Advertisement

ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಮಾತ್ರ ಕೋವಿಡ್ ಪರೀಕ್ಷೆ

05:22 AM Jun 06, 2020 | Lakshmi GovindaRaj |

ಬೆಂಗಳೂರು: ಸೋಂಕು ಪರೀಕ್ಷೆ ವರದಿಗೆ ಸಂಬಂಧಿಸಿದಂತೆ ಉಂಟಾಗುತ್ತಿರುವ ಗೊಂದಲ ದಿಂದ ಎಚ್ಚೆತ್ತ ಬಿಬಿಎಂಪಿ, ಇನ್ಮುಂದೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನಿಂದ (ಐಸಿಎಂಆರ್‌) ಮಾನ್ಯತೆ ಪಡೆದ ಪ್ರಯೋಗಾಲಯಗಳಿಗೆ ಮಾತ್ರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲು ನಿರ್ಧರಿಸಿದೆ.

Advertisement

ಈಚೆಗೆ ಎರಡು-ಮೂರು ಪ್ರಕರಣಗಳಲ್ಲಿ ಮೊದಲು “ಪಾಸಿಟಿವ್‌’ ಎಂದು ಪ್ರಕಟಿಸಲಾಗಿತ್ತು. ತದನಂತರ ಅದು “ನೆಗೆಟಿವ್‌’ ಆಗಿರುವುದು  ದೃಢಪಟ್ಟಿತ್ತು. ಖಾಸಗಿ ಪ್ರಯೋಗಾಲಯಗಳಿಂದ ಈ ಎಡವಟ್ಟು ಆಗಿತ್ತು. ಈ ಹಿ°ನೆಲೆಯಲ್ಲಿ ಐಸಿಎಂಆರ್‌ ಮಾನ್ಯತೆ ಪಡೆದ ಪ್ರಯೋ  ಗಾಲಯಗಳಿಗಷ್ಟೇ ವರದಿ ನೀಡಬೇಕು. ಹಾಗೂ ಆ ವರದಿಯನ್ನೇ ಆಸ್ಪತ್ರೆಗಳೂ ಅನುಸರಿಸಬೇಕು  ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ತಿಳಿಸಿದ್ದಾರೆ.

ಮಾನ್ಯತೆ ಪಡೆಯದೆ ಪರೀಕ್ಷೆ?: ಐಸಿಎಂಆರ್‌ ಮಾನ್ಯತೆ ಪಡೆಯದೆ, ಕೆಲವು ಖಾಸಗಿ ಪ್ರಯೋಗಾಲಯಗಳು ಕೋವಿಡ್‌ - 19 ಪರೀಕ್ಷೆ ನಡೆಸುತ್ತಿರುವುದು ತಿಳಿದುಬಂದಿದೆ. ಅಂತಹವರ ವಿರುದ ಸರ್ಕಾರ ಕ್ರಮ ಕೈಗೊಳ್ಳಲಿದೆ. ಖಾಸಗಿ ಪ್ರಯೋಗಾಲಯಗಳಿಂದ ಬಂದ ಪರೀಕ್ಷೆ ಫ‌ಲಿತಾಂಶದ ಬಗ್ಗೆ ಅನುಮಾನ ವ್ಯಕ್ತವಾದರೆ, ಸರ್ಕಾರಿ ಪ್ರಯೋಗಾಲಯಗಳಲ್ಲಿ ಮರುಪರೀಕ್ಷೆ ನಡೆಸಬಹುದು ಎಂದರು. “ಎರಡು-ಮೂರು ಪ್ರಕರಣಗಳ ಪರೀಕ್ಷಾ ಫ‌ಲಿತಾಂಶದಲ್ಲಿ ಈಚೆಗೆ  ವ್ಯತ್ಯಾಸ ಕಂಡುಬಂದಿದೆ.

ಕೋವಿಡ್‌-19ಗೆ ಸಂಬಂಧಿಸಿದಂತೆ ಪರೀಕ್ಷೆ ನಡೆ ಸಲು ಐಸಿಎಮ್‌ಆರ್‌ ಮಾನ್ಯತೆ ಪಡೆದ ಪ್ರಯೋಗಾಲಯಗಳು ಇಲ್ಲದೆ ಇದ್ದರೆ, ಅದನ್ನು ಪರೀಕ್ಷಾ ವರದಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಖಾಸಗಿ  ಲ್ಯಾಬ್‌ನಲ್ಲಿ ಕೋವಿಡ್‌ ಪಾಸಿಟಿವ್‌ ಬಂದರೆ, ಮತ್ತೂಮ್ಮೆ ಖಚಿತಪಡಿಸಿಕೊಳ್ಳಲು ಸರ್ಕಾರಿ ಲ್ಯಾಬ್‌ಗ ಕಳಿಸಿಕೊಡುತ್ತೇವೆ. ಇಲ್ಲಿ ನೆಗೆಟಿವ್‌ ಬಂದರೆ ನೆಗೆಟಿವ್‌ ಅಂತ ನಿರ್ಧಾರ ಮಾಡಲಾಗುವುದು’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next