Advertisement

ಅರಮನೆಗೆ ಬರುವ ಪ್ರವಾಸಿಗರಿಗೆ ಕೋವಿಡ್‌ ಟೆಸ್ಟ್‌

04:18 PM Oct 30, 2020 | Suhan S |

ಮೈಸೂರು: ಮೈಸೂರು ಅರಮನೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಕೋವಿಡ್‌ ಟೆಸ್ಟ್‌ ಕಡ್ಡಾಯವಾಗಿದ್ದು, ಅರಮನೆ ಆವರಣದಲ್ಲೇ ರ್ಯಾಪಿಡ್‌ ಟೆಸ್ಟ್‌ ಮಾಡಿ,ವರದಿ ನೆಗೆಟಿವ್‌ ಬಂದ ಬಳಿಕ ಪ್ರವೇಶಕ್ಕೆ ಅನುಮತಿ ನೀಡಲು ಅರಮನೆ ಮಂಡಳಿ ನಿರ್ಣಯಿಸಿದೆ.

Advertisement

ಪ್ರತಿದಿನ ಅರಮನೆ ವೀಕ್ಷಿಸಲು ದೇಶ ವಿದೇಶದ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ ಅವರನ್ನು ಇಷ್ಟು ದಿನ ಥರ್ಮಲ್‌ ಸ್ಕ್ಯಾನ್‌ ಮಾಡಿ ಒಳ ಬಿಡಲಾಗುತ್ತಿತ್ತು. ಆದರೆ, ಇನ್ನು ಮುಂದೆಅರಮನೆಗೆ ಬರುವವರ ಬಳಿ ಕೊರೊನಾ ನೆಗೆಟಿವ್‌ವರದಿಯೂ ಇರಬೇಕು. ಬುಧವಾರ ಅರಮನೆಗೆ ಭೇಟಿ ನೀಡಿದ್ದ 6 ಮಂದಿ ಪ್ರವಾಸಿಗರಿಗೆ ಕೋವಿಡ್‌ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅರಮನೆಮಂಡಳಿ ಈ ನಿರ್ಧಾರ ಕೈಗೊಂಡಿದ್ದು, ಗುರುವಾರದಿಂದ ಜಾರಿಯಾಗಲಿದೆ.

ಅರಮನೆ ಸಿಬ್ಬಂದಿ ಹಾಗೂ ಇತರೆ ಪ್ರವಾಸಿಗರ ಆರೋಗ್ಯದ ದೃಷ್ಟಿಯಿಂದ ಹೊಸ ನಿಯಮ ಜಾರಿಗೊಳಿಸಿದ್ದು, ಅರಮನೆ ಪ್ರವೇಶ ದ್ವಾರದಲ್ಲೇ ನೆಗೆಟಿವ್‌ ವರದಿ ಪ್ರದರ್ಶಿಸಿದರೆ ಮಾತ್ರ ಒಳಬಿಡಲಾಗುತ್ತದೆ.

30 ನಿಮಿಷಗಳಲ್ಲೇ ವರದಿ: ಈ ಕುರಿತು ಮಾಹಿತಿ ನೀಡಿರುವ ಕೋವಿಡ್‌ ಟೆಸ್ಟ್‌ನ ಮುಖ್ಯಸ್ಥ ಅಜಯ್‌ ಕುಮಾರ್‌, ಅರಮನೆ ವೀಕ್ಷಿಸಲು ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬೇರೆ ಬೇರೆ ಕಡೆಯಿಂದ ಆಗಮಿಸುತ್ತಾರೆ. ಅವರಿಗೆ ಕೊರೊನಾ ಸೋಂಕು ತಗುಲಿರುವ ಸಾಧ್ಯತೆ ಇರುತ್ತದೆ. ಹಾಗಾಗಿ ಟೆಸ್ಟ್‌ ಮಾಡುತ್ತಿದ್ದೇವೆ. ರ್ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್‌ ಮಾಡಲಾಗುತ್ತಿದ್ದು, 30 ನಿಮಿಷಗಳಲ್ಲೇ ವರದಿ ದೊರೆಯುತ್ತದೆ. ಪಾಸಿಟಿವ್‌ ಬಂದರೆ ಅವರಿಗೆ ರಿಪೋರ್ಟ್‌ ಕೊಟ್ಟು ವಾಪಸ್‌ ಕಳುಹಿಸುತ್ತೇವೆ. ಪರೀಕ್ಷೆ ಮಾಡಿಸಿಕೊಳ್ಳಲು ಬೆಳಗ್ಗೆ 6.30 ರಿಂದ ಸಂಜೆ 5ರವರೆಗೂ ಅವಕಾಶವಿದೆ ಎಂದು ತಿಳಿಸಿದರು.

ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್‌. ಸುಬ್ರಹ್ಮಣ್ಯ ಮಾತನಾಡಿ, ಅರಮನೆಗೆ ಭೇಟಿ ನೀಡುವ ಪ್ರವಾಸಿಗರ ಕೋವಿಡ್‌ ವರದಿ ಶೀಘ್ರದಲ್ಲೇದೊರೆಯುವ ಉದ್ದೇಶದಿಂದ ಹಾಗೂ ನಮ್ಮ ಸಿಬ್ಬಂದಿಯ ಆರೋಗ್ಯದ ದೃಷ್ಟಿಯಿಂದ ಅರಮನೆಯ ಟಿಕೆಟ್‌ ಕೌಂಟರ್‌ ಬಳಿ ಕೋವಿಡ್‌ಪರೀಕ್ಷೆ ಮಾಡಲು ಹೆಚ್ಚು ಸಿಬ್ಬಂದಿಯನ್ನು ನೇಮಿಸುವಂತೆ ಆರೋಗ್ಯ ಇಲಾಖೆಗೆ ಮನವಿ ಮಾಡಿದ್ದೇವೆ. ಇಲ್ಲಿಯವರೆಗೆ 7 ಮಂದಿ ಇರುವಮೂರು ತಂಡಗಳು ರ್ಯಾಪಿಡ್‌ ಟೆಸ್ಟ್‌ ಮಾಡುತ್ತಿವೆ. ಬುಧವಾರ ಹೆಚ್ಚು ಪ್ರವಾಸಿಗರು ಆಗಮಿಸಿದ್ದರಿಂದ ಜನದಟ್ಟಣೆ ಉಂಟಾಗಿತ್ತು. ಅಲ್ಲದೆ ಅರಮನೆ ಪ್ರವೇಶಿಸಲು ಕೋವಿಡ್‌ ಪರೀಕ್ಷೆ ಕಡ್ಡಾಯ ಮಾಡಿರುವುದರಿಂದ ಪರೀಕ್ಷೆ ಮಾಡಿಸಿಕೊಳ್ಳಲು ಗಂಟೆ ಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಇದರಿಂದಾಗಿ ಜನದಟ್ಟಣೆ ಹೆಚ್ಚಾಗುತ್ತದೆ. ಹೀಗಾಗಿ ಹೆಚ್ಚು ಸಿಬ್ಬಂದಿಯನ್ನು ನೇಮಿಸುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

Advertisement

ಅರಮನೆಗೆ ಬಂದ 8 ಮಂದಿಗೆ ಕೋವಿಡ್‌ ಸೋಂಕು :  ಬುಧವಾರ ಅರಮನೆಗೆ ಭೇಟಿ ನೀಡಿದ್ದ 2,006 ಪ್ರವಾಸಿಗರಲ್ಲಿ 127 ಪ್ರವಾಸಿಗರು ರ್ಯಾಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ ಮಾಡಿಸಿಕೊಂಡಿದ್ದರು. ಇವರಲ್ಲಿ 6 ಮಂದಿಗೆ ಪಾಸಿಟಿವ್‌ ಬಂದಿದೆ. ಮಂಗಳವಾರ 2,758 ಪ್ರವಾಸಿಗರು ಅರಮನೆಗೆ ಭೇಟಿ ನೀಡಿದ್ದು, 96 ಮಂದಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇವರಲ್ಲಿ ಇಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ. ಎರಡು ದಿನಗಳ ಅವಧಿಯಲ್ಲಿ 8 ಮಂದಿಗೆ ಕೋವಿಡ್‌ ಸೋಂಕು ತಗುಲಿದೆ. ಹೀಗಾಗಿ ನಮ್ಮ ಸಿಬ್ಬಂದಿ ಆರೋಗ್ಯ ದೃಷ್ಟಿಯಿಂದಲ್ಲದೆ, ಪ್ರವಾಸಿಗರ ಹಿತದೃಷ್ಟಿಯಿಂದಲೂ ಪರೀಕ್ಷೆ ಕಡ್ಡಾಯಗೊಳಿಸಿದ್ದೇವೆ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ ತಿಳಿಸಿದರು.

ಮೃಗಾಲಯದಲ್ಲೂ ರ್ಯಾಪಿಡ್‌ ಪರೀಕ್ಷೆ : ಅರಮನೆಯಂತೆ ಮೃಗಾಲಯಕ್ಕೂ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುವುದರಿಂದ ಸೋಂಕು ಹರಡುವಿಕೆಯ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಮೃಗಾಲಯ ದಲ್ಲೂ ಗುರುವಾರದಿಂದ ರ್ಯಾಪಿಡ್‌ ಆ್ಯಂಟಿಜೆನ್‌  ಟೆಸ್ಟ್‌ ಮಾಡಲಾಗುತ್ತದೆ. ಇಲ್ಲಿಯವರೆಗೆ ಮೃಗಾಲಯದ ದ್ವಾರದಲ್ಲಿ ಥರ್ಮಲ್‌ ಸ್ಕ್ಯಾನ್‌ ಮಾಡಿ, ಸ್ಯಾನಿಟೈಸರ್‌ ನೀಡಿ ಒಳಬಿಡಲಾಗುತ್ತಿತ್ತು. ಇನ್ನು ಮುಂದೆ ಮೃಗಾಲಯದಲ್ಲೂ ಮೊಬೈಲ್‌ ಟೆಸ್ಟಿಂಗ್‌ ತಂಡ ಪರೀಕ್ಷೆ ನಡೆಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next