಡುವಿಕೆಯ ತೀವ್ರತೆಯನ್ನು ಆಧರಿಸಿ ವೈದ್ಯರನ್ನು ಹೊಂದಿಸಿಕೊಳ್ಳುವುದು ನಿರ್ಣಾಯಕ. ಐಎಂಎಯಲ್ಲಿ ನೋಂದಾಯಿತ ಮತ್ತು ನೋಂದಣಿಯಾಗದ 70 ಸಾವಿರಕ್ಕೂ ಹೆಚ್ಚು ವೈದ್ಯರು ರಾಜ್ಯದಲ್ಲಿದ್ದಾರೆ. ಅಗತ್ಯಬಿದ್ದರೆ ಅವರನ್ನೂ ಕೋವಿಡ್‌ ಚಿಕಿತ್ಸೆಗೆ ತೊಡಗಿಸಿಕೊಳ್ಳಬೇಕು ಎಂಬ ಚರ್ಚೆಯಾಗುತ್ತಿದೆ.

Advertisement

ಖಾಸಗಿಯಲ್ಲೂಶೇ. 40ರಷ್ಟು ಕೊರತೆ
ಸದ್ಯ ಖಾಸಗಿ ಆಸ್ಪತ್ರೆಗಳಲ್ಲಿಯೂ ಶೇ. 40ರಷ್ಟು ವೈದ್ಯರು, ಅರೆವೈದ್ಯಕೀಯ ಸಿಬಂದಿ ಕೊರತೆ ಇದೆ. ಹೀಗಾಗಿ ಕೋವಿಡ್‌ ನಿಯಂತ್ರಣಕ್ಕೆ ಸರಕಾರ ಅಗತ್ಯ ಸಂಖ್ಯೆಯ ವೈದ್ಯರು, ಸಿಬಂದಿಯನ್ನು ಹೊಂದಿಕೊಳ್ಳಬೇಕು ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಂ ಸಂಸ್ಥೆಗಳ ಒಕ್ಕೂಟ (ಫ‌ನಾ)ದ ಅಧ್ಯಕ್ಷ ಡಾ| ಎಚ್‌.ಎಂ. ಪ್ರಸನ್ನ ಹೇಳಿದ್ದಾರೆ.

ಕೋವಿಡ್‌ 2ನೇ ಅಲೆ ಚಿಕಿತ್ಸೆ ಮತ್ತು ನಿಯಂತ್ರಣಕ್ಕಾಗಿ ಕ್ಲಿನಿಕ್‌, ಖಾಸಗಿ ಸಣ್ಣ ಪುಟ್ಟ ಆಸ್ಪತ್ರೆಗಳ ವೈದ್ಯರನ್ನು ಬಳಸಿಕೊಳ್ಳಬಹುದು. ಕೋವಿಡ್‌ಗೆ ಚಿಕಿತ್ಸೆ, ನಿಯಂತ್ರಣ, ಇತರ ಸೇವೆಗಳಿಗೆ ಅರ್ಹರನ್ನು ಗರಿಷ್ಠ ಪ್ರಮಾಣದಲ್ಲಿ ಬಳಸುವುದು ಸೂಕ್ತ. – ಡಾ| ಎಸ್‌. ಶ್ರೀನಿವಾಸ್‌, ಐಎಂಎ ಮಕ್ಕಳ ಆರೋಗ್ಯ ಸ್ಥಾಯಿ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next